ಟೋಲ್​ನಲ್ಲಿ ಸಿಬ್ಬಂದಿ ಹಣ ಕೇಳಿದ್ದಕ್ಕೆ ಟೋಲ್​ ಬೂತ್​ ನೆಲಸಮ ಮಾಡಿದ ಜೆಸಿಬಿ ಚಾಲಕ

|

Updated on: Jun 11, 2024 | 2:41 PM

ಟೋಲ್​ ಹಣ ಕಟ್ಟುವಂತೆ ಕೇಳಿದ್ದಕ್ಕೆ ಜೆಸಿಬಿ ಚಾಲಕನೊಬ್ಬ ಎರಡು ಟೋಲ್​ ಬೂತ್​ ಅನ್ನು ನೆಲಸಮ ಮಾಡಿರುವ ಘಟನೆ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ನಡೆದಿದೆ.ದೆಹಲಿ-ಲಕ್ನೋ ಹೆದ್ದಾರಿ ಎನ್​ಎಚ್​-9 ಪಿಲ್ಖುವಾ ಪೊಲೀಸ್​ ಠಾಣಾ ವ್ಯಾಪ್ತಿಯ ಛಿಜರಾಸಿ ಟೋಲ್ ಪ್ಲಾಜಾ ಹಾದು ಹೋಗುತ್ತಿದ್ದ ಜೆಸಿಬಿ ಡ್ರೈವರ್​ ಬಳಿ ಹಣ ಕೇಳಿದ್ದು ಆತ ಜಗಳಕ್ಕಿಳಿದಿದ್ದಾನೆ. ಬಳಿಕ ಬುಲ್ಡೋಸರ್​ನಿಂದ ಟೋಲ್​ ಪ್ಲಾಜಾವನ್ನು ನೆಲಸಮಗೊಳಿಸಿದ್ದಾನೆ.

ಟೋಲ್​ನಲ್ಲಿ ಸಿಬ್ಬಂದಿ ಹಣ ಕೇಳಿದ್ದಕ್ಕೆ ಟೋಲ್​ ಬೂತ್​ ನೆಲಸಮ ಮಾಡಿದ ಜೆಸಿಬಿ ಚಾಲಕ
Follow us on

ರಾಷ್ಟ್ರೀಯ ಹೆದ್ದಾರಿಯ ಟೋಲ್​ ಪ್ಲಾಜಾ(Toll Plaza)ಗಳಲ್ಲಿ ವಾಹನ ಸವಾರರು ಹಾಗೂ ಟೋಲ್​ ಸಿಬ್ಬಂದಿ ಜಗಳವಾಡುವುದನ್ನು ನೀವು ನೋಡಿರುತ್ತೀರಿ ಆದರೆ ಇಲ್ಲೊಂದು ಜಗಳ ಅತಿರೇಕಕ್ಕೆ ಹೋಗಿದೆ. ದೆಹಲಿ-ಲಕ್ನೋ ಹೆದ್ದಾರಿ ಎನ್​ಎಚ್​-9 ಪಿಲ್ಖುವಾ ಪೊಲೀಸ್​ ಠಾಣಾ ವ್ಯಾಪ್ತಿಯ ಛಿಜರಾಸಿ ಟೋಲ್ ಪ್ಲಾಜಾ ಹಾದು ಹೋಗುತ್ತಿದ್ದ ಜೆಸಿಬಿ ಡ್ರೈವರ್​ ಬಳಿ ಹಣ ಕೇಳಿದ್ದು ಆತ ಜಗಳಕ್ಕಿಳಿದಿದ್ದಾನೆ. ಬಳಿಕ ಬುಲ್ಡೋಸರ್​ನಿಂದ ಟೋಲ್​ ಪ್ಲಾಜಾವನ್ನು ನೆಲಸಮಗೊಳಿಸಿದ್ದಾನೆ.

ಟೋಲ್​ ಸಿಬ್ಬಂದಿ ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ, ಆತ ಟೋಲ್​ ಕೆಡಗುವ ಸಂಪೂರ್ಣ ವಿಡಿಯೋ ವೈರಲ್ ಆಗಿದೆ.
ಜೆಸಿಬಿ ಚಾಲಕ ಟೋಲ್ ಬೂತ್ ಮೂಲಕ ಹಾದುಹೋಗುತ್ತಿದ್ದ, ಹಾಗಾಗಿ ಟೋಲ್ ಸಿಬ್ಬಂದಿ ಹಣ ಕೇಳಿದ್ದಾರೆ ಅದಕ್ಕೆ ಚಾಲಕ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಟೋಲ್ ಮ್ಯಾನೇಜರ್ ಅಜಿತ್ ಚೌಧರಿ ತಿಳಿಸಿದ್ದಾರೆ.

ಜೆಸಿಬಿ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಟೋಲ್ ಬೂತ್​ಗಳು ಮುರಿದಿದ್ದು, ಅಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಒಡೆದು ಸಾಕಷ್ಟು ಹಾನಿಯಾಗಿದೆ, ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: Viral Video: ಟೋಲ್​ ಗೇಟ್​ ಸಿಬ್ಬಂದಿ ಮೇಲೆ ಕಾರು ಹರಿಸಿ ಪರಾರಿಯಾದ ವ್ಯಕ್ತಿ; ಸಿಸಿಟಿವಿಯಲ್ಲಿ ಸೆರೆ

ಜೂನ್​ 11ರಂದು ಪಿಲ್ಖುವಾ ಪೊಲೀಸ್​ ಠಾಣೆ ವ್ಯಾಪ್ತಿಯ ಟೋಲ್ ಪ್ಲಾಜಾದಲ್ಲಿ ಜೆಸಿಬಿ ಚಾಲಕ ಟೋಲ್ ಬೂತ್ ಧ್ವಂಸಗೊಳಿಸಿದ್ದು, ಪಿಲ್ಕೂವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಟೋಲ್ ಧ್ವಂಸಗೊಳಿಸಿ ಹಣ ಪಾವತಿಸದ ಜೆಸಿಬಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ, ಜೆಸಿಬಿಯನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ