Viral Video: ಟೋಲ್ ಗೇಟ್ ಸಿಬ್ಬಂದಿ ಮೇಲೆ ಕಾರು ಹರಿಸಿ ಪರಾರಿಯಾದ ವ್ಯಕ್ತಿ; ಸಿಸಿಟಿವಿಯಲ್ಲಿ ಸೆರೆ
@SachinGuptaUP ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಾರು ಚಾಲಕ ಗಾಜಿಯಾಬಾದ್‌ನಿಂದ ಹಾಪುರ್‌ಗೆ ತೆರಳುತ್ತಿದ್ದು, ಟೋಲ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಟೋಲ್ ಸಿಬ್ಬಂದಿ ಮೇಲೆ ಕಾರು ಹರಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ವೇಗವಾಗಿ ಬಂದ ಕಾರು ಟೋಲ್ ಪ್ಲಾಜಾ ನೌಕರನಿಗೆ ಡಿಕ್ಕಿ ಹೊಡೆದಿದೆ. ಟೋಲ್ ಬೂತ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ದೆಹಲಿ-ಲಖನೌ ಹೆದ್ದಾರಿ-9 ರ ಪಿಲ್ಖುವಾ ಕೊಟ್ವಾಲಿ ಪ್ರದೇಶದ ಛಿಜರ್ಸಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ವರದಿಯಾಗಿದೆ. ಹೇಮರಾಜ್ ಎಂದು ಗುರುತಿಸಲಾದ ಟೋಲ್ ಪ್ಲಾಜಾ ಉದ್ಯೋಗಿಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ . ಗುರುವಾರ (ಜೂನ್ 6) ಮಧ್ಯರಾತ್ರಿಯ ನಡುವೆ ಈ ಘಟನೆ ವರದಿಯಾಗಿದೆ.
@SachinGuptaUP ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕಾರು ಚಾಲಕ ಗಾಜಿಯಾಬಾದ್‌ನಿಂದ ಹಾಪುರ್‌ಗೆ ತೆರಳುತ್ತಿದ್ದು, ಟೋಲ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಹೇಮರಾಜ್ ಮೇಲೆ ಕಾರು ಹರಿಸಿದ್ದಾನೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
यूपी : दिल्ली-लखनऊ हाईवे पर हापुड़ जिले में टोल प्लाजा पर कल रात तेज रफ्तार कार ने टोल कर्मचारी हेमराज को हवा में उड़ा दिया। टोलकर्मी की हालत गंभीर है, कार सवार की तलाश जारी है। pic.twitter.com/Tak5Zscq1A
— Sachin Gupta (@SachinGuptaUP) June 7, 2024
ಇದನ್ನೂ ಓದಿ: ಬ್ಯಾಲೆನ್ಸ್ ತಪ್ಪಿ ಬಸ್ಸಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಕಂಡಕ್ಟರ್; ವಿಡಿಯೋ ವೈರಲ್
ಭಾರೀ ಹೊಡೆತದಿಂದಾಗಿ ಹೇಮರಾಜ್ ಗಾಳಿಯಲ್ಲಿ ಹಾರಿ ರಸ್ತೆಯಲ್ಲಿ ಬಿದ್ದಿದ್ದಾನೆ. ತಕ್ಷಣ, ಇತರ ಟೋಲ್ ಕಾರ್ಮಿಕರು ಅವನ ಬಳಿಗೆ ಧಾವಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನಿಖೆ ಆರಂಭಿಸಲಾಗಿದ್ದು, ತಲೆಮರೆಸಿಕೊಂಡಿರುವ ಕಾರು ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Sat, 8 June 24