Viral Video: ಬ್ಯಾಲೆನ್ಸ್‌ ತಪ್ಪಿ ಬಸ್ಸಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಕಂಡಕ್ಟರ್‌; ವಿಡಿಯೋ ವೈರಲ್‌ 

ಒಂದೇ ಒಂದು ಸೆಕೆಂಡು ತಡವಾಗುತ್ತಿದ್ದರೂ ಅಲ್ಲಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಕಂಡಕ್ಟರ್‌ ತೋರಿದ ಸಮಯಪ್ರಜ್ಞೆ ವ್ಯಕ್ತಿಯೊಬ್ಬರ ಜೀವವನ್ನೇ ಉಳಿಸಿದೆ. ಹೌದು  ಬ್ಯಾಲೆನ್ಸ್‌ ತಪ್ಪಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಬೀಳುತ್ತಿದ್ದ ಪ್ರಯಾಣಿಕರೊಬ್ಬರನ್ನು ಬಸ್‌ ಕಂಡಕ್ಟರ್‌ ರಕ್ಷಿಸುವ ಮೂಲಕ ಅಮೂಲ್ಯ ಜೀವವೊಂದನ್ನು ಕಾಪಾಡಿದ್ದಾರೆ. ಈ ಕುರಿತ ವಿಡಿಯೊವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

Viral Video: ಬ್ಯಾಲೆನ್ಸ್‌ ತಪ್ಪಿ ಬಸ್ಸಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಕಂಡಕ್ಟರ್‌; ವಿಡಿಯೋ ವೈರಲ್‌ 
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 07, 2024 | 5:42 PM

ದೇವರು ಒಮ್ಮೊಮ್ಮೆ ಮನುಷ್ಯರ ರೂಪದಲ್ಲಿ ಬಂದು ನಮಗೆ ಸಹಾಯ ಮಾಡುತ್ತಾರೆ ಎಂದು ಹಿರಿಯರು ಹೇಳುವ ಮಾತೊಂದಿದೆ. ಇಲ್ಲೊಂದು ವ್ಯಕ್ತಿಯ ಜೀವನದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದ್ದು, ಕಂಡಕ್ಟರ್‌ ಒಬ್ಬರು ದೇವರ ರೂಪದಲ್ಲಿ ಬಂದು ಆತನ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಹೌದು ವ್ಯಕ್ತಿಯೊಬ್ಬ ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿರುವ ವೇಳೆ ಆಯ ತಪ್ಪಿ ಕೆಳಗೆ ಬೀಳುತ್ತಾನೆ. ಅಲ್ಲೇ ಇದ್ದ ಕಂಡಕ್ಟರ್‌ ಆ ತಕ್ಷಣ ದೇವರಂತೆ ಬಂದು ಆ ವ್ಯಕ್ತಿಯನ್ನು ಕೆಳಗೆ ಬೀಳದಂತೆ ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು,  ಬಸ್‌ ಸಿಬ್ಬಂದಿಯ ವೀರೋಚಿತ ನಡೆಗೆ ಪ್ರಶಂಸೆ  ವ್ಯಕ್ತವಾಗಿದೆ.

ಈ ಘಟನೆ ಕೇರಳದಲ್ಲಿ ನಡೆದಿದ್ದು, ಇಲ್ಲಿನ ಸರ್ಕಾರಿ (ಕೆಎಸ್‌ಆರ್‌ಟಿಸಿ) ಬಸ್‌ ಒಂದರಲ್ಲಿ ಡ್ರೈವರ್‌ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ ವೇಳೆ ಅಲ್ಲೇ ಬಾಗಿಲ ಬದಿಯಲ್ಲಿ ನಿಂತಿದ್ದ ಪ್ರಯಾಣಿಕನೊಬ್ಬ ಆಯಾ ತಪ್ಪಿ ಕೆಳಗೆ ಬೀಳುತ್ತಾರೆ. ಆ ತಕ್ಷಣ ದೇವರಂತೆ ಬಂದು ಕಂಡಕ್ಟರ್‌ ಪ್ರಯಾಣಿಕನ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಬಸ್ಸಿನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕುರಿತ ವಿಡಿಯೋವೊಂದನ್ನು  Ghar ke kalesh ಎಂಬ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕೇರಳದ ಬಸ್‌ ಒಂದರಲ್ಲಿ ಆಯತಪ್ಪಿ ಕೆಳಗೆ ಬೀಳುತ್ತಿದ್ದಂತ ವ್ಯಕ್ತಿಯನ್ನು ರಕ್ಷಿಸಿದ ಕಂಡಕ್ಟರ್‌” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್‌ ಆಗಿರುವ ವಿಡಿಯೋದಲ್ಲಿ ಬಸ್ಸಿನಲ್ಲಿ ನಿಂತು ಪ್ರಯಾಣಿಸುತ್ತಿದ್ದ ವೇಳೆ ಡ್ರೈವರ್‌ ತುರ್ತು ಬ್ರೇಕ್‌ ಹಾಕಿದಾಗ ಕಂಡಕ್ಟರ್‌ ಪಕ್ಕದಲ್ಲಿ ನಿಂತಿದ್ದ ಪ್ರಯಾಣಿಕನೊಬ್ಬ ಬ್ಯಾಲೆನ್ಸ್‌ ತಪ್ಪಿ ಬಸ್ಸಿನಿಂದ ಕೆಳಗೆ ಬೀಳುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಆ ತಕ್ಷಣ ಹಿಂದೆ ಮುಂದೆ ನೋಡದೆ ತ್ವರಿತವಾಗಿ ಪ್ರತಿಕ್ರಿಯಿಸಿದ ಕಂಡಕ್ಟರ್‌ ಸೂಪರ್‌ ಹೀರೋನಂತೆ ಪ್ರಯಾಣಿಕನ ಕೈ ಹಿಡಿದು ಮೇಲಕ್ಕೆತ್ತುವ ಮೂಲಕ ಅಮೂಲ್ಯ ಜೀವವೊಂದನ್ನು ಕಾಪಾಡಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಪಂಡಿತ್​ ಕುಟುಂಬಕ್ಕೆ ಮನೆ ಕಟ್ಟಲು ಬಿಡದೆ ಹಿಂಸೆ ನೀಡಿದ ಸ್ಥಳೀಯ ಮುಸ್ಲಿಮರು

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಇವರು ನಮ್ಮ  ʼದೇಸಿ ಸ್ಪೈಡರ್‌ ಮ್ಯಾನ್‌ʼ ಎನ್ನುತ್ತಾ ಕಂಡಕ್ಟರ್‌ನ ವೀರೋಚಿತ ನಡೆಯನ್ನು ಪ್ರಶಂಸಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ