Video: ಹಿಂದೂಗಳ ಪ್ರಾಬಲ್ಯವಿದ್ದ ಸಿಯಾಲ್ಕೋಟ್ ಪಾಕ್ ತೆಕ್ಕೆಗೆ ಬೀಳಲು ಹಿಂದುಗಳೇ ಕಾರಣ, ಮತದಾನ ಎಷ್ಟು ಮುಖ್ಯ ನೋಡಿ
ಇಂದಿಗೂ ಮತದಾನ ಎಂದರೆ ಅದೆಷ್ಟೋ ಜನರು ಅಸಡ್ಡೆ ತೋರುತ್ತಾರೆ. ನಾವು ಚಲಾಯಿಸುವ ಒಂದು ಮತ ಎಷ್ಟು ಅಮೂಲ್ಯವಾದದ್ದು ಎಂಬುದನ್ನು ಹಿರಿಯ ಪತ್ರಕರ್ತ ಪ್ರದೀಪ್ ಸಿಂಗ್ ವಿವರಿಸಿದ್ದು, ದೇಶ ವಿಭಜನೆಯ ಸಂದರ್ಭದಲ್ಲಿ ಹಿಂದೂಗಳ ಪ್ರಾಬಲ್ಯ ಹೆಚ್ಚಿದ್ದ ಸಿಯಾಲ್ಕೋಟ್ ಪಾಕಿಸ್ತಾನಕ್ಕೆ ಸೇರಬೇಕೋ ಅಥವಾ ಭಾರತಕ್ಕೆ ಸೇರಬೇಕೋ ಎಂದು ಜನಭಿಪ್ರಾಯಕ್ಕೆ ಬಿಡಲಾಗಿತ್ತು. ಆ ಜನಾಭಿಪ್ರಾಯದ ಮತದಾನದ ಸಂದರ್ಭದಲ್ಲಿ ಹಿಂದೂಗಳು ತೋರಿದ ಬೇಜವಾಬ್ದಾರಿತನವು ಸಿಯಾಲ್ಕೋಟ್ ಎಂಬ ಪ್ರದೇಶ ಪಾಕಿಸ್ತಾನದ ತೆಕ್ಕೆಗೆ ಬೀಳಲು ಕಾರಣವಾಯಿತಂತೆ. ಅದು ಹೇಗೆ ಎಂಬುದನ್ನು ನೋಡೋಣ ಬನ್ನಿ
ಆಗಸ್ಟ್ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವುದರ ಜೊತೆಗೆ ಅಖಂಡ ಭಾರತವನ್ನು ಧರ್ಮದ ಆಧಾರದಲ್ಲಿ ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಸ್ವತಂತ್ರ ದೇಶಗಳಾಗಿ ವಿಭಜಿಸಲಾಯಿತು. ಆದರೆ ಪಂಜಾಬ್ ಪ್ರಾಂತ್ಯದಲ್ಲಿದ್ದ ಸಿಯಾಲ್ಕೋಟ್‌ನಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದ್ದ ಕಾರಣ ಈ ಪ್ರದೇಶವನ್ನು ಯಾವ ದೇಶಕ್ಕೆ ನೀಡುವುದು ಎಂಬ ಗೊಂದಲ ಹುಟ್ಟಿತ್ತು. ಇಲ್ಲಿನ ಪ್ರಮುಖ ನಾಯಕರಾದ ಗೋಪಿನಾಥ್ ಬಾರ್ಡೋಲಿ ಅವರು ರಾಷ್ಟ್ರ ವಿಭಜನೆಯ ಸಮಯದಲ್ಲಿ ಸಿಯಾಲ್ಕೋಟ್ ಭಾರತದಲ್ಲಿ ಉಳಿಯಬೇಕೆಂದು ಬಯಸಿದ್ದರು. ಆದರೆ ಆ ಅವಧಿಯಲ್ಲಿ ಸಿಯಾಲ್ಕೋಟ್‌ನ ಬಹುಪಾಲು ಜನರು ಹಿಂದೂಗಳಿದ್ದರಿಂದ ಈ ಪ್ರದೇಶ ಯಾವ ದೇಶಕ್ಕೆ ಸೇರಬೇಕು ಎಂಬುದನ್ನು ಜನಾಭಿಪ್ರಾಯಕ್ಕೆ ಬಿಡಲಾಯಿತು. ಈ ಜನಾಭಿಪ್ರಾಯವನ್ನು ಮತದಾನದ ಮೂಲಕ ನಡೆಸಲಾಯಿತು. ಈ ಒಂದು ಪ್ರಮುಖ ಮತದಾನದಲ್ಲಿ ಅಲ್ಲಿನ ಬಹುಪಾಲು ಹಿಂದೂಗಳು ತೋರಿದ ಬೇಜವಾಬ್ದಾರಿತನದಿಂದ ಸಿಯಾಲ್ಕೋಟ್ ಸುಲಭವಾಗಿ ಪಾಕಿಸ್ತಾನದ ಕೈ ಸೇರಿತು. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿಯಾಲ್ಕೋಟ್ ಪಾಕಿಸ್ತಾನಕ್ಕೆ ಸೇರಲು ಹಿಂದೂಗಳು ಹೇಗೆ ಕಾರಣವಾದರು?
ಸಿಯಾಲ್ಕೋಟ್ ಭಾರತಕ್ಕೆ ಸೇರಬೇಕೋ ಅಥವಾ ಪಾಕಿಸ್ತಾನಕ್ಕೆ ಸೇರಬೇಕೋ ಎಂಬ ನಿರ್ಧಾರವನ್ನು ಅಲ್ಲಿನ ಜನಾಭಿಪ್ರಾಯಕ್ಕೆ ಬಿಡಲಾಯಿತು . ಮತ್ತು ಇದಕ್ಕಾಗಿ ಮತದಾನವು ನಡೆಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಮುಸ್ಲಿಮರು ಮತದಾನದ ದಿನದಂದು ಬೇಗನೇ ಎದ್ದು ಮತದಾನದ ಕೇಂದ್ರದ ಬಳಿ ಹೋಗಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತರು. ಆದರೆ ಅಲ್ಲಿನ ಹಿಂದೂಗಳು ನಿಧಾನಕ್ಕೆ ಹೋದರಾಯಿತು ಎಂದು ಬೇಜವಬ್ದಾರಿತನವನ್ನು ತೋರಿದರು. ಮತ್ತು ಮತದಾನ ಮಾಡಲು ಹೋದಾಗ ಅಲ್ಲಿದ್ದ ಮುಸ್ಲಿಮರು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿ ಅಯ್ಯೋ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ, ನಿಧಾನಕ್ಕೆ ಮತದಾನ ಚಲಾಯಿಸಿದರಾಯಿತು ಎಂದು ವಾಪಾಸ್ ಹೋಗುತ್ತಾರೆ. ಹೀಗೆ ಅಲ್ಲಿನ ಅರ್ಧಕ್ಕರ್ದ ಹಿಂದೂಗಳು ಮತದಾನವನ್ನೇ ಮಾಡುವುದಿಲ್ಲ. ಈ ಜನಾಭಿಪ್ರಾಯದ ಫಲಿತಾಂಶದಲ್ಲಿ 55 ಸಾವಿರ ಮತಗಳ ಅಗಾಧ ಬೆಂಬಲದಿಂದಾಗಿ, ಹಿಂದೂಗಳ ನ್ಯೂನತೆಯಿಂದಾಗಿ ಸಿಯಾಲ್ಕೋಟ್ ಅನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
If you are Hindu, Must watch and SHARE. We need 1000+ Reposts for this post.
Understand the value of the vote from this story! Sialkot was a Hindu dominated area. Still it was decided whether to keep it in India or in Pakistan, it would be decided by referendum. When voting… pic.twitter.com/dOAKH3Ge6k
— Baba Banaras™ (@RealBababanaras) June 5, 2024
ಆ ಅವಧಿಯಲ್ಲಿ ಸಿಯಾಲ್ಕೋಟ್ ಪ್ರದೇಶದಲ್ಲಿ 2 ಲಕ್ಷದ 31 ಸಾವಿರ ಹಿಂದೂಗಳಿದ್ದರು. ಅದರಲ್ಲಿ ಒಂದು ಲಕ್ಷದಷ್ಟು ಹಿಂದೂಗಳು ಮತದಾನದಿಂದ ದೂರ ಉಳಿದಿದ್ದರು. ಈ ಒಂದು ಕಾರಣದಿಂದಾಗಿ ಹಿಂದೂಗಳ ಪ್ರಾಬಲ್ಯ ಹೆಚ್ಚಿದ್ದ ಸಿಯಾಲ್ಕೋಟ್ ಪಾಕಿಸ್ತಾನಕ್ಕೆ ಸೇರಿತು. ಆ ನಂತರ ಅಲ್ಲಿದ್ದ ಹಿಂದೂಗಳ ಮಾರಣಹೋಮದಿಂದಾಗಿ ಕೆಲ ವರ್ಷದ ಬಳಿಕ ಅಲ್ಲಿದ್ದ ಹಿಂದೂಗಳ ಸಂಖ್ಯೆ 2 ಲಕ್ಷದಿಂದ 10 ಸಾವಿರಕ್ಕೆ ಇಳಿಯುತ್ತದೆ. ಪುನಃ 5 ವರ್ಷದ ಬಳಿಕ ಅಲ್ಲಿನ ಹಿಂದೂಗಳ ಜನಸಂಖ್ಯೆ 500 ಕ್ಕೆ ಇಳಿಯಿತು. ಅವತ್ತು ಅಲ್ಲಿನ ಪ್ರತಿಯೊಬ್ಬ ಹಿಂದೂಗಳು ಒಗ್ಗಟ್ಟಾಗಿ ಮತದಾನ ಮಾಡಿದ್ದರೆ ಇಂದು ಸಿಯಾಲ್ಕೋಟ್ ನಮ್ಮ ಭಾರತದಲ್ಲಿರುತ್ತಿತ್ತು.
ಇದನ್ನೂ ಓದಿ: ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಮೊಬೈಲ್ ಸ್ವಿಚ್-ಆಫ್ ಮಾಡಿದ್ರಾ ಶಾಸಕ ಪ್ರದೀಪ್ ಈಶ್ವರ್?
RealBababanaras ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ನಿಜ ಹಿಂದೂಗಳು ಆ ಸಮಯದಲ್ಲಿ ಒಗ್ಗಟ್ಟಾಗಿದ್ದರೆ ಸಿಯಾಲ್ಕೋಟ್ ನಮ್ಮ ದೇಶದಲ್ಲಿರುತ್ತಿತ್ತು ಎಂದು ನೆಟ್ಟಿಗರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ