Viral Video: ನಾಯಿ ಮರಿಗಳನ್ನು ಕಸದ ತೊಟ್ಟಿಗೆ ಬಿಸಾಕಿದ ಮಹಿಳೆ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ
ವಿಡಿಯೋದಲ್ಲಿ ಮಹಿಳೆ ಎರಡು ನಾಯಿ ಮರಿಗಳನ್ನು ಕಸದ ತೊಟ್ಟಿಗೆ ಬಿಸಾಕುತ್ತಿರುವುದನ್ನು ಕಾಣಬಹುದು. ನಾಯಿ ಮರಿಗಳನ್ನು ಸ್ಥಳೀಯರು ರಕ್ಷಿಸಿದ್ದು, ಪ್ರಾಣಿಹಿಂಸೆ ಕಾಯ್ದೆಯಡಿ ಮಹಿಳೆ ವಿರುದ್ದ ಕೇಸು ದಾಖಲಾಗಿದೆ. ಜೂನ್ 2 ರಂದು (ಸ್ಥಳೀಯ ಕಾಲಮಾನ) ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಅಮೆರಿಕಾದ ಲೂಸಿಯಾನದ ಮಹಿಳೆಯೊಬ್ಬಳು ಎರಡು ನಾಯಿಮರಿಗಳನ್ನು ರಸ್ತೆ ಬದಿಯ ಕಸದ ತೊಟ್ಟಿಗೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆ ಮರಿಗಳನ್ನು ಕಸದ ತೊಟ್ಟಿಗೆ ಎಸೆದಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ನಾಯಿ ಮರಿಗಳನ್ನು ಸ್ಥಳೀಯರು ರಕ್ಷಿಸಿದ್ದು, ಪ್ರಾಣಿಹಿಂಸೆ ಕಾಯ್ದೆಯಡಿ ಮಹಿಳೆ ವಿರುದ್ದ ಕೇಸು ದಾಖಲಾಗಿದೆ. ಜೂನ್ 2 ರಂದು (ಸ್ಥಳೀಯ ಕಾಲಮಾನ) ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
St Landry Crime Stoppers ಎಂಬ ಫೇಸ್ ಬುಕ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ಎರಡು ನಾಯಿ ಮರಿಗಳನ್ನು ಕಸದ ತೊಟ್ಟಿಗೆ ಬಿಸಾಕುತ್ತಿರುವುದನ್ನು ಕಾಣಬಹುದು. ಇದಲ್ಲದೇ ಆಕೆಯೊಂದಿಗೆ ಇನ್ನೊಬ್ಬ ಪುರುಷನಿರುವುದನ್ನು ಕೂಡ ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಡಿಎನ್‌ಎ ಪರೀಕ್ಷೆಯಿಂದ ಮುರಿದುಬಿತ್ತು 18 ವರ್ಷದ ದಾಂಪತ್ಯ ಜೀವನ
ಇವರಿಬ್ಬರನ್ನು ಗುರುತಿಸಿ ಪ್ರಾಣಿ ಹಿಂಸೆ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. WBRZ-TV ಯಲ್ಲಿನ ವರದಿಯ ಪ್ರಕಾರ, ಜಾಸ್ಮಿನ್ ಮೌಂಟನ್ ಮತ್ತು ಕೆಂಡಾಲ್ ಟೈಲರ್ ಅವರನ್ನು ಸೇಂಟ್ ಲ್ಯಾಂಡ್ರಿ ಪ್ಯಾರಿಷ್ ಜೈಲಿಗೆ ಹಾಕಲಾಗಿದೆ. ಆಘಾತಕಾರಿ ಘಟನೆ ನಡೆದ ಕೂಡಲೇ ನೆರೆಹೊರೆಯವರು ನಾಯಿಮರಿಗಳನ್ನು ತೊಟ್ಟಿಯಿಂದ ಹೊರತೆಗೆದು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ