Viral Video: ನೀರಿನಲ್ಲಿ ಮುಳುಗುತ್ತಿದ್ದ  ತನ್ನ ಮುದ್ದು ಕಂದಮ್ಮನನ್ನು  ರಕ್ಷಿಸಿದ ತಾಯಿ ಆನೆ 

ತಾಯಿಯ ಪ್ರೀತಿಗಿಂತ ಮಿಗಿಲಾದುದು ಈ ಭೂಮಿ ಮೇಲೆ ಯಾವುದು ಇಲ್ಲ. ಮನುಷ್ಯರು ಮಾತ್ರವಲ್ಲದೇ   ಪ್ರಾಣಿ ಪಕ್ಷಿಗಳಲ್ಲೂ ಮಾತೃ ಪ್ರೇಮ, ಅಮ್ಮನ ಮಮತೆಯನ್ನು ಕಾಣಬಹುದು. ಹೀಗೆ ತಾಯಿ ಮಮತೆಗೆ ಸಾಕ್ಷಿಯಾದ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಇದೀಗ ಅಂತಹದೇ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದ್ದು, ನೀರಿಗೆ ಬಿದ್ದ ತನ್ನ ಕಂದಮ್ಮನನ್ನು ತಾಯಿ ಆನೆ ರಕ್ಷಿಸುವ ಪರಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

Viral Video: ನೀರಿನಲ್ಲಿ ಮುಳುಗುತ್ತಿದ್ದ  ತನ್ನ ಮುದ್ದು ಕಂದಮ್ಮನನ್ನು  ರಕ್ಷಿಸಿದ ತಾಯಿ ಆನೆ 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 05, 2024 | 3:47 PM

ಅಮ್ಮನ ಪ್ರೀತಿ ನಿಷ್ಕಲ್ಮಶವಾದುದು. ಆಕೆ  ಮಕ್ಕಳ ರಕ್ಷಣೆಗಾಗಿ ತನ್ನ ಜೀವವನ್ನೇ ಮುಡಿಪಾಗಿಡುತ್ತಾಳೆ. ಮನುಷ್ಯರು ಮಾತ್ರವಲ್ಲದೇ   ಪ್ರಾಣಿ ಪಕ್ಷಿಗಳಲ್ಲೂ ಮಾತೃ ಪ್ರೇಮ, ಅಮ್ಮನ ಮಮತೆಯನ್ನು ಕಾಣಬಹುದು. ಅವುಗಳು ಕೂಡಾ ತಮ್ಮ ಮರಿಗಳ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಲು ಕೂಡಾ ಸಿದ್ಧವಿರುತ್ತವೆ. ತಾಯಿ ಮಗುವಿನ ಇಂತಹ ಸುಂದರ ಬಾಂಧವ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಸಿಗುತ್ತವೆ. ಇದೀಗ ಅಂತಹದೇ ಮನಕಲಕುವ ವಿಡಿಯೋವೊಂದು ವೈರಲ್ ಆಗಿದ್ದು, ನೀರಿಗೆ ಬಿದ್ದ ತನ್ನ ಕಂದಮ್ಮನನ್ನು ತಾಯಿ ಆನೆ ರಕ್ಷಿಸುವ ಪರಿ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ಪವನ್ ಯಾದವ್ (@pavan_0yadav) ಎಂಬವರು ಈ ಭಾವನಾತ್ಮಕ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ತಾಯಿ ಆನೆ ತನ್ನ ಬುದ್ಧಿವಂತಿಕೆಯಿಂದ ಮರಿಯಾನೆಯನ್ನು ರಕ್ಷಿಸುವಂತಹ ಪರಿಯನ್ನು ಕಾಣಬಹುದು. ನೀರು ಕುಡಿಯಲೆಂದು ಹೊಂಡಕ್ಕೆ ಇಳಿದಂತಹ ಪುಟಾಣಿ ಆನೆಯೊಂದು ಹೊಂಡದಿಂದ ಹೊರಬರಲಾರದೆ ಪರದಾಡುತ್ತಿರುತ್ತದೆ. ತಾಯಿ ಆನೆ ಏನೇ ಮಾಡಿದರೂ ಮರಿಯಾನೆಗೆ ಮೇಲೆ ಬರಲು ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಸ್ವತಃ ನೀರಿಗಿಳಿದ ತಾಯಿ ಆನೆ ತನ್ನ ಬುದ್ಧಿವಂತಿಕೆಯಿಂದ ಮರಿಯಾನೆಯನ್ನು ರಕ್ಷಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಟ್ಕಾ ತಿಂದು ಯುವತಿಯ ಮೇಲೆ ಉಗಿದ ಆಟೋ ಚಾಲಕ; ನೆಟ್ಟಿಗರಿಂದ ಭಾರೀ ಆಕ್ರೋಶ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 18.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಜಗತ್ತಿನಲ್ಲಿ ತಾಯಿ ಪ್ರೀತಿಗಿಂತ ಮಿಗಿಲಾದುದು ಯಾವುದು ಇಲ್ಲ ಎಂದು ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ