ಆನ್​ಲೈನ್​ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್​ ಕಾಡಿಗೆ ಹೋದ ಯುವತಿ

ಪ್ರೀತಿಗೆ ಯಾವುದೇ ಭಾಷೆ, ಧರ್ಮ, ಬಣ್ಣದ ಹಂಗಿಲ್ಲ, ಯಾರಲ್ಲಿ ಬೇಕಾದರೂ ಪ್ರೀತಿಯ ಮೊಳಕೆಯೊಡೆಯಬಹುದು, ಹಾಗೆಯೇ ಆಸ್ಟ್ರೇಲಿಯಾದ ಯುವತಿಯೊಬ್ಬಳು ಅಮೇಜಾನ್​ ಕಾಡಿನಲ್ಲಿರುವ ವ್ಯಕ್ತಿಯನ್ನು ಪ್ರೀತಿ ಮಾಡಿದ್ದು, ಉದ್ಯೋಗ ತೊರೆದು ಆಕೆ ಕಾಡಿಗೆ ಹೋಗಿರುವ ಕತೆ ಇದು.

ಆನ್​ಲೈನ್​ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್​ ಕಾಡಿಗೆ ಹೋದ ಯುವತಿ
Follow us
ನಯನಾ ರಾಜೀವ್
|

Updated on:Jun 06, 2024 | 11:19 AM

ಭಾಷೆ, ಧರ್ಮ, ಅಂತಸ್ತು ಎಲ್ಲವನ್ನೂ ಮೀರಿದ್ದು ಪ್ರೀತಿ ಎಂಬುದು ಅಕ್ಷರಶಃ ಸತ್ಯ. ಆಸ್ಟ್ರೇಲಿಯಾದ ಯುವತಿಯೊಬ್ಬಳ ಆನ್​ಲೈನ್​ ಮೂಲಕ ಅರಳಿದ ಪ್ರೇಮ ಕಥೆಯು ಆಕೆಯನ್ನು ಅಮೇಜಾನ್​ ಕಾಡಿಗೆ ತಂದು ಬಿಟ್ಟಿತ್ತು. ಆಕೆ ಇನ್​ಸ್ಟಾಗ್ರಾಂ ನೋಡುತ್ತಿರುವಾಗ ಓರ್ವ ಯುವಕನ ಪ್ರೊಪೈಲ್​ ಕಣ್ಣಿಗೆ ಬಿದ್ದಿತ್ತು, ಆತ ಆಕೆಯಿಂದ ಸಾವಿರಾರು ಕಿಲೋಮೀಟರ್​ ದೂರದ ಅಮೇಜಾನ್ ಕಾಡಿನಲ್ಲಿ ವಾಸಿಸುತ್ತಿದ್ದ. ಆಕೆ ನಗರದಲ್ಲಿ ವಾಸವಿದ್ದಳು.

ಜೀವನಶೈಲಿ, ಬಾಷೆ, ಆಚಾರ ವಿಚಾರ ಎಲ್ಲವೂ ಬೇರೆ ಬೇರೆ, ಆದರೆ ಆತನನ್ನು ಆಕೆ ತುಂಬಾ ಇಷ್ಟಪಟ್ಟಳು. ಫಾಲೋ ರಿಕ್ವೆಸ್ಟ್​ ಕಳುಹಿಸಿದ ತಕ್ಷಣ ಆ ಕಡೆಯಿಂದ ಅಕ್ಸೆಪ್ಟ್​ ಆಗಿತ್ತು. ಆಕೆಯ ಖುಷಿಗೆ ಪಾರವೇ ಇರಲಿಲ್ಲ.

ಭಾಷೆ ಅರ್ಥವಾಗದ ಕಾರಣ ಅವರು ವಿಡಿಯೋ ಕಾಲ್​ ಮೂಲಕ ನೋಡಿ ಸಂಕೇತ ಭಾಷೆ ಮೂಲಕ ಮಾತನಾಡುತ್ತಿದ್ದರು. ಆಕೆಯ ಉದ್ಯೋಗವನ್ನು ಬಿಟ್ಟು ಆತನೊಂದಿಗೆ ಇರಲು ಬಯಸಿದ್ದಳು, ಇದನ್ನು ಆತನಿಗೂ ಹೇಳಿ ರಾತ್ರೋ ರಾತ್ರಿ ಹೊರಟೇ ಬಿಟ್ಟಳು.

ಮತ್ತಷ್ಟು ಓದಿ: Viral Video: ನಾಯಿ ಮರಿಗಳನ್ನು ಕಸದ ತೊಟ್ಟಿಗೆ ಬಿಸಾಕಿದ ಮಹಿಳೆ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ದಿ ಸನ್​ ವೆಬ್​ಸೈಟ್​ ವರದಿ ಪ್ರಕಾರ, ಜೋರ್ಡಾನ್​ ಕ್ವೀನ್ಸ್​ಲೆಂಡ್​ನಲ್ಲಿ ಆಕೆ ವಾಸವಿದ್ದಳು, ಡಿಸೆಂಬರ್​ನಲ್ಲಿ ಅವರಿಬ್ಬರು ಪರಿಚಯವಾಗಿದ್ದು, ನಾಲ್ಕು ತಿಂಗಳಲ್ಲೇ ಆಕೆ ಅಲ್ಲಿಗೆ ಹೊರಟಿದ್ದಳು.

ಆತ ಅಮೇಜಾನ್​ ಕಾಡಿನಲ್ಲಿ ಪ್ರವಾಸಿಗರಿಗೆ ಗೈಡ್​ ಆಗಿ ಕೆಲಸ ಮಾಡುತ್ತಿದ್ದ, ಇಬ್ಬರೂ ಅರ್ಜೆಂಟೀನಾ, ಪೆರು, ಬ್ರೆಜಿಲ್ ಮೊದಲಾದ ದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದರು.

ಯುವಕನ ಕುಟುಂಬವು ಅವನನ್ನು ಪೂರ್ಣ ಹೃದಯದಿಂದ ಸ್ವಾಗತಿಸಿತು. ಎರಡು ವಾರಗಳ ಪ್ರವಾಸ ಮಾಡಿದರು. ಜೋರ್ಡಾನ್ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದಾಗ, ಅವಳ ಕಣ್ಣಲ್ಲಿ ನೀರು ತುಂಬಿತ್ತು. ಆಕೆ ಮತ್ತೆ ಈಕ್ವೆಡಾರ್​ಗೆ ಹಿಂದಿರುಗಿದ್ದು ಕೆಲ ಸಮಯ ಅಲ್ಲಿದ್ದು ಮತ್ತೆ ವಾಪಸಾಗಲಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Thu, 6 June 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು