Viral Video: ಸಿಗ್ನಲ್ ಜಂಪ್; 4 ಪಲ್ಟಿ ಹೊಡೆದ ಕಾರು, ಭೀಕರ ಅಪಘಾತದ ವಿಡಿಯೋ ವೈರಲ್
ಟ್ರಾಫಿಕ್ ಪೊಲೀಸ್ ಪೇದೆ ಹಾಗೂ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಾಲಕ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಹೈದರಾಬಾದ್: ಸಿಗ್ನಲ್ ಜಂಪ್ ಮಾಡಿದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು 4 ಬಾರಿ ಪಲ್ಟಿ ಹೊಡೆದ ಘಟನೆ ಹೈದಾರಾಬಾದ್‌ನ ಸಿಕಂದರಾಬಾದ್ ಕ್ಲಬ್ ಬಳಿ ಸಂಭವಿಸಿದೆ. ಈ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸಿಗ್ನಲ್ ಜಂಪ್ ಮಾಡಿದ ಕಪ್ಪು ಬಣ್ಣದ ಕಿಯಾ ಮುಂಭಾಗದಿಂದ ಬಂದ ಬಿಳಿ ಟೊಯೊಟಾ ಇನ್ನೋವಾ ಕಾರಿಗೆ ಡಿಕ್ಕಿಯಾಗಿ ನಾಲ್ಕು ಪಲ್ಟಿ ಹೊಡೆದಿದೆ.
@priyathosh6447 ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ಜೂನ್ 6ರಂದು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಇಲ್ಲಿಯವರೆಗೆ ಮೂರು ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ದೃಶ್ಯಾ ನೋಡಿದಾಕ್ಷಣ ಒಂದು ಕ್ಷಣ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ.
ಭೀಕರ ಅಪಘಾತದ ವೈರಲ್ ವಿಡಿಯೋ ಇಲ್ಲಿದೆ ನೋಡಿ:
A Speeding car jumps a Red Signal, lost control and flipped over several times after hitting another car near #Secunderabad Club, in #Hyderabad. Luckily nobody was injured in the car, sustained minor injuries only. #CarAccident #RoadAccident #RoadSafety #Overturned #Accident pic.twitter.com/zNL7qKqcFw
— Priyathosh Agnihamsa (@priyathosh6447) June 6, 2024
ಇದನ್ನೂ ಓದಿ: ‘ಡ್ರೀಮ್ ಗರ್ಲ್’ ಪ್ರೇರಿತ ಹಗರಣ; ಹುಡುಗಿ ಧ್ವನಿಯಲ್ಲಿ ಮಾತನಾಡಿ ಪುರುಷರಿಂದ ಹಣ ದೋಚುತ್ತಿದ್ದ ಯುವಕ
ಟ್ರಾಫಿಕ್ ಪೊಲೀಸ್ ಪೇದೆ ಹಾಗೂ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಾಲಕ ಮತ್ತು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ