AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ರೀಮ್ ಗರ್ಲ್’ ಪ್ರೇರಿತ ಹಗರಣ; ಹುಡುಗಿ ಧ್ವನಿಯಲ್ಲಿ ಮಾತನಾಡಿ ಪುರುಷರಿಂದ ಹಣ ದೋಚುತ್ತಿದ್ದ ಯುವಕ

ಕಳೆದ ವರ್ಷ ಆಗಸ್ಟ್ 25 ರಂದು ಡ್ರೀಮ್ ಗರ್ಲ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ‘ಡ್ರೀಮ್ ಗರ್ಲ್’ ಚಲನಚಿತ್ರದ ಕತೆಯ, ಆಯುಷ್ಮಾನ್‌ನ ಪಾತ್ರದಂತೆಯೇ ಹುಡುಗಿ ಧ್ವನಿಯಲ್ಲಿ ಮಾತನಾಡಿ ಸಾಕಷ್ಟು ಪುರುಷರಿಂದ ಹಣ ದೋಚುತ್ತಿದ್ದ ವಂಚನೆಯ ಆರೋಪದ ಮೇಲೆ 22 ವರ್ಷದ ಯುವಕನನ್ನು ಇದೀಗ ಭೋಪಾಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಈ ರೀತಿಯ ಕೃತ್ಯಕ್ಕೆ ‘ಡ್ರೀಮ್ ಗರ್ಲ್’ ಚಿತ್ರದಿಂದ ಪ್ರೇರಿತನಾಗಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.

'ಡ್ರೀಮ್ ಗರ್ಲ್' ಪ್ರೇರಿತ ಹಗರಣ; ಹುಡುಗಿ ಧ್ವನಿಯಲ್ಲಿ ಮಾತನಾಡಿ ಪುರುಷರಿಂದ ಹಣ ದೋಚುತ್ತಿದ್ದ ಯುವಕ
ಅಕ್ಷತಾ ವರ್ಕಾಡಿ
|

Updated on: Jun 08, 2024 | 3:15 PM

Share

ಭೋಪಾಲ್: ಆಯುಷ್ಮಾನ್ ಖುರಾನಾ ಅಭಿನಯದ ‘ಡ್ರೀಮ್ ಗರ್ಲ್’ ಚಿತ್ರದ ಕಥಾವಸ್ತುವನ್ನು ಪ್ರತಿಬಿಂಬಿಸುವ ಪ್ರಕರಣವೊಂದು ಸದ್ಯ ಭಾರೀ ಸುದ್ದಿಯಲ್ಲಿದೆ. ಆನ್‌ಲೈನ್‌ನಲ್ಲಿ ಯುವತಿಯಂತೆ ಮಾತನಾಡಿ ಸಾಕಷ್ಟು ಪುರುಷರನ್ನು ತನ್ನ ವಂಚನೆಯ ಬಲೆಗೆ ಸಿಲುಕಿಸಿದ್ದ 22 ವರ್ಷದ ಯುವಕನನ್ನು ಇದೀಗ ಭೋಪಾಲ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಹಾಸ್ಯದ ಮೂಲಕವೇ ಜನಮೆಚ್ಚುಗೆ ಗಳಿಸಿದ ಡ್ರೀಮ್ ಗರ್ಲ್ ಸಿನಿಮಾದ ಮಾದರಿಯಲ್ಲೇ ಈ ಪ್ರಕರಣ ನಡೆದಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕಳೆದ ಆಗಸ್ಟ್ 25 ರಂದು ಡ್ರೀಮ್ ಗರ್ಲ್ 2 ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ‘ಡ್ರೀಮ್ ಗರ್ಲ್’ ಚಲನಚಿತ್ರದ ಕತೆಯ, ಆಯುಷ್ಮಾನ್‌ನ ಪಾತ್ರದಂತೆಯೇ ಸ್ತ್ರೀ ಧ್ವನಿಯನ್ನು ಅನುಕರಿಸಲು  ಧ್ವನಿ ಬದಲಾಯಿಸುವ ತಂತ್ರಗಳನ್ನು ಬಳಸಿ ಆರೋಪಿ ಸಾಕಷ್ಟು ಜನರಿಗೆ ವಂಚನೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಅಜಯ್​​ ಅಥವಾ ಛೋಟು ಮೆಹ್ರಾ ಎಂದು ಕರೆಯಲ್ಪಡುವ ಈತ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹುಡುಗಿಯ ಹೆಸರಿನಲ್ಲಿ ಸಾಕಷ್ಟು ನಕಲಿ ಖಾತೆಗಳನ್ನು ಹೊಂದಿದ್ದ, ಈ ಮೂಲಕ ಹುಡುಗಿನ ಧ್ವನಿಯಲ್ಲಿ ಮಾತನಾಡುವ ಮೂಲಕ ಸಾಕಷ್ಟು ಪುರುಷರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ. ಈತನ ಧ್ವನಿಗೆ ಮರುಳಾದ ಸಾಕಷ್ಟು ಪುರುಷರಿಂದ ಹಣವನ್ನು ದೋಚುತ್ತಿದ್ದ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಈತನಿಂದ ವಂಚನೆಗೆ ಒಳಗಾಗಿದ್ದ ಅಮನ್ ನಾಮದೇವ್ ಎಂಬ ವ್ಯಕ್ತಿ ಮಂಗಳವಾರ ಜೂನ್ 4 ರಂದು ಪೊಲೀಸ್ ದೂರು ನೀಡಿದ ನಂತರ ಅಜಯ್ ಸಿಕ್ಕಿಬಿದ್ದಿದ್ದಾನೆ. ನಕಲಿ ಖಾತೆಗಳಲ್ಲಿ ಒಂದಾದ ಶಿವಾನಿ ರಘುವಂಶಿ ಎಂಬ ಇನ್ಸ್ಟಾಗ್ರಾಮ್​​​​ ಖಾತೆಯೊಂದಿಗೆ ಸ್ನೇಹ ಬೆಳೆಸಿದ್ದ ಅಮನ್ ನಾಮದೇವ್ ಮಹಿಳೆಯೆಂದೇ ಭಾವಿಸಿ ಸ್ನೇಹ ಬೆಳೆಸಿದ್ದಾನೆ. ಇದಲ್ಲದೇ ಆಕೆಯ ಧ್ವನಿಗೆ ಮರುಳಾಗಿದ್ದಾನೆ. ದಿನಗಳು ಕಳೆಯುತ್ತಿದ್ದಂತೆ ಯುವತಿ ಮದುವೆಯಾಗುವಂತೆ ಒತ್ತಡ ಹೇರಿದ್ದು, ನಿರಾಕರಿಸಿದಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ. ಇದಾದ ಕೆಲ ದಿನಗಳ ಬಳಿಕ ಶಿವಾನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ನಾಟಕವಾಡಿ ಮತ್ತೊಂದು ನಂಬರ್​ ಮೂಲಕ ಅಜಯ್​​ ಹುಡುಗನ ಧ್ವನಿಯಲ್ಲಿ ಮಾತನಾಡಿ ಚಿಕಿತ್ಸೆಗೆ ಹಣದ ಅಗತ್ಯವಿದೆ ಎಂದು ಅಮನ್ ನಾಮದೇವ್ ಅವರಿಗೆ ಕರೆ ಮಾಡಿದ್ದಾನೆ. ಭಯದಿಂದ ನಾಮದೇವ್ 70,000 ರೂ. ವರ್ಗಾಯಿಸಿದ್ದಾರೆ.

ಇದನ್ನೂ ಓದಿ: ಸಿಂಗಲ್ಸ್​​​ಗಳಿಗಾಗಿ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದ ಸರ್ಕಾರ

ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು, ಹಗರಣದ ಹಿಂದೆ ಅಜಯ್​​ ಕೈವಾಡ ಇರುವುದು ಕಂಡುಬಂದಿದೆ. ಈ ರೀತಿಯ ಕೃತ್ಯಕ್ಕೆ ‘ಡ್ರೀಮ್ ಗರ್ಲ್’ ಚಿತ್ರದಿಂದ ಪ್ರೇರಿತನಾಗಿದ್ದೆ ಎಂದು ಅವರು ಒಪ್ಪಿಕೊಂಡಿದ್ದಾನೆ. ಅಜಯ್​​ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಯುವತಿಯ ಹೆಸರಿನಲ್ಲಿ ಹಲವಾರು ನಕಲಿ ಪ್ರೊಫೈಲ್‌ಗಳನ್ನು ರಚಿಸಿ ಪುರುಷರೊಂದಿಗೆ ಹೆಣ್ಣಿನ ಧ್ವನಿಯಲ್ಲಿ ಸಂಭಾಷಣೆಗಳನ್ನು ಪ್ರಾರಂಭಿಸುತ್ತಿದ್ದ, ಅಂತಿಮವಾಗಿ ಅವರ ಮೇಲೆ ಒತ್ತಡ ಹೇರುತ್ತಿದ್ದ ಮತ್ತು ಆತ್ಮಹತ್ಯೆಯ ಪ್ರಯತ್ನಗಳಂತಹ ತುರ್ತು ಪರಿಸ್ಥಿತಿಗಳನ್ನು ನಿರ್ಮಿಸಿ ಹಣವನ್ನು ಸುಲಿಗೆ ಮಾಡುತ್ತಿದ್ದನು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ