Viral Video: ರಸ್ತೆಯಲ್ಲಿ ಹರಿಯುತ್ತಿರುವ ನೀರಿನ ಮಧ್ಯೆ ಚಾಪೆ ಹಾಕಿ ಸುಖವಾಗಿ ಮಲಗಿದ ಯುವಕ
ಮಳೆ ಎಂದರೆ ಕೆಲವರಿಗೆ ತುಂಬಾನೇ ಇಷ್ಟ. ಮಳೆ ಬಂತೆಂದರೆ ಮೈಯೊಡ್ಡಿ ನಿಂತು ಖುಷಿ ಪಡುವವರು ಅದೆಷ್ಟೋ ಜನರು. ಆದರೆ ಕೆಲವರು ಈ ಮಳೆಯ ಜೊತೆಗೆ ಆಟವಾಡುತ್ತಾ ಒಂದು ಹೆಜ್ಜೆ ಮುಂದೆಯೇ ಹೋಗುತ್ತಾರೆ. ಇಲ್ಲೊಬ್ಬ ಯುವಕನು ರಸ್ತೆಯಲ್ಲಿ ನೀರು ಹರಿಯುತ್ತಿದ್ದೂ, ಬಿಳಿ ಚಾಪೆಯ ಮೇಲೆ ಮಲಗಿಕೊಂಡು ತೇಲುತ್ತಾ ಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಯುವಕನ ಖುಷಿಯನ್ನು ಕಂಡು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮಳೆ ಬಂತೆಂದರೆ ಸಾಕು, ಮಳೆಯಲ್ಲಿ ಒದ್ದೆಯಾಗಲು ಹಾತೊರೆಯುತ್ತಾರೆ. ಮಕ್ಕಳಂತೂ ಕಾಗದದ ದೋಣಿಗಳನ್ನು ಮಾಡಿ ರಸ್ತೆಯಿಂದ ಹರಿಯುವ ನೀರಿನಲ್ಲಿ ಬಿಟ್ಟು ಮೋಜು ಮಾಡುತ್ತಾರೆ. ಆದರೆ ಮಳೆಗೆ ಮೈಯೊಡ್ಡಿ ನಿಲ್ಲುವುದೆಂದರೆ ದೊಡ್ಡವರಿಗೂ ಇಷ್ಟನೇ. ಕೆಲವೊಮ್ಮೆ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದ್ದರೂ ಅಪಾಯವನ್ನು ನಿರ್ಲಕ್ಷಿಸಿ ಹುಚ್ಚಾಟ ಮಾಡುವವರಿಗೇನು ಕೊರತೆಯಿಲ್ಲ. ತಮಾಷೆಗೆಂದು ಮಾಡುವ ಕೆಲವು ತುಂಟಾಟಗಳು ಪ್ರಾಣಕ್ಕೆ ಕುತ್ತು ತರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬನು ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಚಾಪೆಯ ಮೇಲೆ ಮಲಗಿಕೊಂಡು ತೇಲುತ್ತ ಬರುತ್ತಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.
ಈ ವಿಡಿಯೋವು ಪುಣೆಯ ಯರವಾಡ ಪ್ರದೇಶದ್ದು ಎಂದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ರಸ್ತೆಯ ತುಂಬಾ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಅದೇಗೋ ಕಷ್ಟಪಟ್ಟು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಇತ್ತ ಯುವಕನೊಬ್ಬನು ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಬಿಳಿ ಚಾಪೆಯ ಮೇಲೆ ಮಲಗಿಕೊಂಡಿದ್ದು, ತೇಲುತ್ತ ಬರುತ್ತಿದ್ದಾನೆ. ವಿಡಿಯೋ ನೋಡಿದಾಗ ಯುವಕನು ಸಖತ್ ಎಂಜಾಯ್ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇತ್ತ ವಾಹನ ಸವಾರರೆಲ್ಲರೂ ಈ ಯುವಕನನ್ನೆ ನೋಡುತ್ತಿದ್ದೂ, ಆತನು ಮಾತ್ರ ಮುಂದೆ ಚಲ್ ಚಲ್ ಚಲ್ ಎಂದೆಳುತ್ತ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: ಸಿಂಗಲ್ಸ್ಗಳಿಗಾಗಿ ಡೇಟಿಂಗ್ ಆ್ಯಪ್ ಲಾಂಚ್ ಮಾಡಿದ ಸರ್ಕಾರ
ವೈರಲ್ ವಿಡಿಯೋ ಇಲ್ಲಿದೆ:
ಈ ವಿಡಿಯೋವನ್ನು mipunekar.in ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬೆಚ್ಚಿ ಬಿದ್ದಿದ್ದು, ಲೈಕ್ಸ್ ಹಾಗೂ ಈ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ಗುರು ನೇರವಾಗಿ ಯರವಾಡ ಜೈಲಿಗೆ ಹೋಗಿ ಎಂದಿದ್ದಾರೆ. ಮತ್ತೊಬ್ಬರು, ‘ ನೀವು ನಮ್ಮ ಮನ ಗೆದ್ದಿದ್ದೀರಿ ಬಾಸ್’ ಎಂದಿದ್ದಾರೆ. ಇನ್ನೊಬ್ಬರು, ‘ಹಲೋ ಬ್ರೋ.. ಹಾಗೆ ಹೋದರೆ ಮುಂದಿನವರು ಚರಂಡಿಗೆ ಹೋಗುತ್ತಾರೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ