Viral Video: ಬಸ್ಸಿನಲ್ಲಿ ಹಣ ಕಳೆದುಕೊಂಡ ವೃದ್ಧೆ; ಅಜ್ಜಿಯ ಅಳು ನೋಡಲಾರದೆ ಹಣ ಸಹಾಯ ಮಾಡಿ ಪ್ರಯಾಣಿಕರು
ಹಣ ಕಳೆದುಕೊಂಡು ಕಂಗಾಲಾಗಿದ್ದ ಅಜ್ಜಿಯೊಬ್ಬರಿಗೆ ಬಸ್ಸಿನಲ್ಲಿದ್ದ ಸಹಪ್ರಯಾಣಿಕರು ಹಣ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಘಟನೆಯೊಂದು ನಡೆದಿದೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಎಲ್ಲೋ ಒಂದು ಕಡೆ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂದು ನೆಟ್ಟಿಗರು ಈ ವಿಡಿಯೋ ನೋಡಿ ಭಾವುಕರಾಗಿದ್ದಾರೆ.
ಮಾನವೀಯತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ಒಬ್ಬರಿಗೊಬ್ಬರು ಸಹಾಯ ಮಾಡುವುದು, ಒಬ್ಬರ ಕಷ್ಟಕ್ಕೆ ಸ್ಪಂದಿಸವುದು ಮಾನವನ ಸಹಜ ಗುಣ. ಆದರೆ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಾನವೀಯತೆಯ ಮೌಲ್ಯ ಕಡಿಮೆಯಾಗಿದ್ದು, ಅನೇಕರು ನಾವಾಯ್ತು ನಮ್ಮ ಕೆಲಸವಾಯ್ತು ಬೇರೆಯವರು ಹೆಂಗಾದರೂ ಇರ್ಲಿ ಎನ್ನುವ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಇಂತಹವರ ನಡುವೆ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂಬುದನ್ನು ಒಂದಿಷ್ಟು ಜನರು ತೋರಿಸಿಕೊಟ್ಟಿದ್ದಾರೆ. ಹೌದು ಇತ್ತೀಚಿಗಷ್ಟೇ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವೃದ್ಧೆಯೊಬ್ಬರು ತಮ್ಮ ಹಣವನ್ನು ಕಳೆದುಕೊಂಡು ಗೋಳಾಡುತ್ತಿದ್ದರು. ಇವರ ಅಳುವನ್ನು ನೋಡಲಾರದೆ ಆ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರೆಲ್ಲರೂ ಸೇರಿ ಅಜ್ಜಿಗೆ ಹಣ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ. ಈ ಕುರಿತ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಹಾವೇರಿಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಸರ್ಕಾರಿ ಬಸ್ ಒಂದರಲ್ಲಿ ಇತ್ತೀಚಿಗೆ ನಡೆದಿದ್ದು, ವೃದ್ಧೆಯೊಬ್ಬರು 5 ಸಾವಿರ ರೂಪಾಯಿ ಹಣವನ್ನು ಕಳೆದುಕೊಂಡು ಅಳುತ್ತಾ ಕುಳಿತಿದ್ದರು, ಅಜ್ಜಿಯ ಈ ಸ್ಥಿತಿಯನ್ನು ನೋಡಲಾರದೆ ಅದೇ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರೆಲ್ಲರೂ ಸೇರಿ 4 ಸಾವಿರ ರೂಪಾಯಿ ಹಣವನ್ನು ಕೂಡಿಸಿ ಅಜ್ಜಿಗೆ ಕೊಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಕುರಿತ ವಿಡಿಯೋವನ್ನು memes_duniya ಎಂಬ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾದ್ದು, “ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಿ ಹಣ ಕಳೆದುಕೊಂಡು ಅಳುತ್ತಿರುವುದನ್ನು ನೋಡಲಾರದೆ, ಬಸ್ಸಿನಲ್ಲಿದ್ದ ಜನರು ಅಲ್ಲೇ ಹಣ ಕೂಡಿಸಿ ಅಜ್ಜಿಗೆ ಕೊಟ್ಟು ಮಾನವೀಯತೆ ಮೆರೆದರು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಹಣವನ್ನು ಕಳೆದುಕೊಂಡು ಅಜ್ಜಿಯೊಬ್ಬರು ಜೋರಾಗಿ ಅಳುತ್ತಾ ಕುಳಿತಿರುವ ದೃಶ್ಯವನ್ನು ಕಾಣಬಹುದು. ಅಜ್ಜಿಯ ಅಳುವನ್ನು ನೋಡಲಾರದೆ ಸಹ ಪ್ರಯಾಣಿಕರೆಲ್ಲರೂ ಅಲ್ಲೇ ಹಣವನ್ನು ಕೂಡಿಸಿ ಅಜ್ಜಿಗೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಬ್ಯಾಲೆನ್ಸ್ ತಪ್ಪಿ ಬಸ್ಸಿನಿಂದ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಕಂಡಕ್ಟರ್; ವಿಡಿಯೋ ವೈರಲ್
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 8 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮಾನವೀಯತೆ ಇನ್ನೂ ಕೆಲವು ಕಡೆ ಜೀವಂತವಾಗಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಅಜ್ಜಿಗೆ ಸಹಾಯ ಮಾಡಿದ ಹೃದಯವಂತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ