ಮಂಗಳೂರು: ಸುರತ್ಕಲ್​ ಟೋಲ್ ಪ್ಲಾಜಾ, ಹೆಜಮಾಡಿ ಟೋಲ್‌​ನಲ್ಲಿ ವಿಲೀನ; ಡಿಸೆಂಬರ್ 1ರಿಂದ ಟೋಲ್​ ಸಂಗ್ರಹ ಶುಲ್ಕ ಏರಿಕೆ

​ಮಂಗಳೂರು ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸೂರತ್ಕಲ್​ ಟೋಲ್ ಪ್ಲಾಜಾ ಡಿಸೆಂಬರ್ 1ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮಂಗಳೂರು: ಸುರತ್ಕಲ್​ ಟೋಲ್ ಪ್ಲಾಜಾ, ಹೆಜಮಾಡಿ ಟೋಲ್‌​ನಲ್ಲಿ ವಿಲೀನ; ಡಿಸೆಂಬರ್ 1ರಿಂದ ಟೋಲ್​ ಸಂಗ್ರಹ ಶುಲ್ಕ ಏರಿಕೆ
ಸುರತ್ಕಲ್ ಟೋಲ್ ಗೇಟ್ (ಸಂಗ್ರಹ ಚಿತ್ರ)
Follow us
| Updated By: ವಿವೇಕ ಬಿರಾದಾರ

Updated on:Nov 28, 2022 | 10:50 PM

ಮಂಗಳೂರು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಆರಂಭಗೊಂಡಿದ್ದ ಸೂರತ್ಕಲ್​ ಟೋಲ್ ಪ್ಲಾಜಾ (surathkal toll plaza) ಡಿಸೆಂಬರ್ 1ರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆದರೆ ಈ  ಸುರತ್ಕಲ್  ಟೋಲ್‌ಗೇಟ್‌ ಪಕ್ಕದ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನವಾಗಲಿದೆ. ಇದರಿಂದ ಸುರತ್ಕಲ್ ಟೋಲ್‌ನ ಹೆಚ್ಚುವರಿ ಶುಲ್ಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸಲಾಗುವುದು ಎಂದು ದರ ಪರಿಷ್ಕರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.

ಉಡುಪಿಯ ಹೆಜಮಾಡಿ ಟೋಲ್‌ಗೇಟ್​ನಲ್ಲಿ ಸಂಗ್ರಹಿಸಲಾಗುವ ಶುಲ್ಕ

  1. ಕಾರಿಗೆ ಏಕಮುಖ ಪಾಸಿಂಗ್ 40 ರೂ. ಇತ್ತು, ಈಗ 100 ರೂ. ಶುಲ್ಕ ಆಗಲಿದೆ.
  2. ಈ ಹಿಂದೆ ಬಸ್, ಟ್ರಕ್‌ಗಳಿಗೆ ಏಕಮುಖ ಪಾಸಿಂಗ್ ದರ 210 ರೂ ಇತ್ತು ಈಗ 355 ಶುಲ್ಕ ಆಗಲಿದೆ
  3. ಭಾರಿ ಗಾತ್ರದ ಮತ್ತು ಮಲ್ಟಿ ಆಕ್ಸೆಲ್‌ಗೆ ಈ ಹಿಂದೆ 225 ರೂ ಇತ್ತು ಈಗ 555 ರೂ ಆಗಲಿದೆ.
  4. ಲಘು ವಾಣಿಜ್ಯ, ಸರಕು ವಾಹನಕ್ಕೆ ಈ ಹಿಂದೆ 70 ರೂ ಇತ್ತು ಈಗ 170 ರೂ ಆಗಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಯಮಲೋಕಕ್ಕೆ ದಾರಿಯಾದಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್! ಬೈಕ್ ಸಂಚಾರ ಬ್ಯಾನ್ ಆಗುತ್ತಾ? ಚರ್ಚೆ ಮತ್ತೆ ಶುರು

ಏನಿದು ಟೋಲ್ ಪ್ಲಾಜಾ ವಿವಾದ

ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್‌ನಲ್ಲಿ 2015ರಲ್ಲಿ ಟೋಲ್ ಪ್ಲಾಜಾ ಆರಂಭಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ 60 ಕಿಲೋಮೀಟರ್ ಅಂತರದಲ್ಲಿ ಟೋಲ್ ಪ್ಲಾಜಾ ಇರಬೇಕು. ಆದರೆ ಸುರತ್ಕಲ್ ಟೋಲ್‌ನಿಂದ ಉಡುಪಿಯ ಹೆಜಮಾಡಿ ಟೋಲ್ ಪ್ಲಾಜಾಕ್ಕೆ ದೂರ ಕೇವಲ 17 ಕಿ.ಮೀ. ಹೀಗಾಗಿ ಸುರತ್ಕಲ್ ಟೋಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮವನ್ನು ಮೀರಿದೆ ಎಂಬ ಆರೋಪ ಹೋರಾಟಗಾರದಾಗಿತ್ತು.

ಈ ಸಂಬಂಧ ಟೋಲ್ ಪ್ಲಾಜಾ ತೆರವಿಗೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸಮಾನಮನಸ್ಕ ಸಂಘಟನೆಗಳು ಆರು ವರ್ಷಗಳಿಂದ ಹೋರಾಟ ನಡೆಸುತ್ತಲೆ ಬಂದಿದ್ದವು. ಈ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತೆರಳಿ ಸಾಕಷ್ಟು ಹೈಡ್ರಾಮಕ್ಕೆ ಕಾರಣವಾಗಿತ್ತು. ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ಕೂಡ ದಾಖಲಾಗಿದ್ದವು. ಟೋಲ್‌ಗೇಟ್ ತೆರವಿಗೆ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭ ನಡೆದಿತ್ತು. ಟೋಲ್ ಪ್ಲಾಜಾದ 200 ಮೀ ದೂರದಲ್ಲಿ ಹೋರಾಟಗಾರರು ಹಗಲು ರಾತ್ರಿಯ ಧರಣಿ ಆರಂಭಿಸಿದ್ದರು.

ಸಂಸದ ನಳೀನ್ ಕುಮಾರ್ ಕಟೀಲ್ ನವೆಂಬರ್ 7ರವರಗೆ ಕಾಲಾವಕಾಶ ಕೇಳಿದ್ದರ. ಆ ಬಳಿಕವೂ ಟೋಲ್ ಗೇಟ್ ತೆರವು ಆಗದಿದ್ದರೆ ಹೋರಾಟದ ಸ್ವರೂಪ ಬದಲಾಗುತ್ತೆ ಎಂದು ಹೋರಾಟಗಾರರು ಎಚ್ಚರಿಸಿದ್ದರು.

ಕೊನೆಗಯು ಪ್ರತಿಭಟನಾಕಾರರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಸೂರತ್ಕಲ್​ ಟೋಲ್​ ಪ್ಲಾಜಾ ರದ್ದು ಮಾಡಿ ಆದೇಶ ಹೊರಡಿಸಿತ್ತು. ಇದಾದ ಬೆನ್ನಲ್ಲೇ ಟೋಲ್​ ಪ್ಲಾಜಾವನ್ನು, ಹೆಜಮಾಡಿ ಟೋಲ್ ಪ್ಲಾಜಾಕ್ಕೆ ವಿಲೀನ ಗೊಳಸಲು ಸಕಲ ತಯಾರಿ ನಡೆದಿತ್ತು. ಈ ತಾಯರಿ ಯಶಸ್ವಿಯಾಗಿ ಕೊನೆಗೆ ಹೆಜಮಾಡಿ ಟೋಲ್ ಪ್ಲಾಜಾಗೆ, ಸೂರತ್ಕಲ್​ ಟೋಲ್​ ಪ್ಲಾಜಾವನ್ನು ವಿಲೀನಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಟೋಲ್​ ದರವನ್ನು ಹೆಚ್ಚಿಗೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು  ಸುದ್ದಿಗಳಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:33 pm, Mon, 28 November 22

ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ