ತಮಿಳುನಾಡು: ಕಂದಕಕ್ಕೆ ಉರುಳಿಬಿದ್ದ ಬಸ್, ಓರ್ವ ಸಾವು, 20 ಮಂದಿಗೆ ಗಂಭೀರ ಗಾಯ

|

Updated on: Dec 03, 2023 | 8:37 AM

ತಮಿಳುನಾಡಿನಲ್ಲಿ ಬಸ್​  ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಓರ್ವ ಮೃತಪಟ್ಟಿದ್ದು, 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆನ್ನೈನಿಂದ ಕೊಯಮತ್ತೂರ್‌ಗೆ 45 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಚೆಂಗಲ್ಪಟ್ಟು ಜಿಲ್ಲೆಯ ಬಳಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ತಮಿಳುನಾಡು: ಕಂದಕಕ್ಕೆ ಉರುಳಿಬಿದ್ದ ಬಸ್, ಓರ್ವ ಸಾವು, 20 ಮಂದಿಗೆ ಗಂಭೀರ ಗಾಯ
ಬಸ್ ಅಪಘಾತ
Image Credit source: India Today
Follow us on

ತಮಿಳುನಾಡಿನಲ್ಲಿ ಬಸ್​  ಆಯತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಓರ್ವ ಮೃತಪಟ್ಟಿದ್ದು, 20 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೆನ್ನೈನಿಂದ ಕೊಯಮತ್ತೂರ್‌ಗೆ 45 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಚೆಂಗಲ್ಪಟ್ಟು ಜಿಲ್ಲೆಯ ಬಳಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಕನ್ಯಾಕುಮಾರಿ ನಿವಾಸಿ ಮಣಿಕಂದನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಅರುಣ್ ಕುಮಾರ್ (30) ಎಂದು ಗುರುತಿಸಲಾದ ಚಾಲಕ, ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯ ಪಜವೇಲಿ ಗ್ರಾಮದ ಚೆಂಗಲ್ಪಟ್ಟು ಜಿಲ್ಲೆಯ ಬಳಿ ವಾಹನದ ನಿಯಂತ್ರಣ ಕಳೆದುಕೊಂಡ ನಂತರ ಈ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ. ಘಟನೆಯ ಮಾಹಿತಿ ತಿಳಿದ ಚೆಂಗಲ್ಪಟ್ಟು ತಾಲೂಕು ಪೋಲೀಸ್ ತಂಡವು ಸ್ಥಳಕ್ಕಾಗಮಿಸಿ ವ್ಯಕ್ತಿಯ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆಂಗಲ್ಪಟ್ಟು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮತ್ತಷ್ಟು ಓದಿ: ಉತ್ತರಪ್ರದೇಶ: ಆಗ್ರಾ-ದೆಹಲಿ ಹೆದ್ದಾರಿಯಲ್ಲಿ ಭೀಕರ ಅಪಘಾತ; 5 ಸಾವು

ಗಾಯಗೊಂಡಿರುವ ಇಪ್ಪತ್ತು ಜನರನ್ನು ಚೆಂಗಲ್ಪಟ್ಟು ಜಿಲ್ಲೆಯ ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಮೊದಲು ವೈದ್ಯಕೀಯ ಚಿಕಿತ್ಸೆ ಪಡೆದರು.
ಚೆಂಗಲ್ಪಟ್ಟು ತಾಲೂಕು ಪೊಲೀಸರು ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಭಾರೀ ಮಳೆಯಿಂದಾಗಿ ನಿಯಂತ್ರಣ ತಪ್ಪಿದ ಪರಿಣಾಮ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ