ವಿಮಾನ ಪ್ರಯಾಣ ವೇಳೆ ರೈಲ್ವೆ ಸಚಿವರಿಗೆ ಟಿಶ್ಯೂ ಪೇಪರ್​​ನಲ್ಲಿ ವ್ಯಾಪಾರ ಐಡಿಯಾ ಬರೆದು ಹಸ್ತಾಂತರಿಸಿದ ಉದ್ಯಮಿ

|

Updated on: Feb 08, 2024 | 8:18 PM

ಪಶ್ಚಿಮ ಬಂಗಾಳದ ಎನ್‌ಎಸ್‌ಸಿಬಿಐ ವಿಮಾನ ನಿಲ್ದಾಣದಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ ಈಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ಕಚೇರಿಯಿಂದ ಸತ್ನಾಲಿವಾಲಾ ಅವರಿಗೆ ಕರೆ ಬಂದಿದೆ. ಅವರ ವ್ಯಾಪಾರ ಐಡಿಯಾ ಬಗ್ಗೆ ಚರ್ಚಿಸಲು ಪೂರ್ವ ರೈಲ್ವೇ ಜಿಎಂ ಮಿಲಿಂದ್ ಕೆ ದೇವುಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಬಂಗಾಳದ ಇಆರ್ ಪ್ರಧಾನ ಕಚೇರಿಯಲ್ಲಿ ಸತ್ನಾಲಿವಾಲಾ ಅವರನ್ನು ಭೇಟಿ ಮಾಡಿದ್ದು ಅವರ ಸಂಸ್ಥೆಯು ಸೂಚಿಸಿದ ನಿರೀಕ್ಷೆಗಳ ಬಗ್ಗೆ ಚರ್ಚಿಸಿದರು.

ವಿಮಾನ ಪ್ರಯಾಣ ವೇಳೆ ರೈಲ್ವೆ ಸಚಿವರಿಗೆ ಟಿಶ್ಯೂ ಪೇಪರ್​​ನಲ್ಲಿ ವ್ಯಾಪಾರ ಐಡಿಯಾ ಬರೆದು ಹಸ್ತಾಂತರಿಸಿದ ಉದ್ಯಮಿ
ವಿಮಾನ ಪ್ರಯಾಣಿಕ ಬರೆದುಕೊಟ್ಟ ಬ್ಯುಸಿನೆಸ್ ಐಡಿಯಾ
Follow us on

ದೆಹಲಿ ಫೆಬ್ರುವರಿ 08: ಫೆಬ್ರವರಿ 2 ರಂದು ದೆಹಲಿ-ಕೋಲ್ಕತ್ತಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೊಬ್ಬರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw)  ಅವರಲ್ಲಿ ಹೊಸ ವ್ಯಾಪಾರ ಐಡಿಯಾ (business proposal) ಬಗ್ಗೆ ಚರ್ಚಿಸಿದ್ದು, ಮುಂದಿನ ಮಾತುಕತೆಗೆ ರೈಲ್ವೆ ಸಚಿವರು ಒಪ್ಪಿಕೊಂಡಿದ್ದಾರೆ. ಅಂದಹಾಗೆ ಫ್ಲೈಟ್ ಪ್ರೋಟೋಕಾಲ್‌ಗಳಿಂದ ನೇರವಾಗಿ ಸಚಿವರನ್ನು ಸಂಪರ್ಕಿಸಲು ಸಾಧ್ಯವಾಗದ ವಾಣಿಜ್ಯೋದ್ಯಮಿ ಅಕ್ಷಯ್ ಸತ್ನಾಲಿವಾಲಾ(Akshay Satnaliwala) ತಮ್ಮ ವ್ಯಾಪಾರ ಪ್ರಸ್ತಾಪವನ್ನು ಟಿಶ್ಯೂ ಮೇಲೆ ಬರೆದು ಸಚಿವರಿಗೆ ಹಸ್ತಾಂತರಿಸಿದ್ದಾರೆ.

ಪಶ್ಚಿಮ ಬಂಗಾಳದ ಎನ್‌ಎಸ್‌ಸಿಬಿಐ ವಿಮಾನ ನಿಲ್ದಾಣದಲ್ಲಿ ಇಳಿದ ಕೆಲವೇ ನಿಮಿಷಗಳಲ್ಲಿ ಈಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ಕಚೇರಿಯಿಂದ ಸತ್ನಾಲಿವಾಲಾ ಅವರಿಗೆ ಕರೆ ಬಂದಿದೆ. ಅವರ ವ್ಯಾಪಾರ ಐಡಿಯಾ ಬಗ್ಗೆ ಚರ್ಚಿಸಲು ಪೂರ್ವ ರೈಲ್ವೇ ಜಿಎಂ ಮಿಲಿಂದ್ ಕೆ ದೇವುಸ್ಕರ್ ಮತ್ತು ಇತರ ಹಿರಿಯ ಅಧಿಕಾರಿಗಳು ಬಂಗಾಳದ ಇಆರ್ ಪ್ರಧಾನ ಕಚೇರಿಯಲ್ಲಿ ಸತ್ನಾಲಿವಾಲಾ ಅವರನ್ನು ಭೇಟಿ ಮಾಡಿದ್ದು ಅವರ ಸಂಸ್ಥೆಯು ಸೂಚಿಸಿದ ನಿರೀಕ್ಷೆಗಳ ಬಗ್ಗೆ ಚರ್ಚಿಸಿದರು.

ಅವರು ಸತ್ನಾಲಿವಾಲಾ ಪ್ರಸ್ತುತಪಡಿಸಿದ ವ್ಯವಹಾರ ಪ್ರಸ್ತಾವನೆಯನ್ನು ಕುರಿತು ಮಾತನಾಡಿದ ಪೂರ್ವ ರೈಲ್ವೆಯ ವಕ್ತಾರ ಕೌಶಿಕ್ ಮಿತ್ರಾ, ಛತ್ತೀಸ್‌ಗಢದ ರಾಯ್‌ಪುರ ಮತ್ತು ಒಡಿಶಾದ ರಾಜ್‌ಗಂಗ್‌ಪುರ ಮತ್ತು ರೈಲ್ವೆಯ ಮೂಲಕ ಇತರ ಕ್ಲಸ್ಟರ್‌ಗಳಂತಹ ದೇಶದ ವಿವಿಧ ಭಾಗಗಳಲ್ಲಿ ನಿರೀಕ್ಷಿತ ಖರೀದಿದಾರರೊಂದಿಗೆ ವಿವಿಧ ಕೈಗಾರಿಕೆಗಳಿಗೆ ಘನ ತ್ಯಾಜ್ಯದ ಸ್ಕೀಮ್ಯಾಟಿಕ್ ಹರಿವನ್ನು ವಿವರಿಸಿದರು ಎಂದು ಹೇಳಿರುವುದಾಗಿ ಪಿಟಿಐ ಗುರುವಾರ ವರದಿ ಮಾಡಿದೆ.

“ರೈಲ್ವೆ ಮಾರ್ಗದ ಮೂಲಕ ಘನ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಬೃಹತ್ ಪ್ರಮಾಣದ ಸಾಗಣೆಯು ಕಂಪನಿಗೆ ಪ್ರಯೋಜನಕಾರಿಯಾಗುವುದಿಲ್ಲ, ಆದರೆ ತ್ಯಾಜ್ಯವನ್ನು ಮರುಬಳಕೆ ಮಾಡಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ” ಎಂದು ಮಿತ್ರಾ ಹೇಳಿದ್ದಾರೆ

ಟ್ರಾಫಿಕ್ ಚಲನೆಗೆ ಬದ್ಧತೆಯೊಂದಿಗೆ ನಿಲ್ದಾಣದಿಂದ ನಿಲ್ದಾಣಕ್ಕೆ ದರ ಸೌಲಭ್ಯಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಲು ಇಆರ್ ಅಧಿಕಾರಿಗಳು ಉದ್ಯಮಿಯನ್ನು ಕೇಳಿದರು. ಉದ್ಯಮಿ ಸತ್ನಾಲಿವಾಲಾ ಅವರು ತಮ್ಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ರೈಲ್ವೇ ಸಚಿವರು ಮತ್ತು ಇತರ ಇಆರ್ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು: ಪ್ರಾಯೋಗಿಕ ಓಡಾಟ, ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅಶ್ವಿನಿ ವೈಷ್ಣವ್

ಬಂಗಾಳದ ಘನ ತ್ಯಾಜ್ಯ ನಿರ್ವಹಣಾ ಕಂಪನಿಯಾದ ಈಸ್ಟರ್ನ್ ಆರ್ಗ್ಯಾನಿಕ್ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರತಿನಿಧಿಸುತ್ತಿರುವ ಅಕ್ಷಯ್ ಸತ್ನಾಲಿವಾಲಾ ಅವರು ತಮ್ಮ ಕಂಪನಿಯ ಕೆಲಸದ ಬಗ್ಗೆ ಬರೆದು ವಿಮಾನದಲ್ಲಿ ವೈಷ್ಣವ್‌ಗೆ ತಮ್ಮ ವ್ಯವಹಾರ ಪ್ರಸ್ತಾಪವನ್ನು ನೀಡಿದರು. “ಡಿಯರ್ ಸರ್, ನಾನು M/S ಈಸ್ಟರ್ನ್ ಆರ್ಗ್ಯಾನಿಕ್ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್ ಅನ್ನು ಪ್ರತಿನಿಧಿಸುತ್ತೇನೆ, ಇದು ಪಶ್ಚಿಮ ಬಂಗಾಳ ರಾಜ್ಯದ ಅತಿದೊಡ್ಡ ಘನ ತ್ಯಾಜ್ಯ ನಿರ್ವಹಣಾ ಕಂಪನಿಗಳಲ್ಲಿ ಒಂದಾಗಿದೆ. “ಸರ್, ನೀವು ಅನುಮತಿಸಿದರೆ, ರೈಲ್ವೇಗಳು ಪೂರೈಕೆ ಸರಪಳಿಯಲ್ಲಿ ಹೇಗೆ ಅವಿಭಾಜ್ಯ ಅಂಗವಾಗಬಹುದೆಂದು ನಾನು ಪ್ರಸ್ತುತಪಡಿಸಲು ಬಯಸುತ್ತೇನೆ. ನಮ್ಮ ಪ್ರಧಾನ ಮಂತ್ರಿಯ ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುಗೆ ನೀಡುತ್ತೇನೆ” ಎಂದು ಅವರು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ