ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು: ಪ್ರಾಯೋಗಿಕ ಓಡಾಟ, ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅಶ್ವಿನಿ ವೈಷ್ಣವ್
amrit bharat express: ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಅಯೋಧ್ಯೆಯಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ದೆಹಲಿಯಲ್ಲಿ ರೈಲಿನ ಸೌಕರ್ಯಗಳನ್ನು ಹಾಗೂ ಪ್ರಾಯೋಗಿಕ ಓಡಾಟವನ್ನು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ರೈಲಿನಲ್ಲಿ ಪ್ರಾಯೋಗಿಕ ಓಡಾಟವನ್ನು ಪರಿಶೀಲಿಸಲಾಗಿದೆ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಅಮೃತ್ ಭಾರತ್ ಎಕ್ಸ್‌ಪ್ರೆಸ್ (amrit bharat express) ರೈಲು ಶೀಘ್ರದಲ್ಲೇ ಅಯೋಧ್ಯೆಯಿಂದ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳವಾರ ದೆಹಲಿಯಲ್ಲಿ ರೈಲಿನ ಸೌಕರ್ಯಗಳನ್ನು ಹಾಗೂ ಪ್ರಾಯೋಗಿಕ ಓಡಾಟವನ್ನು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ರೈಲಿನಲ್ಲಿ ಪ್ರಾಯೋಗಿಕ ಓಡಾಟವನ್ನು ಪರಿಶೀಲಿಸಲಾಗಿದೆ. ನಾಲ್ಕರಿಂದ ಐದು ತಿಂಗಳ ಕಾಲ ರೈಲಿನ ಸಾಮಾನ್ಯ ಓಡಾಟವನ್ನು ನಡೆಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಇಂದು ನಾನು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲಿನ ಎಲ್ಲ ವ್ಯವಸ್ಥೆಗಳನ್ನು ಹಾಗೂ ಪ್ರಾಯೋಗಿಕ ಓಡಾಟವನ್ನು ಪರಿಶೀಲನೆಯನ್ನು ನಡೆಸಿದ್ದೇನೆ ಎಂದು ಎಕ್ಸ್ನಲ್ಲಿ ತಿಳಿಸಿದ್ದಾರೆ. ಇದರ ಜತೆಗೆ ತಾಂತ್ರಿಕ ದೋಷ ಮತ್ತು ಸವಾಲುಗಳೇನು? ಎಂಬ ಬಗ್ಗೆಯು ಪರಿಶೀಲನೆ ನಡೆಸಲಾಗಿದೆ. ರೈಲಿನ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಈ ರೈಲು ಹೊಸ ಹೊಸ ತಂತ್ರಜ್ಞಾನವನ್ನು ಹಾಗೂ ವಿಶೇಷ ವ್ಯವಸ್ಥೆಗಳನ್ನು ಹೊಂದಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ನಲ್ಲಿ ಹಂಚಿಕೊಂಡ ವಿಡಿಯೋ ಇಲ್ಲಿದೆ:
अमृत काल की अमृत भारत ट्रेन! pic.twitter.com/yegGEydJU5
— Ashwini Vaishnaw (@AshwiniVaishnaw) December 26, 2023
ಅಮೃತ್ ಭಾರತ್ ಎಕ್ಸ್‌ಪ್ರೆಸ್ ಸ್ವಯಂಚಾಲಿತ ಸಂರಕ್ಷಣಾ ವ್ಯವಸ್ಥೆ ಕವಚನ್ನು ಹೊಂದಿದೆ. ಇದು ಎರಡು ರೈಲುಗಳ ನಡುವೆ ಅಪಘಾತವನ್ನು ತಡೆಯುವ ಶಕ್ತಿಯನ್ನು ಕೂಡ ಹೊಂದಿದೆ. ಜೊತೆಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಮಾರ್ಪಡಿಸಿದ ಎಂಜಿನ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಸೀಟಿನ ಮೇಲೆ ಚಾರ್ಜಿಂಗ್ ಪಾಯಿಂಟ್ ಇದೆ. ಸಾಮಾನ್ಯ ಕೋಚ್‌ಗಳಿಗೆ ಮೇಲ್ಭಾಗದ ಸೀಟಿನಲ್ಲಿ ಹೆಚ್ಚುವರಿ ಕುಷನಿಂಗ್ (ಮೆತ್ತನೆಯ ಹಾಸಿಗಳು) ಕೂಡ ಇದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ: 2024ರ ವೇಳೆಗೆ 102 ವಂದೇ ಭಾರತ್ ರೈಲು ಓಡಿಸುವ ಗುರಿ
ಇನ್ನು ರೈಲು ನಿರ್ವಾಹಕರ ಕ್ಯಾಬಿನ್ ಬಗ್ಗೆಯು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ. ಆರಾಮವಾಗಿ ರೈಲುಗಳ ಓಡಾಟವನ್ನು ನಡೆಸಲು ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ವಾಹಕರಿಗೆ ನೀಡಲಾಗಿದೆ. ಕ್ಯಾಬಿನ್‌ಗೆ ಹವಾನಿಯಂತ್ರಣವನ್ನು ಅಳವಡಿಸಲಾಗಿದೆ. ಇದು ಕೂಡ ವಂದೇ ಭಾರತ್ ರೈಲುಗಳಂತೆಯೇ ಇದೆ. ನಾನು ನಿರ್ವಾಹಕರ ಕ್ಯಾಬಿನ್‌ಗೆ ಭೇಟಿ ನೀಡಿದಾಗ, ಆಸನವು ದಕ್ಷತಾಶಾಸ್ತ್ರದ ಸ್ಥಾನದಲ್ಲಿದೆ. ಇದು ಚಾಲಕನಿಗೆ ಆರಾಮ ಮತ್ತು ಆಯಾಸವಾಗದಂತೆ ನೋಡಿಕೊಳ್ಳುತ್ತದೆ ಎಂದು ವೈಷ್ಣವ್ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ