ಕೆನಡಾ ಮೂಲದ ಸತಿಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ (Goldy Brar) ಭಾನುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸ್ ವಾಲಾ (Sidhu Moose Wala) ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಭಾನುವಾರ ಮಾನ್ಸಾ (Mansa) ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಸಿಧು ಮೂಸೆ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಂಜಾಬ್ ಸರ್ಕಾರವು ಅವರ ರಕ್ಷಣೆಗಾಗಿ ಒದಗಿಸಿದ್ದ ಇಬ್ಬರು ಬಂದೂಕುಧಾರಿಗಳನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಹತ್ಯೆ ನಡೆದಿದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ಯ ನಿಕಟ ಸಹವರ್ತಿ ಬ್ರಾರ್ ಪಂಜಾಬ್‌ನಲ್ಲಿರುವ ಅವರ ಘಟಕವು ಮೂಸೆ ವಾಲಾ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ. 2021 ಫೆಬ್ರವರಿಯಲ್ಲಿ ಫರೀದ್ ಕೋಟ್ನಲ್ಲಿ ಯೂತ್ ಕಾಂಗ್ರೆಸ್ ನಾಯಕ ಗುರುಲಾಲ್ ಸಿಂಗ್ ಪೆಹಲ್ವಾನ್ ಹತ್ಯೆ ಪ್ರಕರಣದಲ್ಲಿ ಬ್ರಾರ್ ಮುಖ್ಯ ಸಂಚುಕೋರ ಆಗಿದ್ದ. ಮಾರ್ಚ್ 2021 ರಲ್ಲಿ ಫರೀದ್ ಕೋಟ್ ನ್ಯಾಯಾಲಯವು ಈತನ ವಿರುದ್ಧ ಓಪನ್ ಎಂಡೆಡ್ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿತು.
ತಮ್ಮ ಫೇಸ್‌ಬುಕ್ ಪುಟಗಳಲ್ಲಿ ಎರಡು ಪ್ರತ್ಯೇಕ ಪೋಸ್ಟ್‌ಗಳಲ್ಲಿ, ಬಿಷ್ಣೋಯ್ ಮತ್ತು ಬ್ರಾರ್ ಪಂಜಾಬಿ ಗಾಯಕನ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಈ ಪೋಸ್ಟ್ ಗಳ ವಿಶ್ವಾಸರ್ಹತೆ ಬಗ್ಗೆ ನಾವು ಸ್ವತಂತ್ರವಾಗಿ ದೃಢಪಡಿಸಿಲ್ಲ ಎಂದು ದಿ ಕ್ವಿಂಟ್ ವರದಿ ಮಾಡಿದೆ. ಆದಾಗ್ಯೂ, ನಾವು ಎರಡು ಫೇಸ್‌ಬುಕ್ ಪೋಸ್ಟ್‌ಗಳನ್ನು ಗಮನಿಸಿದ್ದೇವೆ. ಅವುಗಳ ಸತ್ಯಾಸತ್ಯತೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪಂಜಾಬ್ ಪೊಲೀಸರು ದಿ ಕ್ವಿಂಟ್‌ಗೆ ತಿಳಿಸಿದ್ದಾರೆ.
‘ವಿಐಪಿ ಸಂಸ್ಕೃತಿ’ ವಿರುದ್ಧದ ಆಮ್ ಆದ್ಮಿ ಪಕ್ಷದ ನಿರ್ಧಾರದಿಂದಾಗಿ ಪಂಜಾಬ್ ಪೊಲೀಸರು 424 ವ್ಯಕ್ತಿಗಳ ಭದ್ರತೆಯನ್ನು ಹಿಂತೆಗೆದು ಕೊಂಡ ಒಂದು ದಿನದ ಹತ್ಯೆ ನಡೆದಿದೆ. ಮೂಸೆ ವಾಲಾ ದಾಳಿಯ ಸಮಯದಲ್ಲಿ ಬುಲೆಟ್ ಪ್ರೂಫ್ ವಾಹನ ಮತ್ತು ಅವರ ಶಸ್ತ್ರಸಜ್ಜಿತ ಭದ್ರತಾ ಅಧಿಕಾರಿಯನ್ನು ಜತೆಗೆ ಕರೆದೊಯ್ದಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
#Canada-based gangster #GoldiBrar, a close aide of the Lawrence Bishnoi gang took responsibility for the killing of singer-turned-actor-politician #SidhuMoosewala in #Punjab. pic.twitter.com/oHnErrlosu
— IANS (@ians_india) May 29, 2022
“ಎರಡು ಕಾರುಗಳು ಸಿಧು ಮೂಸೆ ವಾಲಾ ಅವರ ಕಾರನ್ನು ಅಡ್ಡಗಟ್ಟಿದವು. ಭಾರೀ ಗುಂಡಿನ ದಾಳಿಯ ನಂತರ ಸಿಧು ಮೂಸೆ ವಾಲಾ ಅವರಿಗೆ ಅನೇಕ ಬುಲೆಟ್‌ಗಳು ಗಾಯಗಳಾಗಿವೆ. ಅವರ ಜೊತೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಟಿಯಾಲಕ್ಕೆ ಕಳುಹಿಸಲಾಗಿದೆ” ಎಂದು ಮಾನ್ಸಾ ಎಸ್‌ಎಸ್‌ಪಿ ಗೌರವ್ ಟೂರಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:24 pm, Sun, 29 May 22