AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಎಫ್ಐಆರ್

ರಾಝಾ ಅಕಾಡೆಮಿಯ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ಹೇಳಿಕೆಯನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಅವರ ಹೇಳಿಕೆಯ ಪ್ರಕಾರ, ನೂಪುರ್ ಶರ್ಮಾ ಭಾಗವಹಿಸಿದ ಜ್ಞಾನವಾಪಿ ವಿಷಯದ ಚರ್ಚೆಯ ಬಗ್ಗೆ ವಾಟ್ಸಾಪ್‌ನಲ್ಲಿ...

ಪ್ರವಾದಿ ವಿರುದ್ಧ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ; ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಎಫ್ಐಆರ್
ನೂಪುರ್ ಶರ್ಮಾ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Jun 06, 2022 | 7:24 PM

Share

ಮುಂಬೈ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರು ಸುದ್ದಿವಾಹಿನಿಯ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ (Prophet Mohammed) ವಿರುದ್ಧ ಮಾಡಿದ ಹೇಳಿಕೆಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಮುಂಬೈ ಪೊಲೀಸರು (Mumbai police) ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಝಾ ಅಕಾಡೆಮಿಯ ದೂರಿನ ಆಧಾರದ ಮೇಲೆ ಪೈಧೋನಿ ಪೊಲೀಸರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವುದು, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ದುಷ್ಪರಿಣಾಮಕ್ಕೆ ಕಾರಣವಾದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ರಾಝಾ ಅಕಾಡೆಮಿಯ ಮುಂಬೈ ವಿಭಾಗದ ಜಂಟಿ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ಹೇಳಿಕೆಯನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ. ಅವರ ಹೇಳಿಕೆಯ ಪ್ರಕಾರ, ನೂಪುರ್ ಶರ್ಮಾ ಭಾಗವಹಿಸಿದ ಜ್ಞಾನವಾಪಿ ವಿಷಯದ ಚರ್ಚೆಯ ಬಗ್ಗೆ ವಾಟ್ಸಾಪ್‌ನಲ್ಲಿ ಲಿಂಕ್ ಸಿಕ್ಕಿತು. ಪ್ರವಾದಿ ಮತ್ತು ಅವರ ಪತ್ನಿಯ ಬಗ್ಗೆ ಶರ್ಮಾ ಅವರು ಮಾಡಿದ ಕಾಮೆಂಟ್‌ಗಳನ್ನು ನೋಡಿ ನನಗೆ ನೋವಾಗಿದೆ ಎಂದು ಶೇಖ್ ಹೇಳಿದ್ದಾರೆ. ನಾನು ಪೈಧೋನಿ ಪೊಲೀಸರನ್ನು ಸಂಪರ್ಕಿಸಿ ಶರ್ಮಾ ವಿರುದ್ಧ ಲಿಖಿತ ದೂರು ನೀಡಿದ್ದೇನೆ. ಶೇಖ್ ಅವರು ಪೊಲೀಸರಿಗೆ ಚರ್ಚೆಯ ವಿಡಿಯೊ ಲಿಂಕ್ ಅನ್ನು ಕೊಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295-ಎ (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ), 153-ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505 (II) (ಸಾರ್ವಜನಿಕ ಕಿಡಿಗೇಡಿತನಕ್ಕೆ ಅನುಕೂಲಕರವಾದ ಹೇಳಿಕೆಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಶುಕ್ರವಾರದ ಚರ್ಚೆಯ ನಂತರ ತನಗೆ ಮತ್ತು ತನ್ನ ಕುಟುಂಬಕ್ಕೆ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಶರ್ಮಾ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟ್ ಮಾಡಿದ್ದಾರೆ. ಶರ್ಮಾ ಅವರು ಇದನ್ನು ದೆಹಲಿ ಪೊಲೀಸರ ಟ್ವಿಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಿದ ನಂತರ ಶ್ರೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸಲಾಗುವುದು ಎಂದು ಪೊಲೀಸರು ಪ್ರತಿಕ್ರಿಯಿಸಿದ್ದರು.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:59 pm, Sun, 29 May 22

Follow Us
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು
ಜೈಲಿನಲ್ಲಿ ಪವಿತ್ರಾ ಗೌಡಗೆ ವಿಪರೀತ ಜ್ವರ; ವಿಚಾರಣೆಗೆ ಗೈರು