ಕೆ.ಎಸ್.ಈಶ್ವರಪ್ಪ ನನ್ನ ಅಯೋಗ್ಯ ಅಂತಾನೆ. ಈಶ್ವರಪ್ಪ ಲಂಚ ಪಡೆದು ಸಚಿವ ಸ್ಥಾನ ಕಳೆದುಕೊಂಡಿದ್ದಾನೆ: ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನನ್ನ ಅಯೋಗ್ಯ ಅಂತಾನೆ. ಈಶ್ವರಪ್ಪ ಲಂಚ ಪಡೆದು ಸಚಿವ ಸ್ಥಾನ ಕಳೆದುಕೊಂಡಿದ್ದಾನೆ. ಈಗ ನನ್ನ ಬಗ್ಗೆ ಮಾತಾಡ್ತಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ.
ಹಾಸನ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ನನ್ನ ಅಯೋಗ್ಯ ಅಂತಾನೆ. ಈಶ್ವರಪ್ಪ ಲಂಚ ಪಡೆದು ಸಚಿವ ಸ್ಥಾನ ಕಳೆದುಕೊಂಡಿದ್ದಾನೆ. ಈಗ ನನ್ನ ಬಗ್ಗೆ ಮಾತಾಡ್ತಾನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಚನ್ನರಾಯಪಟ್ಟಣ ದಲ್ಲಿ ದಕ್ಷಿಣ ಪದವಿ ದರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ದೇಶ ಹಾಗೂ ಸಂವಿಧಾನ ಉಳಿಸಲು ಕಾಂಗ್ರೆಸ್ನಿಂದ ಸಾಧ್ಯ. ಎಲ್ಲರೂ ಎದೆ ಬಡಿದುಕೊಂಡು ನನ್ನ ಮೇಲೆ ಬಿದ್ದಿದ್ದಾರೆ. ನಾನು ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು ಎಂದಿದ್ದೆ. ನೀವೆಲ್ಲಾ ಇತಿಹಾಸ ಓದಿದ್ದೀರಿ ತಾನೆ, ಅದು ನಿಜಾ ಅಲ್ವಾ? ಇದ್ದದ್ದು ಇದ್ದಂಗೆ ಹೇಳಿದರೆ ಎದ್ದು ಬಂದು ಎದೆಗೊದ್ದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನು ಓದಿ: ಅಂಬರೀಷ್- ಸುಮಲತಾ ‘ಪ್ರೇಮ ಪಲ್ಲವಿ’ ಹೇಗಿತ್ತು? ಟಿವಿ9 ವಿಶೇಷ ಸಂದರ್ಶನ ಇಲ್ಲಿದೆ
ನಮ್ಮ ಸರ್ಕಾರ ಮತ್ತೆ ಅದಿಕಾರಕ್ಕೆ ಬಂದರೆ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ.ಕಾಂಗ್ರೆಸ್ ಎಂದು ಕೊಟ್ಟ ಮಾತಿಗೆ ತಪ್ಪೋದಿಲ್ಲ. ಹಾಗಾಗಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕೋ ಬೇಡವೋ? ಮಧು ಮಾದೇಗೌಡ ತಂದೆ ಶಾಸಕರು, ಸಂಸದರು, ಸಚಿವರಾಗಿಯು ಕೆಲಸ ಮಾಡಿದ್ದಾರೆ. ಮಾದೇಗೌಡ ಓರ್ವ ಶಿಕ್ಷಣ ಪ್ರೇಮಿ, ರೈತ ಪರ ಹೋರಾಟಗಾರ ಆಗಿದ್ದರು. ಕೊನೆ ಉಸಿರಿರೋವರೆಗು ಮಾದೇಗೌಡರು ಹೋರಾಟ ಮಾಡಿದ್ದಾರೆ. ಅವರ ಪುತ್ರ ಮಧು ಮಾದೇಗೌಡ, ಇವರು ಗೆದ್ದರೆ ಪದವೀದರರ ಸಮಸ್ಯೆ ಬಗೆಹರಿಯುತ್ತೆ. ಈ ಚುನಾವಣೆಯಲ್ಲಿ ಮಧು ಮಾದೇಗೌಡ ಗೆದ್ದರೆ ಅಸೆಂಬ್ಲಿ ಚುನಾವಣೆ ಗೆ ದಿಕ್ಸೂಚಿ ಆಗುತ್ತೆ. ವಿದಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ರೆ ಮಾತ್ರ ರಾಜ್ಯ ಉಳಿಯುತ್ತೆ ಹಾಗಾಗಿ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ ಸಿಂಗ್ ಪ್ರಧಾನ ಮಂತ್ರಿ ಇದ್ದಾಗ ಇದ್ದಾಗ 53.155 ಲಕ್ಷ ಕೋಟಿ ಸಾಲ ಆಗಿದೆ. ಈಗ ದೇಶದ ಪ್ರತಿಯೊಬ್ಬ ರೂ 1.68 ಲಕ್ಷ ಮೊತ್ತದ ಸಾಲಗಾರರು. ಇಂತಹ ಬಿಜೆಪಿ ಇರಬೇಕಾ, ಕಿತ್ತು ಎಸೆಯಿರಿ. ದಯವಿಟ್ಟು ರಾಜ್ಯ ಉಳಿಸ್ರಪ್ಪ ನಿಮ್ಮ ಕೈ ಮುಗಿತಿನಿ. ಇವರ ಕೈಯಲ್ಲಿ ರಾಜ್ಯ ದೇಶ ಸುರಕ್ಷಿತ ವಾಗಿ ಇರೋಕೆ ಸಾದ್ಯವಿಲ್ಲ. ದೇಶ ಉಳಿಸಲು ಜೆಡಿಎಸ್ ನಿಂದ ಸಾದ್ಯ ಇಲ್ಲ ದೇಶ ಉಳಿಸಲು, ಸಂವಿದಾನ ಉಳಿಸಲು ಕಾಂಗ್ರೆಸ್ ನಿಂದ ಮಾತ್ರ ಸಾದ್ಯ ಎಂದು ಹೇಳಿದರು.
ಬೆಲೆ ಏರಿಕೆಗೆ ಮೋದಿ ನೇತೃತ್ವದ ಸರ್ಕಾರ ನೇರ ಕಾರಣವಾಗಿದೆ. ದೇಶದಲ್ಲಿಂದು ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏನಾಗಿದೆ? ನಾವಿದ್ದಾಗ ಗ್ಯಾಸ್ ಬೆಲೆ ಎಷ್ಟಿತ್ತು? ಈಗ ಸಾವಿರದ ಗಡಿ ದಾಟಿದೆ. ಇಷ್ಟೆಲ್ಲಾ ಅನ್ಯಾಯ ಮಾಡಿದವರಿಗೆ ಮತ ಹಾಕಬೇಕಾ? ನಿಮಗೆ ಸಿಟ್ಟು ಬರುವುದಿಲ್ವಾ? ರಕ್ತ ಕುದಿಯುವುದಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಪಾಪ ಪೊಲೀಸ್ ಇಲಾಖೆಯವರಿಗೆ ಕೆಲಸ ಮಾಡಲು ಕಷ್ಟ ಆಗಿದೆ. ಹಣ ಇಲ್ಲದಿದ್ದರೆ ವರ್ಗಾವಣೆ ಆಗಲ್ಲ ಅನ್ನೋದು ಗೊತ್ತಾಗಿದೆ. ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ವಿಧಾನಸೌಧದಲ್ಲಿ ಎಲ್ಲಿ ಹೋದರೂ ಲಂಚ ಕೇಳುತ್ತಾರೆ ಎಂದು ಸರಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ನಾನು ಚನ್ನರಾಯಪಟ್ಟಣ ಕ್ಕೆ ನೀರಾವರಿ ಯೋಜನೆಗೆ 350. ಕೋಟಿ ಕೊಟ್ಟಿದ್ದೆ. ನೀರಾವರಿಗೆ ಹೆಚ್ಚು ಹಣ ಕೊಟ್ಟಿದ್ದು ನಮ್ಮ ಸರ್ಕಾರ ಆ ಶಿವಲಿಂಗೇಗೌಡ ನ ಕೇಳಿ ಹೇಳುತ್ತಾರೆ. ನಾನು ಉಚಿತ ಅಕ್ಕಿ ಕೊಟ್ಟೆ ಕೇವಲ ಕುರುಬರಿಗೆ ಕೊಟ್ಟಿದ್ದಾ? ಎಲ್ಲಾ ಬಡವರಿಗೆ ನಾವು ಉಚಿತವಾಗಿ ಅಕ್ಕಿ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಬಡವರಿಗೆ ಮನೆ ನಿರ್ಮಿಸಿಕೊಡಲು ಆಗಿಲ್ಲ. ಕುಮಾರಸ್ವಾಮಿ ಸಿಎಂ ಆದರು, ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಎಂ ಆದರು. ಈಗ ಬೊಮ್ಮಾಯಿ ಅವರು ಆಡಳಿತ ನಡೆಸುತ್ತಿದ್ದಾರೆ. ಹೆಚ್ಡಿಕೆ ಅವಧಿಯಲ್ಲಾಗಲಿ, ಈಗಿನ ಸರ್ಕಾರ ಆಗಲಿಬಡವರಿಗೆ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ನಾವು ಕೊಟ್ಟ ಮನೆಗಳಿಗೆ ಇವರಿಗೆ ಹಣ ಕೊಡೋಕೆ ಆಗಿಲ್ಲ. ಇವರ ಯೋಗ್ಯತೆಗೆ ಒಂದೇ ಒಂದು ಮನೆ ಕೊಡೋಕೆ ಆಗಿಲ್ಲ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ವಾಗ್ದಾಳಿ ವಿಚಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಸಚಿವ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದವರು. ಬಿಜೆಪಿಗೆ ಹೋಗಿ ಹೊಸದಾಗಿ ಏನೇನೋ ಮಾತನಾಡುತ್ತಿದ್ದಾರೆ. ಮಡಿವಾಳರು ಗೋಣಿಚೀಲ ಒಗೀತಾರೆ, ಬರ್ತಾ ಬರ್ತಾ ಬಿಟ್ಟುಬಿಡ್ತಾರೆ. ಪಾಪ ಸಚಿವ ಸೋಮಶೇಖರ್ ಕಥೆ ಹಾಗೆ ಆಗಿದೆ. ಅಲ್ಲಿಗೆ ಹೋಗಿ ಆರ್ಎಸ್ಎಸ್ ಹೊಗಳೋಕೆ ಶುರು ಮಾಡಿದ್ದಾರೆ. ಸೋಮಶೇಖರ್ ಆರ್ಎಸ್ಎಸ್ನವರಲ್ಲ, RSS ತರಬೇತಿಯೂ ಆಗಿಲ್ಲ ಎಂದು ಹೇಳಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Sun, 29 May 22