ಉತ್ತರ ಪ್ರದೇಶದ ಅಪಘಾತದಲ್ಲಿ ಬೀದರ್​ನ 7 ಜನ ಸಾವು; ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ

ಉತ್ತರ ಪ್ರದೇಶದ ಅಪಘಾತದಲ್ಲಿ ಬೀದರ್​ನ 7 ಜನ ಸಾವು; ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಿಎಂ ಯೋಗಿ ಆದಿತ್ಯನಾಥ್​ಗೆ ಬೊಮ್ಮಾಯಿ ಮನವಿ
ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಗಳು

ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿತ್ತು. ಬೀದರ್ ನಿಂದ ಟಿಟಿಯಲ್ಲಿ ಅಯೋಧ್ಯೆ ಕಡೆ ತೆರಳುತ್ತಿದ್ದ 16 ಜನರ ತಂಡ ಅಪಘಾತಕ್ಕೀಡಾಗಿತ್ತು. ಅಪಘಾತದ ಸ್ಥಳದಲ್ಲಿ 7 ಜನ ಸಾವನ್ನಪ್ಪಿ, 9 ಜನರಿಗೆ ಗಾಯವಾಗಿತ್ತು.

TV9kannada Web Team

| Edited By: Sushma Chakre

May 29, 2022 | 5:15 PM

ಬೀದರ್: ಅಯೋಧ್ಯೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೀದರ್​ನ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೀದರ್ ನಗರದ ಗುಂಪಾ ಕಾಲೋನಿಯ ಒಂದೇ ಕುಟುಂಬದ 7 ಜನರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ 9 ಜನರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ (Uttar Pradesh Accident) ನಡೆದ ಅಪಘಾತದಲ್ಲಿ ಬೀದರ್​ ಮೂಲದ 7 ಜನ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸಿಎಂ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾತುಕತೆ ನಡೆಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಅಪಘಾತದಲ್ಲಿ ಸಾವನ್ನಪ್ಪಿದವರ ಶವಗಳನ್ನು ರಾಜ್ಯಕ್ಕೆ ಕಳಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ (Yogi Adityanath) ಸೇರಿದಂತೆ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳ​​ ಜೊತೆ ಚರ್ಚೆ ನಡೆಸಿದ್ದಾರೆ.

ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿತ್ತು. ಬೀದರ್ ನಿಂದ ಟಿಟಿಯಲ್ಲಿ ಅಯೋಧ್ಯೆ ಕಡೆ ತೆರಳುತ್ತಿದ್ದ 16 ಜನರ ತಂಡ ಅಪಘಾತಕ್ಕೀಡಾಗಿತ್ತು. ಅಪಘಾತದ ಸ್ಥಳದಲ್ಲಿ 7 ಜನ ಸಾವನ್ನಪ್ಪಿ, 9 ಜನರಿಗೆ ಗಾಯವಾಗಿತ್ತು. ಒಂಭತ್ತೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಿಎಂ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. 7 ಮೃತದೇಹಗಳು ಉತ್ತರ ಪ್ರದೇಶದಿಂದ ಹೈದರಾಬಾದ್ ಗೆ ರವಾನೆಯಾಗಿದೆ. ಹೈದರಾಬಾದ್​ನಿಂದ ರಸ್ತೆ ಮಾರ್ಗದಲ್ಲಿ ಬೀದರ್​ಗೆ ರವಾನಿಸಲು ವ್ಯವಸ್ಥೆ ಮಾಡಿಸಲಾಗಿದೆ.

ಉತ್ತರ ಪ್ರದೇಶ ರಾಜ್ಯದ ಲಖಿಂಪುರ ಖೇರಿ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿದೆ. ಮುಜಾಫರ್ ಜಿಲ್ಲೆಯ ಮೋತಿಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಖೇರಿ- ನಾಗಪುರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲಖಿಂಪುರ – ಮೋತಿಪುರ್ ಬಳಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸುಮಾರು 6 ಗಂಟೆಗೆ ದುರ್ಘಟನೆ ನಡೆದಿದೆ. ಬೀದರ್​ನಿಂದ 16 ಮಂದಿ ಟಿಟಿ ಟ್ರಾವೆಲರ್ ಬಸ್ ನಲ್ಲಿ ಪ್ರವಾಸಕ್ಕೆ ತೆರಳಿದ್ದರು. ಲಖಿಂಪುರ ಖೇರಿಯಿಂದ ಆಯೋಧ್ಯೆಗೆ ಪ್ರವಾಸ ಹೊರಟಿದ್ದರು. ಈ ವೇಳೆ ಲಾರಿ ಮತ್ತು ಟ್ರಾವೆಲರ್ ಮಧ್ಯ ಭೀಕರ ಅಪಘಾತ ಸಂಭವಿಸಿದೆ. ಈವದುರ್ಘಟನೆಯಲ್ಲಿ ಬೀದರ್ ಮೂಲದ 7 ಜನ ದುರ್ಮರನಕ್ಕಿಡಾಗಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಅಪಘಾತ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ, ಮೃತರು ನಮ್ಮವರಲ್ಲ ಹೀಗಾಗಿ ಪರಿಹಾರ ಕೊಡೋಕೆ ಬರಲ್ಲ ಎಂದ ಸಚಿವ ಹಾಲಪ್ಪ ಆಚಾರ್

ಮೃತಪಟ್ಟವರನ್ನು ಬೀದರ್​ನ ಶಿವಕುಮಾರ್ (28), ಜಗದಂಬಾ (52), ಮನ್ಮಥ (36), ಅನಿಲ್ (30), ಸಂತೋಷ, ಶಶಿಕಲಾ (38), ಸರಸ್ವತಿ (42) ಎಂದು ಗುರುತಿಸಲಾಗಿದೆ. ಈ ಅಪಘಾತದಲ್ಲಿ ಗಾಯಗೊಂಡಿರುವವರ ಪೈಕಿ ಮೂವರ ಸ್ಥಿತಿ ಚಿಂತಾಚನಕವಾಗಿದೆ, 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತದಲ್ಲಿ ಬೈಕ್ ಸವಾರ ಸಾವು:

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಬಳಿ ಸರ್ಕಾರಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ವಿನೋದ್ ಚಿಕಲೆ (38) ಸಾವನ್ನಪ್ಪಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಿಗೆ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಬುಲೆಟ್ ವಾಹನ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ವಿನೋದ್ ಚಿಕಲೆ (38) ಮೃತ ದುರ್ದೈವಿ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮ ಬಳಿ ಘಟನೆ ನಡೆದಿದೆ. ಮೃತ ವಿನೋದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿಯಾಗಿದ್ದಾರೆ. ಶಿರಗುಪ್ಪಿಯಿಂದ ಅಂಕಲಿಗೆ ಬರುತ್ತಿದ್ದ ವಿನೋದ ಚಿಕ್ಕೋಡಿಯಿಂದ ಚಂದೂರ ಗ್ರಾಮಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಬೈಕ್​ಗೆ ಡಿಕ್ಕಿ ಹೊಡೆದಿತ್ತು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada