ಅಯೋಧ್ಯೆಗೆ ತೆರಳುತ್ತಿದ್ದ ಬೀದರ್​ನ ಒಂದೇ ಕುಟುಂಬದ 7 ಜನರು ಅಪಫಾತದಲ್ಲಿ ದುರ್ಮರಣ

ಅಯೋಧ್ಯೆಗೆ ತೆರಳುತ್ತಿದ್ದ ಬೀದರ್​ನ ಒಂದೇ ಕುಟುಂಬದ 7 ಜನರು ಅಪಫಾತದಲ್ಲಿ ದುರ್ಮರಣ
ಟಿಟಿ ವಾಹನ ಮತ್ತು ಲಾರಿ ನಡುವೆ ಅಪಘಾತ ನಡೆದಿದೆ

ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಹೆದ್ದಾರಿಯಲ್ಲಿ ದುರಂತ ಸಭವಿಸಿದೆ. ಬೀದರ್​ನ ಪ್ರವಾಸಿಗರು ತೆರಳುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಟಿಟಿ ವಾಹನದಲ್ಲಿದ್ದ 7 ಜನರು ಮೃತಪಟ್ಟಿದ್ದರೆ, 9 ಜನರಿಗೆ ಗಂಭೀರ ಗಾಯವಾಗಿದೆ.

TV9kannada Web Team

| Edited By: sandhya thejappa

May 29, 2022 | 2:46 PM

ಬೀದರ್: ಅಯೋಧ್ಯೆಗೆ (ayodhya) ತೆರಳುತ್ತಿದ್ದ ಬೀದರ್​ನ (Bidar) 7 ಜನರು ಇಂದು (ಮೇ 29) ಅಪಘಾತದಲ್ಲಿ (Accident) ಸಾವನ್ನಪ್ಪಿದ್ದಾರೆ. ಮೃತರು ಗುಂಪಾ ಕಾಲೋನಿಯ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ಲಖೀಂಪುರ ಖೇರಿ ಬಳಿ ಹೆದ್ದಾರಿಯಲ್ಲಿ ದುರಂತ ಸಭವಿಸಿದೆ. ಬೀದರ್​ನ ಪ್ರವಾಸಿಗರು ತೆರಳುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾಗಿದೆ. ಈ ವೇಳೆ ಟಿಟಿ ವಾಹನದಲ್ಲಿದ್ದ 7 ಜನರು ಮೃತಪಟ್ಟಿದ್ದರೆ, 9 ಜನರಿಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ಘಟನೆ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

ಗಾಯಗೊಂಡಿರುವ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ, ಶಿವಕುಮಾರ್(28), ಜಗದಾಂಬಾ(52), ಮನ್ಮಥ(36), ಅನಿಲ್(30) ಸಂತೋಷ(29), ಶಶಿಕಲಾ(38), ಸರಸ್ವತಿ(42) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷಿಸಿದ ರಷ್ಯಾ: 1000 ಕಿಮೀ ದೂರದ ಗುರಿ ಧ್ವಂಸ

ಸಾರಿಗೆ ಬಸ್, ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿ! ಬೆಳಗಾವಿ: ಸಾರಿಗೆ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬುಲೆಟ್ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 38 ವರ್ಷದ ವಿನೋದ್ ಚಿಕಲೆ ಮೃತ ದುರ್ದೈವಿ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಘಟನೆ ನಡೆದಿದೆ. ಮೃತ ವಿನೋದ್ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ನಿವಾಸಿ. ಶಿರಗುಪ್ಪಿಯಿಂದ ಅಂಕಲಿಗೆ ಬರುತ್ತಿದ್ದ ವಿನೋದ್ ಚಿಕ್ಕೋಡಿಯಿಂದ ಚಂದೂರ ಗ್ರಾಮಕ್ಕೆ ಹೋಗುತ್ತಿದ್ದ. ಘಟನೆ ಕುರಿತು ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ತಲೆಕೊಟ್ಟು ಯುವಕನ ಆತ್ಮಹತ್ಯೆ: ಮಂಡ್ಯ: ರೈಲಿಗೆ ತಲೆಕೊಟ್ಟು ಯುವಕನ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿ ಸಂಭವಿಸಿದೆ. ಪಟ್ಟಣದ ಮಾರಿಗುಡಿ ನಿವಾಸಿ ಮನೋಜ್(30) ಮೃತ ಯುವಕ. ಯುವಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada