ಅನುಮಾನಸ್ಪದವಾಗಿ ಟ್ರಾನ್ಸ್ ಪೊರ್ಟ್ ಮಾಲೀಕ ನೇಣುಬಿಗಿದುಕೊಂಡು ಆತ್ಮಹತ್ಯೆ

ಅನುಮಾನಸ್ಪದವಾಗಿ ಟ್ರಾನ್ಸ್ ಪೊರ್ಟ್ ಮಾಲೀಕ ನೇಣುಬಿಗಿದುಕೊಂಡು ಆತ್ಮಹತ್ಯೆ
ಪ್ರಮೋದ್ ಹೆಗಡೆ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ದೊಡ್ಡಬಳ್ಳಾಪುರದಲ್ಲಿ ದರೋಡೆ ಗ್ಯಾಂಗ್ ಕೃತ್ಯಗಳಿಗೆ ಜನರು ಬೆಚ್ಚಿ ಬಿದಿದ್ದಾರೆ. ಒಂದೇ ವಾರದಲ್ಲಿ ಮೂರು ಕಡೆ ವಾಹನಗಳನ್ನ ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 29, 2022 | 2:58 PM

ನೆಲಮಂಗಲ: ಬೆಂಗಳೂರಿನಲ್ಲಿ ಟ್ರಾನ್ಸ್​ಪೋರ್ಟ್​ ಮಾಲೀಕ ನೇಣಿಗೆ ಶರಣಾಗಿರುವಂತಹ ಘಟನೆ ಹೆಸರಘಟ್ಟ ರಸ್ತೆಯ ಹಾವನೂರು ಬಡಾವಣೆ ಮನೆಯಲ್ಲಿ ನಡೆದಿದೆ. ಮೂಡಬಿದ್ರೆ ಮೂಲದ ಪ್ರಮೋದ್ ಹೆಗಡೆ(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 16 ವರ್ಷಗಳ ಹಿಂದೆ ವೀಣಾರನ್ನು ಪ್ರಮೋದ್ ಮದುವೆಯಾಗಿದ್ದ.  ಪತ್ನಿ ವೀಣಾ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ನೇಣಿಗೆ ಶರಣಾಗಿದ್ದಾರೆ. ಸ್ನೇಹಿತರ ಜೊತೆ ಕ್ರಿಕೆಟ್ ಮ್ಯಾಚ್​ ನೋಡಿಕೊಂಡಿದ್ದ ಪ್ರಮೋದ್​, ರಾತ್ರಿ 10.30ರ ಸುಮಾರಿಗೆ ಹೆಗಡೆ​ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆ ಶಶಿಗೌಡಗೆ ಮಾಹಿತಿ ನೀಡಿದ್ದು, ವೀಣಾ ಸೂಚನೆ ಮೇರೆಗೆ ಮನೆ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಪ್ರಮೋದ್ ಹೆಗಡೆ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ; ಕಾಂಗ್ರೆಸ್ ಸಮಾವೇಶಗಳಿಗೆ ಗೈರು ವಿಚಾರ; ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಹೇಳಿದ್ದೇನು?

ದೊಡ್ಡಬಳ್ಳಾಪುರದಲ್ಲಿ ದರೋಡೆ ಗ್ಯಾಂಗ್ ಕೃತ್ಯಗಳಿಗೆ ಬೆಚ್ಚಿ ಬಿದ್ದ ಜನರು

ದೇವನಹಳ್ಳಿ: ದೊಡ್ಡಬಳ್ಳಾಪುರದಲ್ಲಿ ದರೋಡೆ ಗ್ಯಾಂಗ್ ಕೃತ್ಯಗಳಿಗೆ ಜನರು ಬೆಚ್ಚಿ ಬಿದಿದ್ದಾರೆ. ಒಂದೇ ವಾರದಲ್ಲಿ ಮೂರು ಕಡೆ ವಾಹನಗಳನ್ನ ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ದರೋಡೆಕೋರರ ಅಟ್ಟಹಾಸ ಹೆಚ್ಚಾಗಿದ್ದು, ತಾಲೂಕಿನ ತೂಬಗೆರೆ, ರೈಲ್ವೆ ಸ್ಟೇಷನ್ ಮತ್ತು ಕೈಗಾರಿಕಾ ಪ್ರದೇಶದಲ್ಲಿ ದರೋಡೆಕೋರರ ಕೃತ್ಯವೆಸಗುತ್ತಿದ್ದಾರೆ. ಕಳೆದ ನಾಲ್ಲು ದಿನಗಳಲ್ಲಿ ವೆಂಕಟೇಶ್ ಬಾಬು, ವಿಶ್ವನಾಥ್ ಎಂಬುವವರ ಬೈಕ್ ಮತ್ತು ಸರ್ಕಾರಿ ಅಧಿಕಾರಿ ಮುಕುಂದ ಎಂಬುವವರ ಕಾರು ಅಡ್ಡಗಟ್ಟಿ ಹಲ್ಲೆ ಮತ್ತು ದರೋಡೆ ಮಾಡಲಾಗಿದೆ. ಡ್ರಾಪ್ ಕೇಳುವ ನೆಪದಲ್ಲಿ ಗಾಡಿ ನಿಲ್ಲಿಸಿ ಅಡ್ಡಾಹಾಕಿ ಲಾಂಗು ಮಚ್ಚು ರಾಡ್ಗಳನ್ನ ತೋರಿಸಿ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣವನ್ನು ಖದೀಮರು ಕಿತ್ತುಕೊಳ್ಳುತ್ತಿದ್ದರು. ಸರಣಿ ದರೋಡೆ ಕೃತ್ಯಗಳಿಂದಾಗಿ ಸಂಜೆಯಾದ್ರೆ ಒಂಟಿಯಾಗಿ ಓಡಾಡಲು ತಾಲೂಕಿನ ಜನರು ಹೆದರುತ್ತಿದ್ದಾರೆ. ಸರಣಿ ದರೋಡೆ ಪ್ರಕರಣಗಳಿಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ತಲೆನೊವಾಗಿದ್ದು, ನಿರಂತರ ರಸ್ತೆಯಲ್ಲಿ ಅಡ್ಡಗಟ್ಟಿ ದರೋಡೆ ಮಾಡ್ತಿರೋ ಗ್ಯಾಂಗ್ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ದೇವರ ಹುಂಡಿ ಕಳ್ಳತನ:

ಶಿವಮೊಗ್ಗ: ದೇವಸ್ಥಾನದ ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಿರುವಂತಹ ಘಟನೆ ತಾಲೂಕಿನ ಪುರದಾಳು ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ದೇವಸ್ಥಾನದ ಬೀಗ ಒಡೆದು ಕಳ್ಳತನ ಮಾಡಿದ್ದು, ದೇವಾಲಯದೊಳಗೆ ಮುಂದಿದ್ದ ಹುಂಡಿ ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ಹಾನಿ ಮಾಡಿರುವ ಕಳ್ಳರು, ಇಂದು ಬೆಳಗ್ಗೆ ಅರ್ಚಕರು ಬಂದು, ನೋಡಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow us on

Related Stories

Most Read Stories

Click on your DTH Provider to Add TV9 Kannada