ಮೈಸೂರು ಕೇಂದ್ರ ಕಾರಗೃಹಕ್ಕೆ ನ್ಯಾ. ವೀರಪ್ಪ ದಿಢೀರ್ ಭೇಟಿ, ಸಾಂಬಾರ್ ಹುಳಿ ಕಡಿಮೆ ಇದೆ ಸರಿ ಮಾಡಿ ಎಂದ ನ್ಯಾ.ವೀರಪ್ಪ!

ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿ ನೀಡಿ ಎಲ್ಲಾ ವಿಭಾಗಗಳನ್ನು ಪರಿಶೀಲನೆ ನಡೆಸಿದರು. ಇದೇ ವೇಳೆ ಸಾಂಬಾರು ರುಚಿ ನೋಡಿ ಸರಿ ಮಾಡುವಂತೆ ಸೂಚಿಸಿದರು.

ಮೈಸೂರು ಕೇಂದ್ರ ಕಾರಗೃಹಕ್ಕೆ ನ್ಯಾ. ವೀರಪ್ಪ ದಿಢೀರ್ ಭೇಟಿ, ಸಾಂಬಾರ್ ಹುಳಿ ಕಡಿಮೆ ಇದೆ ಸರಿ ಮಾಡಿ ಎಂದ ನ್ಯಾ.ವೀರಪ್ಪ!
ಗಾರೆ ಕಲಸಿ ಹಾಕುವುದು ಹೇಗೆ ಎಂದು ತೋರಿಸಿಕೊಟ್ಟ ನ್ಯಾ.ವೀರಪ್ಪ
Follow us
TV9 Web
| Updated By: Rakesh Nayak Manchi

Updated on: May 29, 2022 | 9:58 AM

ಮೈಸೂರು: ಹೈಕೋರ್ಟ್ ನ್ಯಾಯಮೂರ್ತಿ (Justice) ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೀರಪ್ಪ (Veerappa) ಅವರು ಇಂದು ಮೈಸೂರಿನ ಕೇಂದ್ರ ಕಾರಾಗೃಹ (Central Prison)ಕ್ಕೆ ದಿಢೀರ್ ಭೇಟಿ (Visit) ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೈದಿಗಳಿಂದ ಅಹವಾಲು ಸ್ವೀಕರಿಸಿದ ನ್ಯಾಯಮೂರ್ತಿಯವರು, ಪಾಕಶಾಲೆ ಹಾಗೂ ಕಾರಾಗೃಹದ ಎಲ್ಲಾ ಭಾಗಗಳನ್ನು ಪರಿಶೀಲನೆ ನಡೆಸಿದರು.

ಕೈದಿಗಳಿಂದ ಅಹವಾಲು ಸ್ವೀಕರಿಸಿದ ನ್ಯಾಯಮೂರ್ತಿ ವೀರಪ್ಪ ಅವರು, ಬಡ ಕೈದಿಗಳಿಗೆ ಕಾನೂನು ಸೇವೆ ಲಭ್ಯವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಲ್ಲದೆ, ಗಾರೆ ಕಲಸಿ ಹಾಕುವುದು ಹೇಗೆ ಎಂದು ತೋರಿಸಿಕೊಟ್ಟರು. ಇನ್ನು ಪಾಕಶಾಲೆಗೆ ಭೇಟಿ ನೀಡಿದ ವೀರಪ್ಪ ಅವರು ಕೈದಿಗಳಿಗೆ ತಯಾರಿಸಿದ ಆಹಾರದ ರುಚಿ ನೋಡಿದರು. ಈ ವೇಳೆ ಸಾಂಬರ್​ನಲ್ಲಿ ಹುಳಿ ಕಡಿಮೆ ಇರುವುದು ತಿಳಿದು ಸರಿಮಾಡುವಂತೆ ಸೂಚಿಸಿದರು.

ಈ ಹಿಂದೆ ಧಾರವಾಡದಲ್ಲಿನ ಕೇಂದ್ರ ಕಾರಾಗೃಹಕ್ಕೆ ವೀರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೈದಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಅಲ್ಲದೆ, ಗ್ರಂಥಾಲಯಕ್ಕೆ ಭೇಟಿ ನೀಡಿ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕಗಳನ್ನು ಕೇಳುತ್ತಾ ವೀರ ಸಾವರ್ಕರ್ ಪುಸ್ತಕ ಎಲ್ಲಿ ಎಂದು ಕೇಳಿದ್ದರು. ಅವರ ಪುಸ್ತಕ ಇಲ್ಲ ಎಂದು ಸಿಬ್ಬಂದಿ ಹೇಳಿದಾಗ ಅವರ ಪುಸ್ತಕವನ್ನೂ ತಂಡಿಡುವಂತೆ ಸೂಚಿಸಿದ್ದರು. ನಂತರ ಪಾಕಶಾಲೆಗೆ ಭೇಟಿ ನೀಡಿ, ಆಹಾರಗಳನ್ನು ಪರಿಶೀಲಿಸಿದರು. ಈ ವೇಳೆ ಮಜ್ಜಿಗೆ ರುಚಿ ಬರಲು ಏನು ಹಾಕಬೇಕು ಎಂದು ತಿಳಿಸಿಕೊಟ್ಟಿದ್ದರು.

ಇದನ್ನೂ ಓದಿ: ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ. ಬಿ. ವೀರಪ್ಪ ಭೇಟಿ: ವೀರ ಸಾವರ್ಕರ್ ಪುಸ್ತಕ ಎಲ್ಲಿ ಎಂದು ಪ್ರಶ್ನಿಸಿದ ನ್ಯಾಯಮೂರ್ತಿ

ಖಿನ್ನತೆಗೊಳಗಾಗಿ ಗೃಹಿಣಿ ಆತ್ಮಹತ್ಯೆ

ಮೈಸೂರು: ಆಲನಹಳ್ಳಿ ಬಡಾವಣೆಯಲ್ಲಿ ಮಾನಸಿಕ ಖಿನ್ನತೆಗೊಳಗಾದ ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಲನಹಳ್ಳಿ ಬಡವಣೆ ನಿವಾಸಿ ನಾಗರತ್ನ(29) ನೇಣಿಗೆ ಶರಣಾದ ಗೃಹಿಣಿ. ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಾಗರತ್ನ, ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಡಾಖ್​​ನಲ್ಲಿ ಅಪಘಾತ: ಯೋಧರ ಸಾವಿಗೆ ರಾಷ್ಟ್ರಪತಿ, ಪ್ರಧಾನಿ ಮೋದಿ ಸಂತಾಪ

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ