ಆಧಾರ್ ಕಾರ್ಡ್ ಇಲ್ಲದೇ ರ್ಯಾಂಕ್ ವಿದ್ಯಾರ್ಥಿನಿಯ ಪರದಾಟ: ಶಿಕ್ಷಣ ಸಚಿವರ ಬಳಿ ಅಳಲು ತೋಡಿಕೊಂಡ ವಿದ್ಯಾರ್ಥಿನಿ
ಆಧಾರ್ ಕಾರ್ಡ್ಗಾಗಿ 11 ಬಾರಿ ಅರ್ಜಿ ಹಾಕಿದರು ಸಿಕ್ಕಿಲ್ಲ. ಆಧಾರ ಕಾರ್ಡ್ ಇಲ್ಲದೆ ಮುಂದಿನ ವಿದ್ಯಾಭ್ಯಾಸಕ್ಕೆ ಅಡ್ಡಿಯುಂಟಾಗಿದೆ. ಈ ಹಿನ್ನೆಲೆ ಆಧಾರ್ ಕಾರ್ಡ್ಗಾಗಿ ವಿದ್ಯಾರ್ಥಿನಿ ಬಸವಲೀಲಾ ಪರದಾಡುವಂತ್ತಾಗಿದ್ದು, ಶಿಕ್ಷಣ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾಳೆ.
ರಾಯಚೂರು: ಎಸ್ಎಸ್ಎಲ್ಸಿನಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆಧಾರ್ ಕಾರ್ಡ್ ಇಲ್ಲದೇ ಪರದಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆ ಸಿಂಧನೂರು ತಾಲ್ಲೂಕಿನ ಗೌಡನಭಾವಿ ಗ್ರಾಮದ ಬಸವಲೀಲಾ, ಆಧಾರ್ ಕಾರ್ಡ್ಗಾಗಿ ಪರದಾಡುತ್ತಿರೊ ವಿದ್ಯಾರ್ಥಿನಿ. ಆಧಾರ್ ಕಾರ್ಡ್ ಇಲ್ಲದೆ ರ್ಯಾಂಕ್ ವಿದ್ಯಾರ್ಥಿನಿ ಕಂಗಾಲಾಗಿದ್ದು, ಕೊನೆಗೆ ದಾರಿ ತೋಚದೆ ಶಿಕ್ಷಣ ಸಚಿವರ ಬಳಿ ಅಳಲು ತೋಡಿಕೊಂಡಿದ್ದಾಳೆ. ಈಕೆಗೆ ಇದೇ 2021-2022 ರ SSLCಯಲ್ಲಿ 625 ಅಂಕಗಳ ಪೈಕಿ 624 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿದ್ದಾಳೆ. 11 ಬಾರಿ ಅರ್ಜಿ ಹಾಕಿದರು ಈವರೆಗೆ ಆಧಾರ್ ಕಾರ್ಡ್ ಸಿಕ್ಕಿಲ್ಲ. ರ್ಯಾಂಕ್ ಬಂದರೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಧಾರ ಕಾರ್ಡ್ ಕಡ್ಡಾಯವಾಗಿದೆ. ಈ ಹಿನ್ನೆಲೆ ಆಧಾರ್ ಕಾರ್ಡ್ಗಾಗಿ ವಿದ್ಯಾರ್ಥಿನಿ ಬಸವಲೀಲಾ ಪರದಾಡುವಂತ್ತಾಗಿದೆ.
ಇದನ್ನೂ ಓದಿ: BRO Recruitment 2022: 876 ಹುದ್ದೆಗಳಿಗೆ ನೇಮಕಾತಿ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ
ಕಳೆದ 10 ವರ್ಷಗಳಲ್ಲಿ 11 ಬಾರಿ ಆಧಾರ್ ಕಾರ್ಡ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು, ವಿವಿಧ ತಾಂತ್ರಿಕ ಕಾರಣಗಳಿಂದ ಆಧಾರ್ ಕಾರ್ಡ್ ಅರ್ಜಿ ತಿರಸ್ಕಾರವಾಗಿದೆ. ಆಧಾರ್ ಕಾರ್ಡ್ ಇಲ್ಲದ ಹಿನ್ನೆಲೆ ಬಸವಲೀಲಾಗೆ ಸರ್ಕಾರದ ಸ್ಕಾಲರ್ ಶಿಪ್, ಹಾಗೂ ಇತರೆ ಸೌಲಭ್ಯ ಸಿಗುತ್ತಿಲ್ಲವೆಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾಳೆ. ವೈದ್ಯಳಾಗೊ ಕನಸು ಕಂಡಿರೋ ಬಡ ವಿದ್ಯಾರ್ಥಿನಿಗೆ ಆಧಾರ್ ಕಾರ್ಡ್ ಮುಳುವಾದಂತ್ತಾಗಿದೆ. ಜಿಲ್ಲೆ ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ವಿದ್ಯಾರ್ಥಿನಿ ನಿನ್ನೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಭೇಟಿಯಾಗಿದ್ದು, 11 ಬಾರೀ ಆಧಾರ್ ಕಾರ್ಡ್ ರಿಜೆಕ್ಟ್ ಆಗಿರೂ ಕುರಿತು ಮನವರಿಕೆ ಮಾಡಿದ್ದಾಳೆ. ಕೊನೆಗೆ ಈ ಬಗ್ಗೆ ಸಿಂಧನೂರು ತಹಶಿಲ್ದಾರ್ ಅವರಿಗೆ ಸೂಚಿಸಿ, ಕ್ರಮಕೈಗೊಳ್ಳೊದಾಗಿ ಸಚಿವರು ಭರವಸೆ ನೀಡಿದ್ದಾರೆ.
ಕೊನೆಗೂ ತಾರ್ಕಿಕ ಅಂತ್ಯ ಕಂಡ ಅರಕೆರೆ ಶಾಲಾ ಕಾಂಪೌಂಡ್ ವಿಚಾರ
ಮಂಡ್ಯ:ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಸರ್ಕಾರಿ ಶಾಲೆ ಕಾಂಪೌಂಡ್ ವಿಚಾರ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ಕಾಂಪೌಂಡ್ ನಿರ್ಮಿಸದಂತೆ ಶ್ರೀರಂಗಪಟ್ಟಣದ ಮಾಜಿ ಶಾಸಕ ರಮೇಶ್ ಬಾಬು ಕೋರ್ಟ್ ಮೆಟ್ಟಿಲೇರಿದ್ದರು. ಕಾಂಪೌಂಡ್ ನಿರ್ಮಿಸುವುದಾಗಿ ಶಾಸಕ ರವೀಂದ್ರ ಪಣ ತೊಟ್ಟಿದ್ದರು. ಕಾಂಪೌಂಡ್ ನಿರ್ಮಾಣ ತಡೆಕೋರಿ ರಮೇಶ್ ಅರ್ಜಿ ಸಲ್ಲಿಸಿದ್ದರು. ಮಾಜಿ ಶಾಸಕರ ಅರ್ಜಿಯನ್ನು ಜೆಎಂಎಫ್ಸಿ ನ್ಯಾಯಾಲಯ ವಜಾಗೊಳಿಸಿ, ನ್ಯಾ.ವೈ.ಹೆಚ್.ದೇವರಾಜ್ ದಂಡ ವಿಧಿಸಿದ್ದಾರೆ. ಬಳಿಕ ಕಾಂಪೌಂಡ್ ನಿರ್ಮಾಣಕ್ಕೆ ಬಂದಿದ್ದ ಅನುದಾನ ವಾಪಸ್ಸಾಗಿತ್ತು. ಬಿಡುಗಡೆಯಾಗಿದ್ದ 20 ಲಕ್ಷ ಅನುದಾನದಲ್ಲಿ ವಿವಾದದ ಹಿನ್ನೆಲೆ ಕೇವಲ 7.70 ಲಕ್ಷ ಹಣವಷ್ಟೇ ಬಳಕೆಯಾಗಿತ್ತು. ಉಳಿದ 12 ಲಕ್ಷದ 30 ಸಾವಿರ ಹಣ ಸರ್ಕಾರಕ್ಕೆ ವಾಪಸ್ಸಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.