ಆರ್​ಎಸ್​ಎಸ್​ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ವಾರ್ ವಿಚಾರ: ರೀಲ್ಸ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಂಚಾಲೇಶ್ವರಿ‌ ತೊಣಶ್ಯಾಳ

ಆರ್​ಎಸ್​ಎಸ್​ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ವಾರ್ ವಿಚಾರ: ರೀಲ್ಸ್ ಮೂಲಕ  ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಂಚಾಲೇಶ್ವರಿ‌ ತೊಣಶ್ಯಾಳ
ಮಾಜಿ ಸಿಎಂ ಸಿದ್ದರಾಮಯ್ಯ, ಮಂಚಾಲೇಶ್ವರಿ‌ ತೊಣಶ್ಯಾಳ

ಸಿದ್ದರಾಮಯ್ಯ ಅಂದರೆ, ನೂರಲ್ಲ ಸಾವಿರ ಜಿಹಾದಿ ಟೆರರಿಸ್ಟ್​​ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ ಎಂದು ಮಂಚಾಲೇಶ್ವರಿ‌ ತೊಣಶ್ಯಾಳ ರೀಲ್ಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧಕ್ಕೆ ಕಾರಣವಾಗಿದೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

May 29, 2022 | 10:40 AM

ವಿಜಯಪುರ: ಆರ್​ಎಸ್​ಎಸ್​ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ವಾರ್ ವಿಚಾರವಾಗಿ ಬಿಜೆಪಿ ಕಾರ್ಯಕರ್ತೆ ಹಾಗೂ ಹಿಂದೂ ಪರ ಸಂಘಟನೆ ‌ಮುಖಂಡೆ ರೀಲ್ಸ್ ಮಾಡೋ ಮೂಲಕ ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಮಂಚಾಲೇಶ್ವರಿ‌ ತೊಣಶ್ಯಾಳ ರೀಲ್ಸ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದು, ಸಿದ್ದರಾಮಯ್ಯ ಅಂದರೆ ಯಾರು ಎಂದು ಪ್ರಶ್ನೆಗೆ ಉತ್ತರಿಸಿದ ಮಂಚಾಲೇಶ್ವರಿ ತೊನಶ್ಯಾಳ, ಸಿದ್ದರಾಮಯ್ಯ ಅಂದರೆ ನೂರಲ್ಲ ಸಾವಿರ ಜಿಹಾದಿ ಟೆರರಿಸ್ಟ್​​ಗಳಿಗೆ ಸಮ ಒಬ್ಬ ಸಿದ್ದರಾಮಯ್ಯ ಎಂದು ರೀಲ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧಕ್ಕೆ ರೀಲ್ಸ್ ಕಾರಣವಾಗಿದ್ದು, ಮಂಚಾಲೇಶ್ವರಿ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಪರಿಶುರಾಮ್ ವಾಗ್ಮೋರೆ ಪರ ಮಂಚಾಲೇಶ್ವರಿ ತೊಣಶ್ಯಾಳ ಅಭಿಯಾನ ಮಾಡಿದ್ದರು.

ಸಿದ್ದರಾಮಯ್ಯಗೆ ಆರ್​ಎಸ್​ಎಸ್ ಬಗ್ಗೆ 1 ಪರ್ಸೆಂಟ್​ನಷ್ಟೂ ಗೊತ್ತಿಲ್ಲ

ಮೈಸೂರು: ಆರ್​ಎಸ್​ಎಸ್​ ಬಗ್ಗೆ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ನಗರದಲ್ಲಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಆರ್​ಎಸ್​ಎಸ್ ಬಗೆಗಿನ ಪುಸ್ತಕ ಕಳುಹಿಸುತ್ತೇನೆ. ಅದನ್ನು ಓದಿದ ನಂತರ ಸಿದ್ದರಾಮಯ್ಯ ಅವರಿಗೆ ಆರ್​​ಎಸ್​ಎಸ್​ ಬಗ್ಗೆ ಅರ್ಥವಾಗುತ್ತದೆ. ಅವರು ಬರುವುದಾದರೆ ನಾನೇ ಅವರನ್ನು ಆರ್​ಎಸ್​ಎಸ್​ ಕಚೇರಿಗೆ ಕರೆದುಕೊಂಡು ಹೋಗಿ ತೋರಿಸುತ್ತೇನೆ. ಆರ್​ ಎಸ್​ಎಸ್​ ದೇಶ ಸೇವೆ ಮಾಡುತ್ತಿದೆ. ಸಿದ್ದರಾಮಯ್ಯಗೆ ಆರ್​ಎಸ್​ಎಸ್ ಬಗ್ಗೆ 1% ಸಹಾ ಗೊತ್ತಿಲ್ಲ. ಸಿದ್ದರಾಮಯ್ಯ ಹೇಳಿಕೆಯನ್ನು ಯಾರು ಗಂಭೀರವಾಗಿ ಪರಿಗಣಿಸಬೇಡಿ. ಅವರ ಪಕ್ಷದಲ್ಲೇ ಅವರ ಹೇಳಿಕೆಗೆ ಕಿಮ್ಮತ್ತು ಇಲ್ಲ. ಮೊದಲು ಅವರ ಮಾತು ಭಾಷಣವನ್ನು ಎಲ್ಲರೂ ಕೇಳುತ್ತಿದ್ದರು. ಆದರೆ ಇತ್ತೀಚೆಗೆ ಅವರ ಮಾತಿನಲ್ಲಿ ತೂಕವಿಲ್ಲ. ನಾವು ಅವರ ಹೇಳಿಕೆಯನ್ನು ಗಂಭೀರವಾಗಿ ಪರುಗಣಿಸಿಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ಹೆಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯ

ಪಠ್ಯ ಪುಸ್ತಕ ಸಮಿತಿಯನ್ನ ಕೈ ಬಿಡಬೇಕೆಂಬ ಹೆಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ವಿಶ್ವನಾಥ್ ಯಾವಗಾಲೂ ಅಡ್ವೈಸ್ ಕೊಡುತ್ತಾ ಇರುತ್ತಾರೆ. ಒಳ್ಳೆ ಅಂಶಗಳನ್ನ ಪರಿಗಣಿಸುತ್ತೇವೆ. ಯಾವುದೇ ಕಾರಣಕ್ಕೂ ಕೇಸರಿಕರಣ ಮಾಡುತ್ತಿಲ್ಲಾ. ಯಾರು ಕಂಪ್ಲೀಟ್ ಆಗಿ ಪುಸ್ತಕವನ್ನು ಓದಿಲ್ಲಾ. ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಅಷ್ಟೇ. ವಿಶ್ವನಾಥ್ ಅವರು ಕೇವಲ ಕರ್ನಾಟಕದ ವಿಚಾರಕ್ಕೆ ಅಡ್ವೈಸ್ ಮಾಡುವುದಿಲ್ಲ. ನ್ಯಾಷನಲ್ ಹಾಗೂ ಇಂಟರ್ ನ್ಯಾಷನಲ್ ವಿಚಾರಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಅವರು ಹೇಳುವ ಒಳ್ಳೆಯದನ್ನು ಪರಿಗಣಿಸುತ್ತೇವೆ ನೆಗೆಟಿವ್ ನೆಗ್ಲೆಕ್ಟ್ ಮಾಡುತ್ತೇವೆ. ಅವರು ಹಿರಿಯ ರಾಜಕಾರಣಿ ಎಂದು ಸಚಿವ ಎಸ್.ಟಿ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Related Stories

Most Read Stories

Click on your DTH Provider to Add TV9 Kannada