ಕರ್ನಾಟಕದಲ್ಲಿ ತೀವ್ರಗೊಂಡ ಮಸೀದಿ-ಮಂದಿರ ದಂಗಲ್! ಮಸೀದಿ, ದರ್ಗಾಗಳ ತನಿಖೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹ

ಮಸೀದಿ ಮತ್ತು ದರ್ಗಾಗಳು ಹೇಗೆ ಆಯಿತು ಎಂದು ಐತಿಹಾಸಿಕವಾಗಿ ದಾಖಲೆ ಸಮೇತ ಕೂಲಂಕಷವಾಗಿ ತನಿಖೆ ಮಾಡಿ ಎಂದು ರಾಷ್ಟ್ರೀಯ ಕೇಸರಿ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಎಮ್ಎಸ್ ಹರೀಶ್ ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ತೀವ್ರಗೊಂಡ ಮಸೀದಿ-ಮಂದಿರ ದಂಗಲ್! ಮಸೀದಿ, ದರ್ಗಾಗಳ ತನಿಖೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹ
ಮಳಲಿ ದರ್ಗಾ
Follow us
TV9 Web
| Updated By: sandhya thejappa

Updated on:May 29, 2022 | 10:53 AM

ಬೆಂಗಳೂರು: ರಾಜ್ಯದಲ್ಲಿ ಮಸೀದಿ-ಮಂದಿರ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೆ ರಾಜ್ಯದ ಎಲ್ಲಾ ಮಸೀದಿ (Masjid), ದರ್ಗಾಗಳನ್ನು ತನಿಖೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ (Karnataka Government) ರಾಷ್ಟ್ರೀಯ ಕೇಸರಿ ಒಕ್ಕೂಟ ಆಗ್ರಹಿಸಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟು ಮಸೀದಿ ಮತ್ತು ದರ್ಗಾಗಳಿವೆ? ಈ ಬಗ್ಗೆ ಪುರಾತತ್ವ ಇಲಾಖೆ ಸಮಗ್ರ ಅಧ್ಯಯನ ನಡೆಸಬೇಕು. ಮಸೀದಿ ಮತ್ತು ದರ್ಗಾಗಳು ಹೇಗೆ ಆಯಿತು ಎಂದು ಐತಿಹಾಸಿಕವಾಗಿ ದಾಖಲೆ ಸಮೇತ ಕೂಲಂಕುಷವಾಗಿ ತನಿಖೆ ಮಾಡಿ ಎಂದು ರಾಷ್ಟ್ರೀಯ ಕೇಸರಿ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷ ಎಮ್ಎಸ್ ಹರೀಶ್ ಒತ್ತಾಯಿಸಿದ್ದಾರೆ.

ರಾಜ್ಯದ ಕೆಲವು ಮಸೀದಿಗಳು ಮತ್ತು ದರ್ಗಾಗಳಲ್ಲಿ ಕಾನೂನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪರಿಶೀಲನೆ ಮಾಡಿದಾಗ ಹಿಂದಿನ ಕಾಲದ ಮುಸಲ್ಮಾನ ಆಳ್ವಿಕೆಯಲ್ಲಿ ನಡೆದಂತಹ ದಾಳಿಯಲ್ಲಿ ಹಲವಾರು ಹಿಂದೂ  ದೇವಾಲಯಗಳು ನಾಶ ಮಾಡಿರುವುದು ಬೆಳಕಿಗೆ ಬಂದಿವೆ ಎಂದು ತಿಳಿಸಿದ ಎಮ್​ಎಸ್​ ಹರೀಶ್, ರಾಜ್ಯಮಟ್ಟದಲ್ಲಿಯೂ ಎಲ್ಲಾ ಮಸೀದಿ ಹಾಗೂ ದರ್ಗಾಗಳ ಮೇಲೆ ಈ ಕೂಡಲೇ ತನಿಖೆ ಮಾಡವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Dinesh Karthik: ಆರ್​ಸಿಬಿ ತಂಡದಿಂದ ನಿರ್ಗಮನ ಆಗುವಾಗ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ

ಇದನ್ನೂ ಓದಿ
Image
Dinesh Karthik: ಆರ್​ಸಿಬಿ ತಂಡದಿಂದ ನಿರ್ಗಮನ ಆಗುವಾಗ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ಕೇಳಿ
Image
ತಲ್ವಾರ್​ನಲ್ಲಿ ಕೇಕ್ ಕಟ್ ಮಾಡಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಮುಖಂಡ, ದುರ್ವರ್ತನೆಗೆ ಜನಾಕ್ರೋಶ!
Image
ಅಪ್ಪು ಅಗಲಿ 7 ತಿಂಗಳು; ವಿಶೇಷ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್
Image
Face Pack: ಮುಖದ ಕಾಂತಿಯನ್ನು ಕಾಪಾಡುವ ಸಿಂಪಲ್ ಫೇಸ್​ ಪ್ಯಾಕ್​ಗಳು ಇಲ್ಲಿವೆ

ನ್ಯಾಯ ಸಿಗುವವರೆಗೂ ಸುಮ್ಮನೆ ಕೂರಲ್ಲ ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್​: ಬೆಳಗಾವಿಯ ರಾಮದೇವ ಗಲ್ಲಿಯ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಶಾಹಿ ಮಸೀದಿಯಲ್ಲಿ ದೇಗುಲದ ಗರ್ಭಗುಡಿಯ ಬಾಗಿಲು ಇದೆ. ಸಣ್ಣ ಬಾಗಿಲು ದೇವಸ್ಥಾನಗಳ ಹೊರತು ಬೇರೆ ಕಡೆ ಇರುವುದಿಲ್ಲ. ದೇವಾಲಯವನ್ನು ಶಾಹಿ ಮಸೀದಿಯಾಗಿ ಪರಿವರ್ತಿಸಲಾಗಿದೆ. ಶಾಹಿ ಮಸೀದಿ ಬಗ್ಗೆ ಹಿರಿಯರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.

ಶಾಹಿ ಮಸೀದಿ ಬಗ್ಗೆ ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ ಶಾಸಕ ಅಭಯ್ ಪಾಟೀಲ್, ಶಾಹಿ ಮಸೀದಿ ಸರ್ವೆ ಮಾಡುವಂತೆ ಬೆಳಗಾವಿ ಡಿಸಿಗೆ ಹೇಳಿದ್ದೇನೆ. ಶಾಹಿ ಮಸೀದಿ ಪಕ್ಕದಲ್ಲಿ ಹನುಮಾನ್ ಮಂದಿರವಿದೆ. ಹನುಮಾನ್ ಮಂದಿರದ ಪಕ್ಕದಲ್ಲಿದ್ದ ದೇಗುಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಸೋಮವಾರ ಬೆಳಗಾವಿ ಜಿಲ್ಲಾಧಿಕಾರಿಗಳನ್ನ ಭೇಟಿ ಮಾಡುತ್ತೇನೆ. ಶಾಹಿ ಮಸೀದಿ ಸರ್ವೆ ಮಾಡಿ ವರದಿ ನೀಡುವಂತೆ ಹೇಳುತ್ತೇನೆ. ಶಾಹಿ ಮಸೀದಿ ಬಗ್ಗೆ ಎಲ್ಲಾ ಸಂಘಟನೆಗಳ ಗಮನಕ್ಕೂ ತರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಆರ್​ಎಸ್​ಎಸ್​ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ ವಾರ್ ವಿಚಾರ: ರೀಲ್ಸ್ ಮೂಲಕ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಮಂಚಾಲೇಶ್ವರಿ‌ ತೊಣಶ್ಯಾಳ

ಪೀರ್ ಪಾಷಾ ದರ್ಗಾದಲ್ಲಿ ಮೂಲ ಅನುಭವ ಮಂಟಪ ವಿವಾದಕ್ಕೆ ವಿಭಿನ್ನ ಹೇಳಿಕೆ;

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಪೀರ್ ಪಾಷಾ ದರ್ಗಾದಲ್ಲೇ ಮೂಲ ಅನುಭವ ಮಂಟಪ ಇರುವ ವಿಚಾರಕ್ಕೆ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಬಸವಕಲ್ಯಾಣ ‌ಶಾಸಕ ಶರಣು ಸಲಗರ ಪೀರ್ ಪಾಷಾ ದರ್ಗಾದಲ್ಲಿಯೇ ಮೂಲ ಅನುಭವ ಮಂಟಪ ಇದೆ ಎನ್ನುತ್ತಾರೆ. ಆದರೆ ಬಸವಕಲ್ಯಾಣ ಅನುಭವ ಮಂಟಪದ ಟ್ರಸ್ಟ್ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿಕೆಯೇ ಬೇರೆಯಾಗಿದೆ. ಶೈವ ಪರಂಪರೆ ಕಟ್ಟಡದ ರೂಪದಲ್ಲಿ ಪೀರ್ ಪಾಷಾ ದರ್ಗಾ ಇದೆ. ಮೂಲ ಅನುಭವ ಮಂಟಪ ಪೀರ್ ಪಾಷಾ ದರ್ಗಾ ಆಗಿದೆ. ಜಿಲ್ಲೆಯ ಬಹಳಷ್ಟು ಜನರ ಹೇಳುತ್ತಾರೆ. ಮಠಾಧೀಶರು ಜನರು ಹೇಳಿಕೆ ಒಂದೆ ಆಗಿದೆ ಪೀರ್ ಪಾಷಾ ದರ್ಗಾದಲ್ಲೆ ಅನುಭವ ಮಂಟಪ ಆಗಬೇಕೆಂದು ಬೆಂಬಲವಿದೆ ಎಂದು ಶಾಸಕರು ಹೇಳಿದರು.

ಬಸವಣ್ಣನವರು ಸ್ಥಾವರಕ್ಕೆ ಮಹತ್ವ ಕೊಟ್ಟಿರಲಿಲ್ಲ. ಹೀಗಾಗಿ ಅನುಭವ ಮಂಟಪ ಸಾಧಾರಣ ಕಟ್ಟಡವಾಗಿರಬಹುದು ಎಂದು ಹೇಳಿಕೆ ನೀಡಿರುವ ಬಸವಲಿಂಗ ಪಟ್ಟದೇವರು, ಅನುಭವ ಮಂಟಪ ಹಂಚಿನ‌ ಮನೆಯಾಗಿರಬಹುದು ಇಲ್ಲಾ ಸಾಧಾರಣ ಕಟ್ಟಡವಿರಬಹುದು. ಪೀರಾ ಪಾಷಾ ದರ್ಗಾದಲ್ಲೇ ಅನುಭವ ಮಂಟಪ ಇತ್ತು ಅನ್ನೊದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಆದರೆ ಇತಿಹಾಸಕಾರರು ‌ಸಂಶೋಧಕರು ಇದರ ಬಗ್ಗೆ ಸಂಶೋಧನೆ ಮಾಡಿದರೆ ಗೊತ್ತಾಗುತ್ತದೆ ಎಂದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:33 am, Sun, 29 May 22