ನಾಳೆ ಬೆಂಗಳೂರು ವಿಶ್ವವಿದ್ಯಾಲಯ ಸಂಪೂರ್ಣ ಸ್ತಬ್ಧ! ತರಗತಿ ಬಹಿಷ್ಕರಿಸಿ ಅಹೋರಾತ್ರಿ ಹೋರಾಟಕ್ಕೆ ವಿದ್ಯಾರ್ಥಿಗಳ ಒಕ್ಕೂಟ ನಿರ್ಧಾರ
ವಿವಿ ಪ್ರಭಾರ ವಿತ್ತಾಧಿಕಾರಿ ಆರ್.ಜಯಲಕ್ಷ್ಮಿ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿರುದ್ಧ ದೂರು ದಾಖಲಾಗಿದೆ. ದೂರು ಹಿಂಪಡೆಯುವವರೆಗೂ ಧರಣಿ ನಿಲ್ಲಿಸದಿರಲು ವಿದ್ಯಾರ್ಥಿಗಳು ನಿರ್ಧಾರ ಮಾಡಿದ್ದಾರೆ.
ಬೆಂಗಳೂರು: ಉಪಕುಲಪತಿ ಪ್ರೊ.ವೇಣುಗೋಪಾಲ್ ಅಕ್ರಮವಾಗಿ 28 ಕೋಟಿ ರೂ. ಮೊತ್ತದ ಬಿಲ್‌ಗೆ ಅನುಮೋದನೆ ನೀಡಿದ್ದಾರೆ ಎಂದು ಮೇ 27ಕ್ಕೆ ಪ್ರತಿಭಟನೆ (Protest) ನಡೆಸಿ, ಆಕ್ರೋಶ ಹೊರಹಾಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ (Bengaluru University) ಸಿಬ್ಬಂದಿ, ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗಿದೆ. ದಾಖಲಾಗಿರುವ ದೂರನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟ ನಾಳೆ (ಮೇ 30) ವಿಶ್ವವಿದ್ಯಾಲಯ ಬಂದ್ಗೆ ಕರೆ ಕೊಟ್ಟಿದೆ. ತರಗತಿ ಬಹಿಷ್ಕರಿಸಿ ನಾಳೆ 10 ಗಂಟೆಯಿಂದ ಧರಣಿ ನಡೆಸಲು ಸಂಶೋಧನೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ ನಿರ್ಧರಿಸಿದೆ.
ವಿವಿ ಪ್ರಭಾರ ವಿತ್ತಾಧಿಕಾರಿ ಆರ್.ಜಯಲಕ್ಷ್ಮಿ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದಾರೆ. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿರುದ್ಧ ದೂರು ದಾಖಲಾಗಿದೆ. ದೂರು ಹಿಂಪಡೆಯುವವರೆಗೂ ಧರಣಿ ನಿಲ್ಲಿಸದಿರಲು ವಿದ್ಯಾರ್ಥಿಗಳು ನಿರ್ಧಾರ ಮಾಡಿದ್ದಾರೆ. ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ವಿತ್ತಾಧಿಕಾರಿ ಮತ್ತು ಕುಲಪತಿ ಪ್ರೊ. ವೇಣುಗೋಪಾಲ್ ವಿರುದ್ಧ ವಿವಿ ವಿದ್ಯಾರ್ಥಿ ಒಕ್ಕೂಟ ನಿನ್ನೆ ದೂರು ದಾಖಲಿಸಿದೆ.
ನಾಳೆ ನಡೆಯುವ ಪ್ರತಿಭಟನೆಯಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಬೆಂಗಳೂರು ವಿವಿ ಆಡಳಿತ ಕಚೇರಿ ಮುಂಭಾಗ ಧರಣಿ ನಡೆಯಲಿದೆ.
ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ಮಸೀದಿ – ಮಂದಿರ ವಿವಾದ; ನ್ಯಾಯ ಸಿಗುವವರೆಗೂ ಸುಮ್ಮನೆ ಕೂರಲ್ಲ ಎಂದ ಬಿಜೆಪಿ ಶಾಸಕ ಅಭಯ್ ಪಾಟೀಲ್
ಘಟನೆ ಏನು? ಉಪಕುಲಪತಿ ಪ್ರೊ.ವೇಣುಗೋಪಾಲ್ ಅಕ್ರಮವಾಗಿ 28 ಕೋಟಿ ರೂ. ಮೊತ್ತದ ಬಿಲ್‌ಗೆ ಅನುಮೋದನೆ ನೀಡಿದ್ದಾರೆ ಎಂದು ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು, ವಿವಿಯ ಫೈನಾನ್ಸ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರ ಹಾಕಿದ್ದರು. ಹಣಕಾಸು ಕಚೇರಿಯತಲ್ಲಿದ್ದ ಅಧಿಕಾರಿ ಜಯಲಕ್ಷ್ಮೀರನ್ನು ಕಚೇರಿಯಿಂದ ಹೊರಗೆ ಕಳಿಸಿ ಪ್ರತಿಭಟನೆ ಮಾಡಿದ್ದರು. ಹಣಕಾಸು ಅಧಿಕಾರಿ ವಿವಿ ಬಿಟ್ಟು ತೊಲಗಲಿ ಎಂದು ಘೋಷಣೆ ಕೂಗಿದ್ದರು. ಹಣಕಾಸು ಅಧಿಕಾರಿ ಕಚೇರಿಗೆ ವಿದ್ಯಾರ್ಥಿಗಳು ಬೀಗ ಹಾಕಿಸಿದ್ದರು. ಬಳಿಕ ನಮ್ಮ ಪರವಾಗಿ ಧ್ವನಿ ಎತ್ತಿ ಅಂತ ಸಿಂಡಿಕೇಟ್ ಸದಸ್ಯರಿಗೆ ತರಾಟೆ ತೆಗೆದುಕೊಂಡಿದ್ದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:07 am, Sun, 29 May 22