Face Pack: ಮುಖದ ಕಾಂತಿಯನ್ನು ಕಾಪಾಡುವ ಸಿಂಪಲ್ ಫೇಸ್​ ಪ್ಯಾಕ್​ಗಳು ಇಲ್ಲಿವೆ

Face Pack: ಮುಖದ ಕಾಂತಿಯನ್ನು ಕಾಪಾಡುವ ಸಿಂಪಲ್ ಫೇಸ್​ ಪ್ಯಾಕ್​ಗಳು ಇಲ್ಲಿವೆ
Facepack

Face Pack:ಸೌಂದರ್ಯವನ್ನು ಅಚ್ಚುಕಟ್ಟಾಗಿ ಯಾವಾಗಲೂ ಕಾಪಾಡಿಕೊಳ್ಳಬಯಸುವವರು ಎಂದೂ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ರಾಜಿಯಾಗುವುದಿಲ್ಲ.

TV9kannada Web Team

| Edited By: Nayana Rajeev

May 29, 2022 | 9:52 AM

ಸೌಂದರ್ಯವನ್ನು ಅಚ್ಚುಕಟ್ಟಾಗಿ ಯಾವಾಗಲೂ ಕಾಪಾಡಿಕೊಳ್ಳಬಯಸುವವರು ಎಂದೂ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳಲ್ಲಿ ರಾಜಿಯಾಗುವುದಿಲ್ಲ. ಮಾಲಿನ್ಯ(Pollution)ದಿಂದಾಗಿ ರೋಗ ನಿರೋಧಕ ಶಕ್ತಿಯನ್ನು ಈಗಾಗಲೇ ಕಳೆದುಕೊಳ್ಳುತ್ತಿದ್ದೇವೆ, ಅದರ ಜತೆ ಜತೆಗೆ ಚರ್ಮದ ಕಾಂತಿಯನ್ನೂ ಕೂಡ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

ಪ್ರತಿಯೊಂದು ಆಯಾಮದಲ್ಲೂ ಕೂಡ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಅಷ್ಟೇ ಅಚ್ಚುಕಟ್ಟಾಗಿ ನಿಯಂತ್ರಣ ಮಾಡಿಕೊಂಡು ಕಾಪಾಡಿಕೊಂಡು ಹೋಗುತ್ತಾರೆ. ಕುತ್ತಿಗೆಯ ಮೇಲಿನ ಚರ್ಮವು ಮುಖದಂತೆಯೇ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ.

ಆದ್ದರಿಂದ ಅದರ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಕುತ್ತಿಗೆಯ ಮೇಲಿನ ಸುಕ್ಕುಗಳಿಗೆ ಹಲವಾರು ಮನೆಮದ್ದುಗಳಿವೆ. ಆದರೆ ಅವು ನಿರೀಕ್ಷಿತ ಫಲಿತಾಂಶ ನೀಡುತ್ತದೆಯೋ ಇಲ್ಲವೋ ಎಂಬುದೇ ಪ್ರಶ್ನೆ. ಈ ಸಂದರ್ಭದಲ್ಲಿ ಮತ್ತೆ ನಮ್ಮ ತ್ವಚೆಗೆ ಮೃದುತ್ವ ಮತ್ತು ಹೊಳಪನ್ನು ಮರುಕಳಿಸಲು ಕೆಲವೊಂದು ವಿಶೇಷ ಬಗೆಯ ಫೇಸ್ ಪ್ಯಾಕ್ ಗಳನ್ನು ನಾವು ಮಾಡಿಕೊಳ್ಳಬೇಕಾಗುತ್ತದೆ.ಈ ಲೇಖನದಲ್ಲಿ ಅಂತಹ ಉಪಯುಕ್ತ ಫೇಸ್ ಮಾಸ್ಕ್ ಗಳ ಬಗ್ಗೆ ತಿಳಿಸಿಕೊಡಲಾಗಿದೆ

ಆಲೂಗಡ್ಡೆ ಮತ್ತು ಮೊಸರಿನ ಫೇಸ್ ಪ್ಯಾಕ್ ಸೂರ್ಯನ ಬಿಸಿಲಿನಿಂದ ಕಪ್ಪಾಗುವ ಮುಖವನ್ನು ಮತ್ತೆ ಮೊದಲಿನ ಬಣ್ಣಕ್ಕೆ ತಿರುಗಿಸುತ್ತದೆ. ಈ ಫೇಸ್ ಪ್ಯಾಕ್ ಅದ್ಭುತ ಮಾಯಿಶ್ಚರೈಸರ್ ಮತ್ತು ನೈಸರ್ಗಿಕ ಬ್ಲೀಚಿಂಗ್ ಏಜೆಂಟ್ ಆಗಿ ಸಹ ಕೆಲಸ ಮಾಡುತ್ತದೆ. ಮನೆಯಲ್ಲಿ ಆಲೂಗಡ್ಡೆ ಇದ್ದರೆ ನಿಮಗೆ ಸಾಕಷ್ಟು ಅನುಕೂಲವಾಗುತ್ತದೆ. ಏಕೆಂದರೆ ಪಲ್ಯ ಅಥವಾ ಇನ್ನಿತರ ಪದಾರ್ಥಗಳನ್ನು ತಯಾರು ಮಾಡಿಕೊಳ್ಳಲು ಮಾತ್ರವಲ್ಲ. ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡಿಕೊಳ್ಳಲು ಸಹ ಇದು ಅನುಕೂಲ ಮಾಡಿಕೊಡುತ್ತದೆ. ನಿಮ್ಮ ಚರ್ಮದ ಮೇಲೆ ಯಾವುದೇ ಕಲೆಗಳು ಅಥವಾ ಸುಕ್ಕುಗಳು ಇದ್ದರೂ ಕೂಡ ಆಲೂಗಡ್ಡೆ ಸುಲಭವಾಗಿ ತೆಗೆದುಹಾಕುವ ಎಲ್ಲಾ ಸಾಧ್ಯತೆ ಇದೆ.

ಫೇಸ್​ ಪ್ಯಾಕ್ ತಯಾರಿ ಹೇಗೆ? ಒಂದು ಮೀಡಿಯಂ ಗಾತ್ರದ ಆಲೂಗಡ್ಡೆಯನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಅರ್ಧ ಚಮಚ ಮೊಸರು ಹಾಕಿ ಅದನ್ನು ಮುಖದ ಮೇಲೆ ಫೇಸ್ ಪ್ಯಾಕ್ ರೀತಿ ಅನ್ವಯಿಸಿ, ಸುಮಾರು ಹದಿನೈದು ನಿಮಿಷಗಳು ಹಾಗೆ ಬಿಟ್ಟು ನಂತರ ಮುಖವನ್ನು ತಂಪಾದ ನೀರಿನಲ್ಲಿ ತೊಳೆದುಕೊಳ್ಳಿ. ಇದರಿಂದ ನೈಸರ್ಗಿಕವಾದ ಹೊಳಪಿನ ಚರ್ಮ ನಿಮ್ಮದಾಗುತ್ತದೆ.

ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅಲ್ಫಾ ಹೈಡ್ರಾಕ್ಸಿಲ್ ಆಮ್ಲವನ್ನು ಹೊಂದಿದ್ದು, ಇದು ಡೆಡ್‌ಸ್ಕಿನ್‌ಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಸುಕ್ಕುಗಳನ್ನು ತೆಗೆಯಲು ಸಹಕಾರಿಯಾಗಿದೆ.

ಕಪ್ಪು ಜೀರಿಗೆ ತೈಲ ಕಪ್ಪು ಜೀರಿಗೆಯ ತೈಲವನ್ನು ಬಳಕೆ ಮಾಡುವುದರಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಎಣ್ಣೆಯನ್ನು ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ಹೀಗೆ ಮಾಡಿದರೆ ಕುತ್ತಿಗೆಯ ಮೇಲೆ ಕಂಡುಬರುವ ಸುಕ್ಕುಗಳನ್ನು ನಿವಾರಿಸುತ್ತದೆ.

ಅಕ್ಕಿ ಹಿಟ್ಟಿನ ಪ್ಯಾಕ್: ಅಕ್ಕಿ ಹಿಟ್ಟನ್ನು ಮೊದಲು ರೋಸ್ ವಾಟರ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಕುತ್ತಿಗೆಯ ಬಳಿ ಮಸಾಜ್ ಮಾಡಿ. 10 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

ದ್ರಾಕ್ಷಿ ಹಣ್ಣು ಮತ್ತು ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಮನೆಯ ಹೊರಗಡೆ ಹೋದಾಗ ಸೂರ್ಯನ ಅತಿನೇರಳೆ ಕಿರಣಗಳು ಚರ್ಮದ ಭಾಗದ ಕೊಲಾಜನ್ ಮತ್ತು ಎಲಾಸ್ಟಿಕ್ ಅಂಗಾಂಶಗಳನ್ನು ಹಾನಿ ಮಾಡುವ ಸಾಧ್ಯತೆ ಇರುತ್ತದೆ. ಆದರೆ ದ್ರಾಕ್ಷಿ ಹಣ್ಣು ಮತ್ತು ಗೋಧಿ ಹಿಟ್ಟಿನ ಫೇಸ್ ಪ್ಯಾಕ್ ಇದನ್ನು ತಡೆದು ಆರೋಗ್ಯಕರವಾದ ಹಾಗೂ ಮೃದುವಾದ ಚರ್ಮ ನಿಮ್ಮದಾಗುವ ಹಾಗೆ ಮಾಡುತ್ತದೆ.

ದ್ರಾಕ್ಷಿಹಣ್ಣು ಹೇಗೆ ಚರ್ಮದ ಆರೋಗ್ಯಕ್ಕೆ ಸಹಕಾರಿ ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಇಲ್ಲಿದೆ. ದ್ರಾಕ್ಷಿ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಒಳ್ಳೆಯ ಆಂಟಿಆಕ್ಸಿಡೆಂಟ್ ಅಂಶಗಳು ಇರುವ ಕಾರಣ ನಿಮ್ಮ ಚರ್ಮವನ್ನು ಫ್ರೀ ರಾಡಿಕಲ್ ಅಂಶಗಳು ಹಾನಿಯಿಂದ ತಪ್ಪಿಸಲು ಅನುಕೂಲವಾಗುತ್ತದೆ.

​ಈ ಫೇಸ್ ಪ್ಯಾಕ್ ತಯಾರಿ ಹೇಗೆ? ಅದಕ್ಕೂ ಮೊದಲು ಫೇಸ್ ಪ್ಯಾಕ್ ತಯಾರು ಮಾಡಿಕೊಳ್ಳಲು ಬೇಕಾಗಿರುವ ಸಾಮಗ್ರಿಗಳ ಬಗ್ಗೆ ತಿಳಿದುಕೊಳ್ಳೋಣ. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಎಂದರೆ 2 ಟೇಬಲ್ ಚಮಚ ದ್ರಾಕ್ಷಿ ಹಣ್ಣಿನ ರಸ ಒಂದು ಟೇಬಲ್ ಚಮಚ ಗೋಧಿ ಹಿಟ್ಟು 1 ಟೇಬಲ್ ಚಮಚ ನಿಂಬೆ ಹಣ್ಣಿನ ರಸ

ಕುತ್ತಿಗೆ ಸುಕ್ಕುಗಟ್ಟುವುದನ್ನು ತಡೆಯಲು ಮೊಟ್ಟೆಯ ಬಿಳಿ ಭಾಗ ಬಳಸಿ ಕುತ್ತಿಗೆಯ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಮೊಟ್ಟೆಯ ಬಿಳಿಭಾಗವನ್ನು ಬಳಕೆ ಮಾಡಬಹುದು. ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು 2 ಚಮಚ ಜೇನುತುಪ್ಪ, 2 ಚಮಚ ಗ್ಲಿಸರಿನ್, 2 ಚಮಚ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಅದನ್ನು ಕುತ್ತಿಗೆಯ ಮೇಲೆ ಲೇಪಿಸಿ. ಬಳಿಕ 20 ನಿಮಿಷಗಳ ಬಳಿಕ ನೀರಿನಿಂದ ವಾಶ್ ಮಾಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada