ತಲ್ವಾರ್​ನಲ್ಲಿ ಕೇಕ್ ಕಟ್ ಮಾಡಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಮುಖಂಡ, ದುರ್ವರ್ತನೆಗೆ ಜನಾಕ್ರೋಶ!

ತನ್ನ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲಿ ತಲ್ವಾರ್ ಮೂಲಕ ಕೇಕ್ ಕಟ್ ಮಾಡಿದ ರಾಯಚೂರು ಬಿಜೆಪಿ ಮುಖಂಡ ಶ್ರೀನಿವಾಸ್​ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.

TV9kannada Web Team

| Edited By: Rakesh Nayak

May 29, 2022 | 10:03 AM

ರಾಯಚೂರು: ತಲ್ವಾರ್ (Talwar)​ ಮೂಲಕ ಕೇಕ್ ಕಟ್ ಮಾಡಿ ಫೋಟೊಗೆ ಪೋಸ್ ಕೊಟ್ಟ ಬಿಜೆಪಿ ಮುಖಂಡನ ದುರ್ವರ್ತನೆಗೆ ಇದೀಗ ಜನಾಕ್ರೋಶ ವ್ಯಕ್ತವಾಗುತ್ತಿದೆ. ರಾಯಚೂರು ನಗರಸಭೆ ವಾರ್ಡ್ 27ರ ಬಿಜೆಪಿ ಸದಸ್ಯೆ ಪಿ.ನವನೀತಾ ಅವರ ಪತಿ ಪೋಗಲ್ ಶ್ರೀನಿವಾಸ್, ತನ್ನ ಹುಟ್ಟುಹಬ್ಬದ (Birthday) ಪ್ರಯುಕ್ತ ಸಂಭ್ರಮಾಚರಣೆ ನಡೆಸಿದ್ದಾರೆ. ಈ ವೇಳೆ ತಲ್ವಾರ್​ ಹಿಡಿದುಕೊಂಡು ಕೇಕ್ ಕಟ್ ಮಾಡಿದ್ದಲ್ಲದೆ, ಫೋಟೋ ಕೂಡ ತೆಗೆಸಿಕೊಂಡಿದ್ದಾರೆ. ಬಿಜೆಪಿ ಮುಖಂಡನ ಇಂಥ ದುರ್ವರ್ತನೆಗೆ ಅಸಮಧಾನಗೊಂಡಿರುವ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಯಚೂರು ನಗರದಲ್ಲಿ ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರವಿ ಬೋಸರಾಜ್ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಶ್ರೀನಿವಾಸ್, ತಲ್ವಾರ್ ಮೂಲಕ ಕೇಟ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಸಾರ್ವಜನಿಕವಾಗಿ ತಲ್ವಾರ್ ಪ್ರದರ್ಶಿಸೋದು ಅಪರಾಧವಾಗಿದೆ. ಹೀಗಿದ್ದರೂ ಬಿಜೆಪಿ ಮುಖಂಡ ಶ್ರೀನಿವಾಸ್ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಕೇಟ್ ಕಟ್ ಮಾಡಿ ಉದ್ಧಟತನ ಮೆರೆದಿದ್ದಾರೆ. ಶ್ರೀನಿವಾಸ್ ಮಾತ್ರವಲ್ಲದೆ, ಅಲ್ಲಿದ್ದ ಒಂದಷ್ಟು ಮಂದಿ ಕೂಡ ತಲ್ವಾರ್ ಹಿಡಿದು ಫೋಟೋ ತೆಗೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶ್ರೀನಿವಾಸ್ ತಲ್ವಾರ್ ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದ್ದು, ಜನಾಕ್ರೋಶ ವ್ಯಕ್ತವಾಗಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಗಳು ಕೇಳಿಬರುತ್ತಿದೆ.

ಇದನ್ನೂ ಓದಿ: Viral Video: ‘ತ್ರಿಚಕ್ರ ಅಂಬಾರಿ’ ಮೂಲಕ ತನ್ನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ವಿಶೇಷಚೇತನ ತಂದೆಯ ವಿಡಿಯೋ ಎಂಥವರ ಕಣ್ಣನ್ನೂ ಒದ್ದೆಯಾಗಿಸುತ್ತೆ!

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada