ಹುಬ್ಬಳ್ಳಿ ಅಪಘಾತ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ, ಮೃತರು ನಮ್ಮವರಲ್ಲ ಹೀಗಾಗಿ ಪರಿಹಾರ ಕೊಡೋಕೆ ಬರಲ್ಲ ಎಂದ ಸಚಿವ ಹಾಲಪ್ಪ ಆಚಾರ್

ಹುಬ್ಬಳ್ಳಿ ಅಪಘಾತ; ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ, ಮೃತರು ನಮ್ಮವರಲ್ಲ ಹೀಗಾಗಿ ಪರಿಹಾರ ಕೊಡೋಕೆ ಬರಲ್ಲ ಎಂದ ಸಚಿವ ಹಾಲಪ್ಪ ಆಚಾರ್
ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿಯ ತಾರಿಹಾಳ ಬೈಪಾಸ್ನಲ್ಲಿ ಭೀಕರ ಅಪಘಾತದಲ್ಲಿ ಮೃತಪಟ್ಟ ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮತ್ತೊಂದು ಕಡೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.

TV9kannada Web Team

| Edited By: Ayesha Banu

May 24, 2022 | 11:18 PM

ಧಾರವಾಡ: ಮೂರು ದಿನಗಳ ಹಿಂದಷ್ಟೇ ಧಾರವಾಡದ ನಿಗದಿ ಗ್ರಾಮದಲ್ಲಿ ನಡೆದ ಅಪಘಾತ, ಒಂಬತ್ತು ಜನರನ್ನ ಬಲಿ ಪಡೆದಿತ್ತು. ಆ ಕರಾಳತೆ ಮಾಸುವ ಮುನ್ನವೆ, ಹುಬ್ಬಳ್ಳಿ ಹೊರವಲಯದ ಎನ್ಎಚ್ 4 ರಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಖಾಸಗಿ ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಸ್ಥಳದಲ್ಲೇ 8 ಜನ ಮೃತ ಪಟ್ಟದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಕಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರೂ ಉಸಿರು ಚೆಲ್ಲಿದ್ದಾರೆ. ಸುಮಾರು 22 ಜನರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ನ್ಯಾಷನಲ್ ಟ್ರಾವೆಲ್ಸ್ ಬಸ್ ಬರುತ್ತಿತ್ತು. ಹಾಗೇ, ದಾವಣಗೆರೆಯಿಂದ ಅಕ್ಕಿ ಲೋಡ್ ತುಂಬಿದ್ದ ಲಾರಿ ಪುಣೆಯತ್ತ ಹೋಗ್ತಿತ್ತು. ಆದ್ರೆ, ಹುಬ್ಬಳ್ಳಿಯ ತಾರಿಹಾಳ ಬೈಪಾಸ್ನಲ್ಲಿ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಬಸ್ ಡ್ರೈವರ್ ಮುಂದಾಗಿದ್ದಾನೆ. ಈ ವೇಳೆ ಎದುರಿಗೆ ವೇಗವಾಗಿ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕರ್ನಾಟಕದ ಮೂವರು, ಮಹಾರಾಷ್ಟ್ರದ ಐವರು ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಎರಡು ಕೊಠಡಿ ಎಂಟು ತರಗತಿ; ದಿಕ್ಕಿಗೊಂದು ಕ್ಲಾಸ್, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸರ್ಕಾರಿ ಶಾಲೆಯ ಸ್ಥಿತಿ ಹೇಗಿದೆ ನೋಡಿ

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ ಇನ್ನು ಹುಬ್ಬಳ್ಳಿಯ ತಾರಿಹಾಳ ಬೈಪಾಸ್ನಲ್ಲಿ ಭೀಕರ ಅಪಘಾತದಲ್ಲಿ ಮೃತಪಟ್ಟ ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮತ್ತೊಂದು ಕಡೆ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಹಾಗೂ ಕೇಂದ್ರ ಸರ್ಕಾರ 2 ಲಕ್ಷ ಪರಿಹಾರ ಘೋಷಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಅವರು ನಮ್ಮವರಲ್ಲ ಹೀಗಾಗಿ ಪರಿಹಾರ ಕೊಡೋಕೆ ಬರಲ್ಲ ತಾರಿಹಾಳ ಬೈಪಾಸ್ನಲ್ಲಿ ಭೀಕರ ಅಪಘಾತಕ್ಕೆ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಗಳಲ್ಲಿ ಶೋಕ ಆವರಿಸಿದೆ. ಇದರ ನಡುವೆ ಮೃತರು ನಮ್ಮವರಲ್ಲ ಹಾಗಾಗಿ ಪರಿಹಾರ ಕೊಡೋಕೆ ಬರೊಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಮಹಾರಾಷ್ಟ್ರಕ್ಕೆ ಸೇರಿದವರು. ಅವರು ನಮ್ಮವರಲ್ಲ ಹೀಗಾಗಿ ಪರಿಹಾರ ಕೊಡೋಕೆ ಬರಲ್ಲ. ಖಾಸಗಿ ಬಸ್, ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹೀಗಾಗಿ ಇನ್ಶೂರೆನ್ಸ್ ಕಂಪನಿಯೇ ಪರಿಹಾರ ಕೊಡುತ್ತೆ. ಹಾಗೊಂದು ವೇಳೆ ಅಗತ್ಯವೆನಿಸಿದರೆ ಸಿಎಂ ಬಳಿ ಮಾತಾಡ್ತೇನೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಹಾಲಪ್ಪ ಆಚಾರ್ ದ್ವಂದ್ವ ಹೇಳಿಕೆ ನೀಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada