ಸಿದ್ದರಾಮಯ್ಯ ಅವರಿಂದಲೇ ಕರ್ನಾಟಕ ಕಾಂಗ್ರೆಸ್​ ಮುಕ್ತ ಆಗಲಿದೆ: ನಳಿನ್ ಕುಮಾರ್ ಕಟೀಲ್

ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿರುವ ಸಿದ್ದರಾಮಯ್ಯ ಅವರಿಗೆ ರೈತರ ಶಾಪ ಇದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರಿಂದಲೇ ಕರ್ನಾಟಕ ಕಾಂಗ್ರೆಸ್​ ಮುಕ್ತ ಆಗಲಿದೆ: ನಳಿನ್ ಕುಮಾರ್ ಕಟೀಲ್
ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 29, 2022 | 3:08 PM

ತುಮಕೂರು: ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಆಗಿಸುವಲ್ಲಿ ಸಿದ್ದರಾಮಯ್ಯ (Congress Leader Siddaramiah) ಅವರ ಕೊಡುಗೆ ದೊಡ್ಡದು. ಸಿದ್ದರಾಮಯ್ಯ ಅವರಿಂದಲೇ ಕರ್ನಾಟಕವು ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದರು. ತುಮಕೂರಿನ ರೈತ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಹಿರಿಯ ನಾಯಕ ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಬಿಡಲಿಲ್ಲ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಮತ್ತೆ ಸಿಎಂ ಆಗಲು ಟವೆಲ್ ಹಾಕಿದ್ದಾರೆ. ಆದರೆ ಅವರೆಂದೂ ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಮಾತ್ರ ರಾಮ ಎಂದು ಇದೆ. ಆದರೆ ಅವರದು ರಾವಣನ ಮುಖ. ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿರುವ ಸಿದ್ದರಾಮಯ್ಯ ಅವರಿಗೆ ರೈತರ ಶಾಪ ಇದೆ. ಹೀಗಾಗಿ ಸಿದ್ದರಾಮಯ್ಯ ಮತ್ತೆ ಎಂದೂ ಸಿಎಂ ಆಗುವುದಿಲ್ಲ ಎಂದು ಅವರು ಹೇಳಿದರು.

ನಾನು ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷನಾಗಿ ಮೂರು ವರ್ಷ ಕಳೆದಿದೆ. ಈ ದೇಶದಲ್ಲಿ ವಿಶಿಷ್ಟ ಸಂಸ್ಕೃತಿ ಇದೆ. ಚರಾಚರ ಜೀವಿಯಲ್ಲಿ ದೇವರನ್ನು ಕಂಡಿದ್ದೇವೆ. ಹಾಗಾಗಿ ಗೋವಿನಲ್ಲೂ ದೇವರನ್ನು ಕಂಡಿದ್ದೇವೆ. ಕೃಷಿ ಸಂಸ್ಕೃತಿಯು ಋಷಿ ಸಂಸ್ಕೃತಿಯಂತೆಯೇ ಶ್ರೇಷ್ಠವಾದುದು. ಕುವೆಂಪು ರೈತರ ಬಗ್ಗೆ ವಿಶಿಷ್ಟ ವಿಭಿನ್ನವಾಗಿ ಹೇಳಿದ್ದಾರೆ. ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಯಡಿಯೂರಪ್ಪ ಅವರ ಸರ್ಕಾರ. ರೈತರು ದೇಶದ ಬೆನ್ನೆಲೆಬು ಎಂದ ಕಾಂಗ್ರೆಸ್ ರೈತರ ಬೆನ್ನಿಗೆ ನಿಲ್ಲಲಿಲ್ಲ. ಆದರೆ ಮೋದಿ ಸರ್ಕಾರವು ರೈತರ ಬೆನ್ನಿಗೆ ನಿಂತಿದೆ. ಕಿಸಾನ್ ಸಮ್ಮಾನ್‌ ಯೋಜನೆ, ಪಸಲ್ ಭೀಮಾ‌ ಯೋಜನೆಗಳು ರೈತರಿಗೆ ಹಲವು ರೀತಿಯಲ್ಲಿ ಅನುಕೂಲ ಒದಗಿಸಿವೆ.

ಯಡಿಯೂರಪ್ಪ ರೈತರ ಪರವಾಗಿ ಹೋರಾಡಿದವರು. ಹೀಗಾಗಿಯೇ ಅವರನ್ನು ರೈತರ ಮಗ ಎನ್ನುತ್ತಾರೆ. ₹ 20 ಸಾವಿರ ಕೋಟಿ ಇದ್ದ ರೈತರ ಬಜೇಟ್​ ಅನ್ನು ಮೋದಿ ಸರ್ಕಾರ ₹ 1.20 ಲಕ್ಷ ಕೋಟಿಗೆ ಏರಿಸಿತು ಎಂದು ಹೇಳಿದರು.

ಶಾಸಕ ಅಭಯ್ ಪಾಟೀಲ್ ಕಿಡಿ

ಬೆಳಗಾವಿ: ಆರ್​ಎಸ್​ಎಸ್​ ಮತ್ತು ಬಿಜೆಪಿ ಕುರಿತು ಸಿದ್ದರಾಮಯ್ಯ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಶಾಸಕ ಅಭಯ್ ಪಾಟೀಲ್, ಸ್ಥಿಮಿತ ಕಳೆದುಕೊಂಡವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಇನ್ನೊಮ್ಮೆ ಇತಿಹಾಸ ಓದಿಕೊಳ್ಳಬೇಕು. ರಾಜ್ಯದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ ಅನುಭವ ಇರುವ ಅವರು ಹೀಗೆಲ್ಲಾ ಮಾತನಾಡುತ್ತಾರೆ ಎಂದರೆ ಅವರಿಗೆ ಇತಿಹಾಸದ ಬಗ್ಗೆ ಅಧ್ಯಯನದ ಕೊರತೆ ಇದೆ ಎಂದು ಅರ್ಥ. ಅಂಥವರು ಇನ್ನೊಮ್ಮೆ ಸರಿಯಾಗಿ ಓದಿಕೊಳ್ಳುವುದು ಅಗತ್ಯ ಎಂದು ಶಾಸಕ ಅಭಯ್ ಪಾಟೀಲ್ ತಿರುಗೇಟು ನೀಡಿದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Sun, 29 May 22