ಒಡಿಶಾ: ತರಬೇತಿನಿರತ ವಿಮಾನ ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಧೆಂಕನಲ್ ಜಿಲ್ಲೆಯ ಕಂಕಡಹಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೀರಾಸಲ್ ಏರ್‌ಸ್ಟ್ರಿಪ್‌ನಲ್ಲಿ ನಡೆದಿದೆ.
ಬೀರಾಸಲ್ ಸರ್ಕಾರಿ ವಾಯುಯಾನ ತರಬೇತಿ ಸಂಸ್ಥೆಯಲ್ಲಿ ತರಬೇತಿ ವೇಳೆ ಟ್ರೈನಿ ಪೈಲಟ್ ತಮಿಳುನಾಡಿನ ಅನಿಸ್ ಫಾತಿಮಾ ಹಾಗೂ ಆಕೆಗೆ ತರಬೇತಿ ನೀಡುತ್ತಿದ್ದ ಮಾರ್ಗದಶಕರಾಗಿದ್ದ ಬಿಹಾರ ಮೂಲದ ಕ್ಯಾಪ್ಟನ್ ಸಾಜಿದ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಬ್ಬರನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದೊಯ್ಯದ ನಂತರ ಅವರು ಮೃತಪಟ್ಟಿರುವುದು ದೃಢವಾಗಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಿರಿಯ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
Published On - 11:56 am, Mon, 8 June 20