ನವದೆಹಲಿ, ಆಗಸ್ಟ್ 15: ಭಾರತವು ನಾಗರಿಕ ವಿಮಾನಯಾನದಲ್ಲಿ (Civil Aviation) ಗರಿಷ್ಠ ಸಂಖ್ಯೆಯ ಮಹಿಳಾ ಪೈಲಟ್‌ಗಳನ್ನು (Women Pilots) ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ ಕೆಲವೇ ಗಂಟೆಗಳ ನಂತರ, ಕ್ಯಾಪ್ಟನ್ ಜೋಯಾ ಅಗರ್ವಾಲ್ (Captain Zoya Agarwal) ಅವರು ಈ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮೋದಿ ಅವರು, ಭಾರತದ ಮಹಿಳಾ ಪೈಲಟ್ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಕುರಿತು ಜೋಯಾ ಅಗರ್ವಾಲ್ ಅವರ ಪ್ರತಿಕ್ರಿಯೆಯ ವಿಡಿಯೋವನ್ನು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪಿಐಬಿ ಅಧಿಕೃತ ಟ್ವಿಟರ್ ಖಾತೆಯಿಂದ ವೀಡಿಯೊವನ್ನು ಟ್ವೀಟ್ ಮಾಡಲಾಗಿದೆ.
‘ಭಾರತದ ಮಗಳಿಂದ ನಿಮಗೆಲ್ಲ ಶುಭಾಶಯಗಳು. 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಎಲ್ಲಾ ನಾಗರೀಕರಿಗೆ ಅಭಿನಂದನೆಗಳು. ಈ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಆವರಣದಿಂದ ಮಾತನಾಡುತ್ತಾ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ನಮ್ಮ ದೇಶವು ಗರಿಷ್ಠ ಸಂಖ್ಯೆಯ ಮಹಿಳಾ ಪೈಲಟ್‌ಗಳನ್ನು ಹೊಂದಿದೆ ಎಂದು ಹೇಳಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ಇದು ಪ್ರಪಂಚದಾದ್ಯಂತದ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಅವರು ಕನಸು ಕಂಡಿದ್ದನ್ನು ಸಾಧಿಸಲು ಪ್ರೇರೇಪಿಸುತ್ತದೆ ಎಂದು ಭಾವಿಸುತ್ತೇನೆ’ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವೆ ವಿಶ್ವದ ಅತಿ ಉದ್ದದ ವಾಯು ಮಾರ್ಗಗಳಲ್ಲಿ ಒಂದರಲ್ಲಿ ವಿಮಾನ ಹಾರಾಟ ನಡೆಸಿದ ಮೊದಲ ಮಹಿಳಾ ಕಮಾಂಡರ್ ಅಗರ್ವಾಲ್ ಅವರು ವೀಡಿಯೋದಲ್ಲಿ ಹೇಳಿದ್ದಾರೆ.
Capt. Zoya Agrawal, Pilot, Capt of all women crew of one of the longest flight from San Francisco to Bengaluru on PM@narendramodi’s #IndependenceDay 2023 speech
@MinistryWCD pic.twitter.com/ATvd5r96kc— PIB WCD (@PIBWCD) August 15, 2023
ವಿಶ್ವದ ಅತಿ ಉದ್ದದ ವಿಮಾನ ಮಾರ್ಗವಾಗಿರುವ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಭಾರತದ ಬೆಂಗಳೂರಿಗೆ ಜೋಯಾ ಅಗರ್ವಾಲ್ ಅವರು 2021 ರಿಂದ ವಿಮಾನ ಸಂಚಾರ ನಡೆಸುತ್ತಿದ್ದಾರೆ. ಅವರು 2013 ರಲ್ಲಿ ಬೋಯಿಂಗ್ 777 ಅನ್ನು ಹಾರಾಟ ಮಾಡಲು ಪ್ರಾರಂಭಿಸಿದ್ದರು. ಅಲ್ಲದೆ, ವಿಮಾನ ಹಾರಾಟ ನಡೆಸಿದ ಅತ್ಯಂತ ಕಿರಿಯ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಅಗರ್ವಾಲ್ ಅವರು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಮೇ 2020 ರಲ್ಲಿ ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಸ್ವದೇಶಕ್ಕೆ ಕರೆತಂದ ಮೊದಲ ವಿಮಾನದ ಸಹ-ಪೈಲಟ್ ಆಗಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ