AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಲಭ ಶೌಚಾಲಯದ ಮೂಲಕ ಕೋಟ್ಯಂತರ ಭಾರತೀಯರ ಜೀವನಶೈಲಿ ಸುಧಾರಿಸಿದ್ದ ಬಿಂದೇಶ್ವರ ಪಾಠಕ್ ನಿಧನ

Bindeshwar Pathak: ಸುಲಭ ಶೌಚಾಲಯದ ಮೂಲಕ ಕೋಟ್ಯಂತರ ಭಾರತೀಯರ ಜೀವನಶೈಲಿ ಸುಧಾರಿಸಿದ್ದ ಸುಲಭ್ ಇಂಟರ್​ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ ಪಾಠಕ್ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಎದೆನೋವು ಕಾಣಿಸಿಕೊಂಡಿತ್ತು, ದೆಹಲಿಯ ಏಮ್ಸ್​ ಆಸ್ಪತ್ರೆಗೆ ತಕ್ಷಣವೇ ದಾಖಲಿಸಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಸುಲಭ ಶೌಚಾಲಯದ ಮೂಲಕ ಕೋಟ್ಯಂತರ ಭಾರತೀಯರ ಜೀವನಶೈಲಿ ಸುಧಾರಿಸಿದ್ದ ಬಿಂದೇಶ್ವರ ಪಾಠಕ್ ನಿಧನ
ಬಿಂದೇಶ್ವರ ಪಾಠಕ್Image Credit source: India Today
Follow us
ನಯನಾ ರಾಜೀವ್
|

Updated on: Aug 16, 2023 | 8:56 AM

ಸುಲಭ ಶೌಚಾಲಯದ ಮೂಲಕ ಕೋಟ್ಯಂತರ ಭಾರತೀಯರ ಜೀವನಶೈಲಿ ಸುಧಾರಿಸಿದ್ದ ಸುಲಭ್ ಇಂಟರ್​ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರ ಪಾಠಕ್(Bindeshwar Pathak) ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಎದೆನೋವು ಕಾಣಿಸಿಕೊಂಡಿತ್ತು, ದೆಹಲಿಯ ಏಮ್ಸ್​ ಆಸ್ಪತ್ರೆಗೆ ತಕ್ಷಣವೇ ದಾಖಲಿಸಲಾಯಿತು, ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಂದೇಶ್ವರ ಪಾಠಕ್ ಅವರು ದೇಶದಲ್ಲಿ ಬಯಲು ಶೌಚವನ್ನು ಹೇಗಾದರೂ ತಡೆಯಬೇಕು, ನೈರ್ಮಲ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಆಲೋಚಿಸಿ ಸರ್ಕಾರದ ನೆರವಿಗೆ ಕಾಯದೆ ದೇಶಾದ್ಯಂತ ಸುಲಭ್ ಹೆಸರಿನಲ್ಲಿ ಸಾರ್ವಜನಿಕ ಶೌಚಾಲಯವನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದರಿಂದ ಕೋಟ್ಯಂತರ ಮಂದಿ ಪ್ರಯೋಜನ ಪಡೆದಿದ್ದಾರೆ.

ಬಡವರಿಂದ ಹಿಡಿದು ಬೀದಿಯಲ್ಲಿ ಭಿಕ್ಷೆ ಬೇಡುವವರ ವರೆಗೂ ಈ ಶೌಚಾಲಯ ಸಹಾಯ ಮಾಡಿದೆ. ಪಾಠಕ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಪಾಠಕ್ ಅವರ ಸಂಸ್ಥೆ ಸುಲಭ್ ಇಂಟರ್‌ನ್ಯಾಶನಲ್ 1.3 ಮಿಲಿಯನ್‌ಗಿಂತಲೂ ಹೆಚ್ಚು ಮನೆ ಶೌಚಾಲಯಗಳನ್ನು ಮತ್ತು 50 ಮಿಲಿಯನ್‌ಗಿಂತಲೂ ಹೆಚ್ಚು ಸರ್ಕಾರಿ ಶೌಚಾಲಯಗಳನ್ನು ನಿರ್ಮಿಸಿದೆ.

ಶೌಚಾಲಯಗಳನ್ನು ನಿರ್ಮಿಸುವುದರ ಹೊರತಾಗಿ, ಮಾನವ ತ್ಯಾಜ್ಯವನ್ನು ಕೈಯಿಂದ ತೆಗೆಯುವುದನ್ನು ಕಡಿಮೆ ಮಾಡಲು ಸಂಸ್ಥೆಯು ಆಂದೋಲನವನ್ನು ನಡೆಸುತ್ತಿದೆ. ಪಾಠಕ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಭೂಷಣ ಗೌರವವನ್ನು ಕೂಡ ಪಡೆದಿದ್ದಾರೆ.

ಮತ್ತಷ್ಟು ಓದಿ: Heart Attack: ನಿಮಗೆ ಹೃದಯಾಘಾತದ ಅಪಾಯ ಎದುರಾಗಬಾರದು ಎಂದಿದ್ದರೆ ಈ ಒಂದು ವಿಚಾರವನ್ನು ಸದಾ ನೆನಪಿನಲ್ಲಿಡಿ

ಈ ಸಂಸ್ಥೆಯು ದೇಶದ ಲಕ್ಷಾಂತರ ಜನರ ಜೀವನವನ್ನು ಸುಧಾರಿಸಲು ಕೆಲಸ ಮಾಡಿದೆ. ಭಾರತೀಯ ರೈಲ್ವೆಯು ನವೆಂಬರ್ 2016 ರಲ್ಲಿ ಸುಲಭ್ ಇಂಟರ್ನ್ಯಾಷನಲ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ರೈಲ್ವೇ ಆವರಣವನ್ನು ಸ್ವಚ್ಛವಾಗಿಡಲು ತನ್ನ ಪ್ರಯತ್ನಗಳನ್ನು ಮುಂದಕ್ಕೆ ತೆಗೆದುಕೊಂಡು, ಬಿಂದೇಶ್ವರ ಪಾಠಕ್ ಅವರನ್ನು ಅದರ ಸ್ವಚ್ಛ ರೈಲು ಮಿಷನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಯಿತು.

ಸುಲಭ್ ಇಂಟರ್‌ನ್ಯಾಶನಲ್ ಸಂಸ್ಥಾಪಕ ಹಾಗೂ ಖ್ಯಾತ ಸಮಾಜ ಸೇವಕ ಬಿಂದೇಶ್ವರ್ ಪಾಠಕ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್‌ನಲ್ಲಿ ಮೋದಿ,  ಬಿಂದೇಶ್ವರ್ ಪಾಠಕ್ ಅವರ ನಿಧನ ನಮ್ಮ ದೇಶಕ್ಕೆ ತುಂಬಲಾರದ ನಷ್ಟ, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಬಿಂದೇಶ್ವರ್ ಪಾಠಕ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಪಾಠಕ್ ಅವರ ನಿಧನದ ಸುದ್ದಿ ತುಂಬಾ ದುಃಖಕರವಾಗಿದೆ. ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಸ್ವಚ್ಛತೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಅವರು ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟಿದ್ದರು, ಅವರು ಪದ್ಮಭೂಷಣ ಮತ್ತು ಇತರ ಹಲವು ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ