ಅಹಮದಾಬಾದ್: ಗುಜರಾತ್‌ನ (Gujarat) ಆನಂದ್ ಜಿಲ್ಲೆಯ ಸೋಜಿತ್ರಾ ಗ್ರಾಮದ ಬಳಿ ಗುರುವಾರ ಸಂಜೆ ವೇಗವಾಗಿ ಬಂದ ಎಸ್‌ಯುವಿ ಕಾರು ಆಟೋ ರಿಕ್ಷಾ ಮತ್ತು ಮೋಟಾರ್‌ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ. ಆನಂದ ಪಟ್ಟಣ ಮತ್ತು ತಾರಾಪುರದ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಆಟೋ ರಿಕ್ಷಾದಲ್ಲಿದ್ದ (Auto Rickshaw) ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರಿನ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ರಕ್ಷಾಬಂಧನವನ್ನು ಆಚರಿಸಿ ಹಿಂತಿರುಗುತ್ತಿದ್ದಾಗ ಆನಂದ್ ಜಿಲ್ಲೆಯ ಸೋಜಿತ್ರಾ ಬಳಿ ಈ ಅಪಘಾತ ಸಂಭವಿಸಿದೆ. ಎಸ್‌ಯುವಿ ಕಾರು ಚಾಲನೆ ಮಾಡುತ್ತಿದ್ದ ಕೇತನ್ ರಮಣ್‌ಭಾಯ್ ಪಾಧಿಯಾರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ: Accident: ಭೀಕರ ಅಪಘಾತ; ಭತ್ತದ ಗದ್ದೆಯಿಂದ ಮನೆಗೆ ಹಿಂದಿರುಗುತ್ತಿದ್ದ 8 ಮಹಿಳಾ ಕೃಷಿ ಕಾರ್ಮಿಕರು ಸಾವು
ಆನಂದ್‌ನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ಮಾತನಾಡಿ, ಆನಂದ್‌ನಲ್ಲಿ ರಾತ್ರಿ 7 ಗಂಟೆಗೆ ಕಾರು, ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಆಟೋದಲ್ಲಿದ್ದ ನಾಲ್ವರು ಹಾಗೂ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದ್ದಾರೆ.
Gujarat | Six people died in an accident that took place between a car, bike & auto rickshaw at around 7pm in Anand. Four people on the auto & two on bike died on spot & driver of the car is under treatment in a hospital. Investigating underway: Abhishek Gupta, ASP Anand (11.08) pic.twitter.com/PGWkHgAT8L
— ANI (@ANI) August 11, 2022
ಅಪಘಾತದಲ್ಲಿ ವಿನಾ ವಿಪುಲ್ ಮಿಸ್ತ್ರಿ (44) ಮತ್ತು ಆಕೆಯ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಾದ ಜಿಯಾ (14) ಮತ್ತು ಜಾನ್ವಿ (17) ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ರಿಕ್ಷಾ ಚಾಲಕ ಯಾಸಿನ್ ಮೊಹಮ್ಮದ್ ವೋಹ್ರಾ (38) ಕೂಡ ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿದ್ದ ಯೋಗೇಶ್ ರಾಜೇಶ್ ಓಡ್ (20) ಮತ್ತು ಸಂದೀಪ್ ಠಾಕೂರ್ ಓಡ್ (19) ಸಹ ಸೋಜಿತ್ರಾದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Published On - 11:30 am, Fri, 12 August 22