Crime News: ಸೊಸೆಯ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಅತ್ತೆ!
ಮೃತ ಮಹಿಳೆ ತನ್ನ ಗಂಡನ ಸಾವಿನ ನಂತರ ಮಲ್ಲಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದರಿಂದ ಕೋಪಗೊಂಡಿದ್ದ ಅತ್ತೆ ತನ್ನ ಸೊಸೆಗೆ ಸದಾ ಬೈಯುತ್ತಿದ್ದರು.
ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಸೊಸೆಯ ಕತ್ತರಿಸಿ, ಆ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ (Andhra Pradesh) ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ಆಸ್ತಿ ವಿವಾದಕ್ಕೆ (Property Dispute) ಸಂಬಂಧಿಸಿದಂತೆ ತನ್ನ ಸೊಸೆ ವಸುಂಧರಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಶರಣಾಗಲು ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಅಣ್ಣಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಹರ್ಷವರ್ಧನ್ ರಾಜು ಪ್ರಕಾರ, ಆರೋಪಿಗಳು ಆಸ್ತಿ ವಿವಾದದಿಂದಾಗಿ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾರೆ. ಮೃತ ಮಹಿಳೆ 35 ವರ್ಷದವರಾಗಿದ್ದು, ಆಕೆಯ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೃತ ಮಹಿಳೆಗೆ ಇಬ್ಬರು ಪುತ್ರಿಯರಿದ್ದು, ಪತಿ ಮೃತಪಟ್ಟಿದ್ದರು. ಆರೋಪಿ ವೃದ್ಧೆ ತನ್ನ ಮಗ ಸಾವನ್ನಪ್ಪಿದ ನಂತರ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಅತ್ತೆ-ಸೊಸೆ ನಡುವೆ ಆಸ್ತಿಯ ವಿಷಯಕ್ಕೆ ಜಗಳ ನಡೆಯುತ್ತಿತ್ತು.
ಇದನ್ನೂ ಓದಿ: Crime News: 22ರ ಯುವತಿ ಜೊತೆ ಅನೈತಿಕ ಸಂಬಂಧ: ಹೆಂಡ್ತಿಯ ಚಿನ್ನ ಕದ್ದು ಪ್ರೇಯಸಿಗೆ ನೀಡ್ತಿದ್ದ ಗಂಡ ಅರೆಸ್ಟ್..!
ಮೃತ ಮಹಿಳೆ ತನ್ನ ಗಂಡನ ಸಾವಿನ ನಂತರ ಮಲ್ಲಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದರಿಂದ ಕೋಪಗೊಂಡಿದ್ದ ಅತ್ತೆ ತನ್ನ ಸೊಸೆಗೆ ಸದಾ ಬೈಯುತ್ತಿದ್ದರು. ಅವರ ಸಂಸಾರದಲ್ಲಿ ಹಲವು ರೀತಿಯ ಅನಾಹುತಗಳು ನಡೆಯುತ್ತಿದ್ದವು ಎಂದು ಅಣ್ಣಮಯ್ಯ ಜಿಲ್ಲಾ ಎಸ್‌ಪಿ ಹೇಳಿದ್ದಾರೆ.
ಆ ವೃದ್ಧೆ ಕುವೈತ್‌ಗೆ ಹೋಗಿ ಸಾಕಷ್ಟು ಆಸ್ತಿಯನ್ನು ಸಂಪಾದಿಸಿದ್ದರು. ಹಾಗಾಗಿ, ಸೊಸೆ ತನ್ನ ಆಸ್ತಿಯನ್ನು ಬಾಯ್ಫ್ರೆಂಡ್ಗೆ ಕೊಡಬಹುದು ಎಂಬ ಆತಂಕ ಆಕೆಗಿತ್ತು. ಇದರಿಂದ ಆರೋಪಿ ವೃದ್ಧೆ ತನ್ನ ಮೊಮ್ಮಗಳಿಗೆ ಅನ್ಯಾಯವಾಗಬಹುದೆಂಬ ಭಯದಿಂದ ತನ್ನ ಸೊಸೆ ಹಾಗೂ ಆಕೆಯ ಗೆಳೆಯನನ್ನು ಮನೆಗೆ ಕರೆದು ಇತ್ತೀಚೆಗಷ್ಟೇ ಛೀಮಾರಿ ಹಾಕಿದ್ದರು. ಇದನ್ನು ಅರಗಿಸಿಕೊಳ್ಳಲಾಗದೆ ಅತ್ತೆ- ಸೊಸೆ ನಡುವೆ ವಾಗ್ವಾದ ನಡೆದಿದೆ. ಅದಾದ ಬಳಿಕ ಆಕೆ ತನ್ನ ಸೊಸೆಯನ್ನು ಕೊಲೆ ಮಾಡಿದ್ದಾಳೆ. ನಂತರ ಆಕೆ ತಾನು ಕತ್ತರಿಸಿದ ಸೊಸೆಯ ತಲೆಯನ್ನು ಹಿಡಿದು ಪೋಲೀಸ್ ಠಾಣೆಗೆ ಬಂದಿದ್ದಾಳೆ.
ಇದನ್ನೂ ಓದಿ: Murder: ಪ್ರೀತಿಸಿ ಮದುವೆಯಾದ ಮಗಳು- ಅಳಿಯನನ್ನು ಕೊಚ್ಚಿ ಕೊಂದ ತಂದೆ
ತನ್ನ ಸೊಸೆಯಿಂದ ಮೊಮ್ಮಗಳಿಗೆ ಅನ್ಯಾಯವಾಗಬಹುದು ಎಂಬ ಭಯದಿಂದ ಈ ರೀತಿ ಮಾಡಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ತಾನು ಕೊಲೆ ಮಾಡಿದ ನಂತರ ಆಘಾತಗೊಂಡಿದ್ದ ಆ ಮಹಿಳೆ ಈಗಾಗಲೇ ಸತ್ತಿರುವ ತನ್ನ ಸೊಸೆ ಎದ್ದುಬಂದು ತನ್ನನ್ನು ಕೊಲೆ ಮಾಡಬಹುದು ಎಂಬ ಭಯ ಆಕೆಯನ್ನು ಕಾಡುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.