Viral Video: ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಟಿಎಂಸಿ ನಾಯಕನ ಬಂಧನ; ಕಳ್ಳ ಕಳ್ಳ ಎಂದು ಕೂಗಿದ ಜನರು
ಜಾನುವಾರು ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಹಕರಿಸದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅನುಬ್ರತ ಮೊಂಡಲ್ ಅವರನ್ನು ಸಿಬಿಐ ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿತ್ತು.
ಬೋಲ್ಪುರ್: ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಟಿಎಂಸಿ (TMC) ನಾಯಕ ಅನುಬ್ರತ ಮೊಂಡಲ್ (Anubrata Mondal) ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ಕೆಲವೇ ಗಂಟೆಗಳ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) 10 ದಿನಗಳ ಕಸ್ಟಡಿಗೆ ಪಡೆದುಕೊಂಡಿದೆ. ಈ ವೇಳೆ ಅಸನ್ಸೋಲ್‌ನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಅನುಬ್ರತ ಮೊಂಡಲ್ ಅವರನ್ನು ಹಾಜರುಪಡಿಸುವಾಗ ಕೋಪಗೊಂಡ ಸ್ಥಳೀಯರು ಆತನಿಗೆ ಶೂಗಳನ್ನು ತೋರಿಸಿ ‘ಕಳ್ಳ, ಕಳ್ಳ’ ಎಂದು ಕೂಗಿದ್ದಾರೆ.
ಜಾನುವಾರು ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಹಕರಿಸದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಅನುಬ್ರತ ಮೊಂಡಲ್ ಅವರನ್ನು ಸಿಬಿಐ ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿತ್ತು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
#WATCH | West Bengal: Anger in people as they show shoes, shout slogans of ‘chor, chor’ during the production of TMC Birbhum district president Anubrata Mondal in a special CBI court of Asansol. Mondal had been arrested by the CBI in a cattle smuggling case. https://t.co/iE0Ui4xTQ6 pic.twitter.com/Z8yqQWI3JE
— ANI (@ANI) August 11, 2022
ಗುರುವಾರ ಮುಂಜಾನೆ ಬಿರ್ಭೂಮ್ ಜಿಲ್ಲಾಧ್ಯಕ್ಷ ಅನುಬ್ರತ ಅವರ ಮನೆಗೆ ಆಗಮಿಸಿದ ಸಿಬಿಐ ತಂಡವು ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಮೊಂಡಾಲ್ ಅವರನ್ನು ಬಂಧಿಸಲಾಯಿತು. ಜಾನುವಾರು ಕಳ್ಳಸಾಗಣೆ ಹಗರಣದ ತನಿಖೆಗೆ ಸಹಕರಿಸದಿದ್ದಕ್ಕಾಗಿ ನಾವು ಅವರನ್ನು ಬಂಧಿಸಿದ್ದೇವೆ. ಈ ಹಗರಣದಲ್ಲಿ ಮೊಂಡಲ್ ಅವರ ನೇರ ಪಾಲ್ಗೊಳ್ಳುವಿಕೆಯಿದೆ ಎಂಬುದು ದೃಢಪಟ್ಟಿದೆ. ಹೀಗಾಗಿ, ನಾವು ಇಂದು ಅವರನ್ನು ವಿಚಾರಣೆಗೊಳಪಡಿಸುತ್ತಿದ್ದೇವೆ. ಅವರ ವಿರುದ್ಧ ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:08 am, Fri, 12 August 22