Corbevax Vaccine: ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ ಕಾರ್ಬ್ವ್ಯಾಕ್ಸ್ ಲಭ್ಯ; ಬೆಲೆ, ವಿಶೇಷತೆಗಳು ಹೀಗಿವೆ
ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ನ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್ವ್ಯಾಕ್ಸ್ ಅನ್ನು ಅನುಮೋದಿಸಲಾಗಿದೆ.
ನವದೆಹಲಿ: ಇತ್ತೀಚೆಗೆ ಅನುಮೋದಿಸಲಾದ ಬಯೋಲಾಜಿಕಲ್ ಇ ಲಿಮಿಟೆಡ್ (ಬಿಇ)ನ ಕೊವಿಡ್ ಲಸಿಕೆಯಾದ ಕಾರ್ಬ್ವ್ಯಾಕ್ಸ್ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ (ಆಗಸ್ಟ್ 12) ಲಭ್ಯವಾಗಲಿದೆ. ಈ ಕಾರ್ಬ್ವ್ಯಾಕ್ಸ್ ಬೂಸ್ಟರ್ ಡೋಸ್ COWIN ಆ್ಯಪ್ನಲ್ಲಿ ಲಭ್ಯವಿರಲಿದೆ. ಕೋವ್ಯಾಕ್ಸಿನ್ (Covaxin) ಅಥವಾ ಕೋವಿಶೀಲ್ಡ್ನ (Covishield) ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಾದವರಿಗೆ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್ವ್ಯಾಕ್ಸ್ (Corbevax) ಅನ್ನು ಅನುಮೋದಿಸಲಾಗಿದೆ.
ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಕೊವಿಡ್-19 ವರ್ಕಿಂಗ್ ಗ್ರೂಪ್ ಇತ್ತೀಚೆಗೆ ಮಾಡಿದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಬ್ವ್ಯಾಕ್ಸ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ.
ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಜೂನ್ 4ರಂದು 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ COVID-19 ಬೂಸ್ಟರ್ ಡೋಸ್ ಆಗಿ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸಿದ ನಂತರ ಈ ಅನುಮೋದನೆಯನ್ನು ನೀಡಲಾಗಿದೆ.
Corbevax likely to be available at vaccination centres from tomorrow
Read @ANI Story | https://t.co/CqYHT5hUUQ#Corbevax #vaccination #Covid pic.twitter.com/Jn4WeWpxKD
— ANI Digital (@ani_digital) August 11, 2022
ಇದನ್ನೂ ಓದಿ: ಕೊವಿಡ್ ಲಸಿಕೆ ನೀಡಿಕೆಯಲ್ಲಿ 200 ಕೋಟಿ ಮೈಲುಗಲ್ಲು ದಾಟಿದ ಭಾರತ
5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಬಯಾಲಾಜಿಕಲ್ ಇ (Biological E) ಸಂಸ್ಥೆಯ ಕಾರ್ಬ್ವ್ಯಾಕ್ಸ್ (Corbevax) ಲಸಿಕೆಯ ತುರ್ತು ಬಳಕೆಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿತ್ತು. 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ಅನುಮೋದನೆಗಾಗಿ ವಿಷಯ ತಜ್ಞರ ಸಮಿತಿಗೆ ಕಂಪನಿಯಿಂದ ಡೇಟಾವನ್ನು ಸಲ್ಲಿಸಲಾಗಿತ್ತು. ಇತ್ತೀಚೆಗಷ್ಟೆ ವಿಷಯ ತಜ್ಞರ ಸಮಿತಿಯು 12ರಿಂದ 18 ವರ್ಷ ವಯಸ್ಸಿನವರಿಗೆ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿತ್ತು. ಕಾರ್ಬ್ವ್ಯಾಕ್ಸ್ ಲಸಿಕೆಯನ್ನು 5ರಿಂದ 12 ವರ್ಷದೊಳಗಿನವರಿಗಾಗಿ ತಯಾರಿಸಲಾಗಿತ್ತು. ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ (ಬಿಇ) ಇದುವರೆಗೆ 10 ಕೋಟಿ ಡೋಸ್ ಕಾರ್ಬ್ವ್ಯಾಕ್ಸ್ ಅನ್ನು ಕೇಂದ್ರಕ್ಕೆ ತಲುಪಿಸಿದೆ. 12ರಿಂದ 14 ವರ್ಷ ವಯಸ್ಸಿನ ಮಕ್ಕಳಲ್ಲಿ ಬೂಸ್ಟರ್ ಡೋಸ್ ಲಸಿಕೆಯನ್ನು ಪ್ಯಾನ್-ಇಂಡಿಯಾ ರೋಲ್-ಔಟ್ ಮಾರ್ಚ್ 16ರಂದು ಪ್ರಾರಂಭಿಸಲಾಯಿತು. ಇಲ್ಲಿಯವರೆಗೆ ಸುಮಾರು 7 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.
ಇದನ್ನೂ ಓದಿ: Corbevax Vaccine: ಕೊವಿಡ್ ಹೆಚ್ಚಳದ ನಡುವೆ 5ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಬಳಕೆಗೆ ಶಿಫಾರಸು
ಖಾಸಗಿ ಕೊವಿಡ್-19 ಲಸಿಕೆ ಕೇಂದ್ರಗಳಿಗೆ ಕಾರ್ಬ್ವ್ಯಾಕ್ಸ್ನ ಬೆಲೆ ಸರಕು ಮತ್ತು ಮಾರಾಟ ತೆರಿಗೆಯನ್ನು ಒಳಗೊಂಡಂತೆ 250 ರೂ. ಇತ್ತು. ತೆರಿಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳು ಸೇರಿದಂತೆ ಈ ಲಸಿಕೆಯ ಬೆಲೆ 400 ರೂ. ಆಗಿತ್ತು. ಕಾರ್ಬ್ವ್ಯಾಕ್ಸ್ ಆಗಸ್ಟ್ 12ರಿಂದ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಕೋವಿನ್ ಅಪ್ಲಿಕೇಶನ್‌ನಲ್ಲಿ ಬೂಸ್ಟರ್ ಡೋಸ್ ಆಗಿ ಲಭ್ಯವಿರುತ್ತದೆ.