ಪಶ್ಚಿಮ ಬಂಗಾಳದ ಕಳಂಕಿತ ನಾಯಕರ ಮೇಲೆ ಸಾರ್ವಜನಿರ ಆಕ್ರೋಶ; ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾದ ಟಿಎಂಸಿ

ಎಸ್‌ಎಸ್‌ಸಿ ಹಗರಣ ಟಿಎಂಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಾನಿಯನ್ನು ನಿಯಂತ್ರಿಸಲು, ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಸಂತ್ರಸ್ತ ಜನರನ್ನು ಭೇಟಿ ಮಾಡಿ ಅವರಿಗೆ ಉದ್ಯೋಗದ ಭರವಸೆ ನೀಡಿದರು.

ಪಶ್ಚಿಮ ಬಂಗಾಳದ ಕಳಂಕಿತ ನಾಯಕರ ಮೇಲೆ ಸಾರ್ವಜನಿರ ಆಕ್ರೋಶ; ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾದ ಟಿಎಂಸಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 11, 2022 | 3:35 PM

ಶಿಕ್ಷಕರ ನೇಮಕಾತಿ ಹಗರಣದಲ್ಲಿ (Teacher recruitment scam) ಪಶ್ಚಿಮ ಬಂಗಾಳದ (West Bengal)ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರನ್ನು ಬಂಧಿಸಿ ಹದಿನೆಂಟು ದಿನಗಳು ಕಳೆದಿದ್ದು, ಜನರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಜುಲೈ 29 ರಂದು ಚಟರ್ಜಿಯವರನ್ನು ಅವರ ಎಲ್ಲಾ ಸಚಿವಾಲಯಗಳಿಂದ ತೆಗೆದುಹಾಕುವುದಾಗಿ ಮತ್ತು ಪಕ್ಷದಿಂದ ಅಮಾನತುಗೊಳಿಸುವುದಾಗಿ ಘೋಷಿಸಿತು. ಆದಾಗ್ಯೂ, ಸೋಮವಾರ ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದಿಂದ (CBI) ಸಮನ್ಸ್ ಪಡೆದಿರುವ ಬಿರ್ಭೂಮ್ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಅನುಬ್ರತಾ ಮೊಂಡಲ್ ಮೇಲೆ ಸಾರ್ವಜನಿಕರ ಆಕ್ರೋಶ ತೀವ್ರವಾಗಿದೆ. ಮೊಂಡಲ್ ಅವರು ಸಿಬಿಐಗೆ ಪತ್ರ ಬರೆದು, ಆರೋಗ್ಯ ಸಮಸ್ಯೆಯಿಂದಾಗಿ ಬರಲು ಆಗುವುದಿಲ್ಲ ಎಂದಿದ್ದು, ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲು ಏಳು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಲಾಯಿತು. ಆದರೆ ಅವರು ಇನ್ಸ್ಟಿಟ್ಯೂಟ್​​ಗೆ ಪ್ರವೇಶಿಸಿದಾಗ, ಉದ್ರಿಕ್ತ ಜನರ ಗುಂಪು “ಚೋರ್, ಚೋರ್”(ಕಳ್ಳ, ಕಳ್ಳ) ಎಂದು ಘೋಷಣೆ ಕೂಗಿದೆ. ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ವೈದ್ಯಕೀಯ ಮಂಡಳಿ ವರದಿ ನೀಡಿದ್ದು, ಮೊಂಡಲ್ ಅವರನ್ನು ಸಿಬಿಐ ಬುಧವಾರ ಮತ್ತೆ ಸಮನ್ಸ್ ನೀಡಿದೆ.

ಮತ್ತೊಂದೆಡೆ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ನಂತರ, ಪಾರ್ಥ ಚಟರ್ಜಿ ಹೊಂದಿದ್ದ ಕೌನ್ಸಿಲ್ ಕಚೇರಿಯ ಜವಾಬ್ದಾರಿಯನ್ನು ಸೋವಂದೇಬ್ ಚಟರ್ಜಿಗೆ ವರ್ಗಾಯಿಸಲಾಯಿತು. ತೃಣಮೂಲ ಕಾಂಗ್ರೆಸ್ ಪಕ್ಷವಾಗಿ ಈ ವಿಷಯದ ಬಗ್ಗೆ ಮೌನ ವಹಿಸಿದ್ದರೂ, ಹಿರಿಯ ನಾಯಕ ಸೋವಂದೇಬ್ ಅವರು ಪಾರ್ಥ ಬಗ್ಗೆ ಹೇಳಿಕೆ ನೀಡಿದ್ದಾರೆ. ನಾನು ಪಾರ್ಥನನ್ನು ವಿಧಾನಸಭೆಗೆ ಕರೆತಂದಿದ್ದೇನೆ. ಈಗ ಅವರು ಜೈಲಿನಲ್ಲಿದ್ದಾರೆ. ಅವರು ನಿರಪರಾಧಿ ಎಂದು ಸಾಬೀತುಪಡಿಸಿದರೆ ನನಗೆ ಸಂತೋಷವಾಗುತ್ತದೆ ಎಂದಿದ್ದಾರೆ.

ಎಸ್‌ಎಸ್‌ಸಿ ಹಗರಣ ಟಿಎಂಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಹಾನಿಯನ್ನು ನಿಯಂತ್ರಿಸಲು, ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಸಂತ್ರಸ್ತ ಜನರನ್ನು ಭೇಟಿ ಮಾಡಿ ಅವರಿಗೆ ಉದ್ಯೋಗದ ಭರವಸೆ ನೀಡಿದರು. ಸೋಮವಾರ ಪ್ರತಿಭಟನಾಕಾರರ ಗುಂಪು ಬಿಕಾಶ್ ಭವನಕ್ಕೆ (ಶಿಕ್ಷಣ ಸಚಿವಾಲಯದ ಕಚೇರಿ) ಬಂದು ಶಿಕ್ಷಣ ಸಚಿವ ಬ್ರಾತ್ಯ ಬಸು ಕರೆದ ಸಭೆಗೆ ಹಾಜರಾಗಿತ್ತು.

ಇದು ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಸಭೆಯ ನಂತರ ಉದ್ಯೋಗಾಕಾಂಕ್ಷಿಗಳ ಪ್ರತಿನಿಧಿ ಶಾಹಿದುಲ್ಲಾ ಹೇಳಿದರು. ಈ ಕುರಿತು ಚರ್ಚಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೆರಿಟ್ ಲಿಸ್ಟ್‌ನಲ್ಲಿರುವ ಎಲ್ಲರಿಗೂ ಉದ್ಯೋಗ ನೀಡಬೇಕು ಎಂಬ ಬೇಡಿಕೆಯನ್ನು ನಾವು ನೀಡಿದ್ದೇವೆ. ನಾವು ಶಾಂತಿಯುತ ಚಳವಳಿಯನ್ನು ಮುಂದುವರಿಸುತ್ತೇವೆ. ಎಲ್ಲರಿಗೂ ನೇಮಕಾತಿ ಪತ್ರ ಸಿಕ್ಕರೆ ಚಳವಳಿ ಹಿಂಪಡೆಯಲಾಗುವುದು. ಈ ಬಗ್ಗೆ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದಿದ್ದಾರೆ .

ತೃಣಮೂಲ ವಕ್ತಾರ ಕುನಾಲ್ ಘೋಷ್ ಅವರು ಪಾರ್ಥ ಚಟರ್ಜಿ ಅವರ ಬಂಧನದ ಬಗ್ಗೆ ಮಾತ್ರವಲ್ಲದೆ ಪಾರ್ಥ ಚಟರ್ಜಿ ಅವರ ಸಹಾಯಕಿ ಮತ್ತು ನಟಿ ಅರ್ಪಿತಾ ಮುಖರ್ಜಿ ಅವರೊಂದಿಗಿನ ಮಾಜಿ ಸಚಿವರ ವಹಿವಾಟು , ಕೋಟ್ಯಂತರ ರೂಪಾಯಿ ಮತ್ತು ಬೆಲೆಬಾಳುವ ವಸ್ತುಗಳನ್ನು ಇಡಿ ವಶ ಪಡಿಸಿಕೊಂಡಿರುವ ಬಗ್ಗೆ ಮಾತನಾಡಿದ್ದು, ಇವರಲ್ಲಿ ಸುಮ್ಮನಿರುವಂತೆ ಟಿಎಂಸಿ ಆದೇಶಿಸಿದೆ.

ಮೂಲಗಳ ಪ್ರಕಾರ ಪಾರ್ಥ ಚಟರ್ಜಿ ವಿಷಯದಲ್ಲಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ  ಘೋಷ್ ಅವರನ್ನು ಖಂಡಿಸಿದ್ದಾರೆ. “ನಾನು ಬೊರೊಲಿನ್ ಅನ್ನು ನಂಬುತ್ತೇನೆ. ಜೀವನದ ಏರಿಳಿತಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಪಕ್ಷದ ನಿಷ್ಠಾವಂತ ಸಿಪಾಯಿ, ಪಕ್ಷ ಹೇಳುವುದನ್ನು ಕೇಳಲು ಬದ್ಧನಾಗಿದ್ದೇನೆ. ಆದರೆ, ನನ್ನ ಅಭಿಪ್ರಾಯವನ್ನು ಹೇಳುವುದನ್ನು ಏಕೆ ನಿಷೇಧಿಸಲಾಗಿದೆ ಎಂಬುದು ನನಗೆ ಸ್ಪಷ್ಟವಾಗಿಲ್ಲ ಎಂದು ಘೋಷ್ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ  ಇಲ್ಲಿ ಕ್ಲಿಕ್ ಮಾಡಿ