ACB ಬೇಡವೆಂಬ ಹೈಕೋರ್ಟ್ ಆದೇಶದ ಬಗ್ಗೆ ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು?

TV9 Digital Desk

| Edited By: Ayesha Banu

Updated on:Aug 11, 2022 | 7:22 PM

ಸರ್ಕಾರದ ದೋಷಗಳನ್ನು ಮುಚ್ಚಿಹಾಕಲು ಎಸಿಬಿ ರಚಿಸಲಾಗಿತ್ತು. ನನಗೆ ಲೋಕಾಯುಕ್ತ, ಎಸಿಬಿ ಅನ್ನೋದು ಮುಖ್ಯ ಅಲ್ಲ. ಇಂದಿನ ರಾಜ್ಯ ಸರ್ಕಾರದ ಚಿಂತನೆ ಏನಿದೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ACB ಬೇಡವೆಂಬ ಹೈಕೋರ್ಟ್ ಆದೇಶದ ಬಗ್ಗೆ ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ಹೇಳಿದ್ದೇನು?
ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: 2016ರಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆ ಸ್ಥಾನಮಾನ ತೆಗೆದು ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.

ಸರ್ಕಾರದ ದೋಷಗಳನ್ನು ಮುಚ್ಚಿಹಾಕಲು ಎಸಿಬಿ ರಚಿಸಲಾಗಿತ್ತು. ನನಗೆ ಲೋಕಾಯುಕ್ತ, ಎಸಿಬಿ ಅನ್ನೋದು ಮುಖ್ಯ ಅಲ್ಲ. ಇಂದಿನ ರಾಜ್ಯ ಸರ್ಕಾರದ ಚಿಂತನೆ ಏನಿದೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ತಮ್ಮ ವಿರುದ್ಧದ ಆರೋಪ ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರ ಎಸಿಬಿಯನ್ನು ರಚಿಸಿತ್ತು. ಎಸಿಬಿ ರದ್ದುಗೊಳಿಸಲು ನನಗೆ ಪೂರ್ಣ ಅಧಿಕಾರ ಇರಲಿಲ್ಲ. ಈಗಿನ ಬಿಜೆಪಿ ಸರ್ಕಾರವೂ ಎಸಿಬಿ ರದ್ದತಿಗೆ ಆಸಕ್ತಿ ತೋರಲಿಲ್ಲ. ಲೂಟಿ ಹೊಡೆಯುವವರಿಗೆ ಸರ್ಕಾರ ಬೆಂಬಲ ನೀಡ್ತಿದೆ. ಈ ಸಂಬಂಧ ಸಾಕಷ್ಟು ಉದಾಹರಣೆ, ದಾಖಲೆ ಕೊಡಬಲ್ಲೆ. ಲೋಕಾಯುಕ್ತದಿಂದಲೂ ಭ್ರಷ್ಟಾಚಾರ ಮುಕ್ತವಾಗುವ ನಂಬಿಕೆ ಇಲ್ಲ.

ಲೋಕಾಯುಕ್ತದಲ್ಲಿ ಯಾವ ರೀತಿ ವ್ಯವಸ್ಥೆ ಇದೆ ಅಂತ ರಾಜಕೀಯಕ್ಕೆ ಒಳಗಾಗದ ಜನ ಅನುಭವಿಸುತ್ತಿದ್ದಾರೆ ಅಂತ ನಾವು ನೋಡ್ತಿದ್ದೇವೆ. ಅಂದು ಬಿಜೆಪಿಯ ಹಲವಾರು ದಾಖಲೆಗಳನ್ನು ಬಿಡುಗಡೆ ಮಾಡಿದ್ದು ಜನತಾ ಪಕ್ಷ. ನಾನೇ ಅದರ ಮುಂಚೂಣಿಯಲ್ಲಿದ್ದೆ. ಇವತ್ತು ರಾಜ್ಯ ಸರ್ಕಾರದ ಚಿಂತನೆ ಏನಿದೆ ಅಂತ ಕೂಡ ಗೊತ್ತಿದೆ. ನನಗೆ ಲೋಕಾಯುಕ್ತ, ಎಸಿಬಿ ಅನ್ನೋದು ಮುಖ್ಯ ಅಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಲೋಕಾಯುಕ್ತದ ಮೇಲೂ ಅಪನಂಬಿಕೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ಆದೇಶ ಗೌರವಿಸುತ್ತೇವೆ

ಇನ್ನು ಮತ್ತೊಂದು ಕಡೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹೈಕೋರ್ಟ್ ಆದೇಶ ಗೌರವಿಸುತ್ತೇವೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದಲ್ಲಿ ಹೇಳಿದ್ರು. ಎಸಿಬಿಯ ಪ್ರಕರಣಗಳು ಲೋಕಾಯುಕ್ತಕ್ಕೆ ಹೋಗುತ್ತವೆ. ಬೇರೆ ರಾಜ್ಯಗಳಲ್ಲೂ ಎಸಿಬಿ ಇದೆ. ಹೈಕೋರ್ಟ್ ಆದೇಶ ನೋಡಿ ಬಳಿಕ ಮಾತನಾಡುತ್ತೇನೆ ಎಂದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada