ಕಾಶ್ಮೀರದಲ್ಲಿ ಮತ್ತೊಂದು ದಾಳಿ; ಬಂಡಿಪೊರಾದಲ್ಲಿ ಬಿಹಾರದ 19 ವರ್ಷದ ಕಾರ್ಮಿಕನನ್ನು ಗುಂಡಿಕ್ಕಿ ಹತ್ಯೆ
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅಮ್ರೇಜ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಡಿಪೊರಾ: ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಬಿಹಾರದ (Bihar) ವಲಸೆ ಕಾರ್ಮಿಕನನ್ನು ಭಯೋತ್ಪಾದಕರು (Terrorists) ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಅಮ್ರೇಜ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ತೀವ್ರ ಗಾಯದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 12.20ರ ಸುಮಾರಿಗೆ ನನ್ನ ಸಹೋದರ ನನ್ನನ್ನು ಎಬ್ಬಿಸಿದನು. ಅಷ್ಟರಲ್ಲಾಗಲೇ ಗುಂಡಿನ ದಾಳಿ ಪ್ರಾರಂಭವಾಗಿತ್ತು. ಅವನು ಎಲ್ಲೂ ಕಾಣಲಿಲ್ಲ. ಆಗ ಅವನು ಶೌಚಾಲಯಕ್ಕೆ ಹೋಗಿದ್ದಾನೆಂದು ನಾವು ಭಾವಿಸಿದೆವು. ನಾವು ಅದನ್ನು ಪರಿಶೀಲಿಸಲು ಹೋದೆವು. ಅವರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ನಾವು ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿದೆವು. ಅವರನ್ನು ಹಜಿನ್‌ಗೆ ಕರೆತರಲಾಯಿತು. ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ಮೃತನ ಸಹೋದರ ಪೊಲೀಸರಿಗೆ ಹೇಳಿದ್ದಾರೆ.
ಇದನ್ನೂ ಓದಿ: ಕಾಶ್ಮೀರದ ರಾಜೌರಿಯ ಸೇನಾ ನೆಲೆ ಮೇಲೆ ಆತ್ಮಾಹುತಿ ದಾಳಿ; ಮೂವರು ಸೈನಿಕರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ
ರಾಜೌರಿ ಜಿಲ್ಲೆಯ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ನಾಲ್ವರು ಯೋಧರನ್ನು ಕೊಂದ ಬೆನ್ನಲ್ಲೇ ಈ ದಾಳಿ ನಡೆದಿದೆ. ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯವರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ 2 ಗಂಟೆಗೆ ಪ್ರಾರಂಭವಾದ ನಾಲ್ಕು ಗಂಟೆಗಳ ಗುಂಡಿನ ಕಾಳಗದ ನಂತರ ಕಾರ್ಮಿಕನನ್ನು ಹೊಡೆದುರುಳಿಸಲಾಗಿದೆ. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ 4 ದಿನಗಳಿರುವಾಗಲೇ ಈ ದಾಳಿ ನಡೆದಿದೆ.
During intervening night, #terrorists fired upon & injured one outside #labourer Mohd Amrez S/O Mohd Jalil R/O Madhepura Besarh #Bihar at Soadnara Sumbal, #Bandipora. He was shifted to hospital for treatment where he succumbed.@JmuKmrPolice
— Kashmir Zone Police (@KashmirPolice) August 12, 2022
ಈ ವರ್ಷದ ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ್ ಬ್ಯಾಂಕ್ ಉದ್ಯೋಗಿ ರಾಹುಲ್ ಭಟ್‌ನನ್ನು ಕೊಂದ ಲತೀಫ್ ರಾಥರ್ ಸೇರಿದಂತೆ ಮೂವರು ಭೀಕರ ಲಷ್ಕರ್-ಎ-ತೊಯ್ಬಾ ಉಗ್ರರು ಬುಧವಾರ ಬುದ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಲಾಗಿತ್ತು.