Independence Day 2022: ರಾಷ್ಟ್ರ ಪ್ರೇಮ ಮೂಡಿಸಿದ ವಿದ್ಯಾರ್ಥಿಗಳ ಭಾಷಣ, ನೀವು ಮಾಡುವ ಭಾಷಣದಲ್ಲಿ ಈ ಎಲ್ಲ ವಿಷಯಗಳು ಇರಲಿ

Independence Day 2022: ಪ್ರತಿ ವರ್ಷ ಶಾಲೆಗಳಲ್ಲಿ ವಿಶೇಷ ಪ್ರದರ್ಶನಗಳು ಮತ್ತು ಸ್ಪರ್ಧೆಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಆಗಸ್ಟ್ 15 ಬಂದರೆ ಸಾಕು ಎಲ್ಲಿಲ್ಲದ ಆಸಕ್ತಿ. ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅನೇಕ ರೀತಿಯ ವಿಚಾರಗಳನ್ನು ಇಟ್ಟುಕೊಂಡು ಸಿದ್ಧಗೊಳ್ಳುತ್ತಾರೆ.

Independence Day 2022: ರಾಷ್ಟ್ರ ಪ್ರೇಮ ಮೂಡಿಸಿದ ವಿದ್ಯಾರ್ಥಿಗಳ ಭಾಷಣ, ನೀವು ಮಾಡುವ ಭಾಷಣದಲ್ಲಿ ಈ ಎಲ್ಲ ವಿಷಯಗಳು ಇರಲಿ
Independence Day
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Aug 12, 2022 | 12:40 PM

75 ವರ್ಷಗಳ ಸ್ವಾತಂತ್ರ್ಯವನ್ನು ಸ್ಮರಿಸಲು ಮತ್ತು ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಆಚರಿಸಲು ಸರ್ಕಾರವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಪ್ರಾರಂಭಿಸಿತು.  ಭಾರತದ ಧ್ವಜವನ್ನು ಮನೆಗೆ ತರಲು ಮತ್ತು ಅದನ್ನು ಹಾರಿಸಲು ಜನರನ್ನು ಉತ್ತೇಜಿಸಲು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ‘ಹರ್ ಘರ್ ತಿರಂಗ’ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ. ಪ್ರತಿ ವರ್ಷ ಶಾಲೆಗಳಲ್ಲಿ ವಿಶೇಷ ಪ್ರದರ್ಶನಗಳು ಮತ್ತು ಸ್ಪರ್ಧೆಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಆಗಸ್ಟ್ 15 ಬಂದರೆ ಸಾಕು ಎಲ್ಲಿಲ್ಲದ ಆಸಕ್ತಿ. ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಸ್ಪರ್ಧೆಯಲ್ಲಿ ಭಾಗವಹಿಸಲು ಅನೇಕ ರೀತಿಯ ವಿಚಾರಗಳನ್ನು ಇಟ್ಟುಕೊಂಡು ಸಿದ್ಧಗೊಳ್ಳುತ್ತಾರೆ. ಶಾಲೆಯಲ್ಲಿ ಸ್ವಾತಂತ್ರ್ಯ ದಿನ ಮೊದಲ 3 ದಿನಗಳಲ್ಲಿ ಶಿಕ್ಷಕರು ಮಕ್ಕಳಿಗೆ ಭಾಷಣ ಸ್ಪರ್ಧೆಗಳು, ಪ್ರಬಂಧಗಳು, ಇತ್ಯಾದಿ ಸ್ವರ್ಧೆಗಳಲ್ಲಿ ಏರ್ಪಡಿಸಿರುತ್ತಾರೆ . ಬೇರೆ ಬೇರೆ ರಾಜ್ಯಗಳ ಶಾಲಾಗಳಲ್ಲಿಯೂ  ಇಂತಹ ಸ್ಪರ್ಧೆಗಳನ್ನು ಮಾಡುತ್ತಾರೆ.

ಆದರೆ ಈ ಬಾರಿ ಇದು ವಿಶೇಷವಾಗಿದೆ ಏಕೆಂದರೆ ಭಾರತದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಣೆ ಮಾಡುವ ಸಲುವಾಗಿ ಈ ಬಾರಿ ಮಕ್ಕಳಿಗೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೆಗಳನ್ನು ಮಾಡಿದ್ದರೆ ಮತ್ತು ಅದಕ್ಕಾಗಿ ಮಕ್ಕಳನ್ನು ಈಗಾಗಲೇ ಕೆಲವೊಂದು ಶಾಲೆಗಳು ಸಿದ್ಧ ಮಾಡುತ್ತಿದೆ. ದೇಶದ ಪ್ರಧಾನ ಮಂತ್ರಿಗಳು ಹೇಳಿರುವಂತೆ ಮಕ್ಕಳಿಗೆ ಸ್ವಾತಂತ್ರ್ಯ ಭಾರತದ ಇತಿಹಾಸ ಮತ್ತು ಅವರಲ್ಲಿ ದೇಶ ಭಕ್ತಿಯ ಭಾವನೆ ಹುಟ್ಟಬೇಕು ಎಂಬ ಕಾರಣಕ್ಕೆ ಈ ಬಾರಿಯ ಸ್ವಾತಂತ್ರ್ಯವನ್ನು ವಿಶೇಷವಾಗಿ ಆಚರಣೆ ಮಾಡುವಂತೆ ಹೇಳಿದ್ದಾರೆ.

ಇದಕ್ಕಾಗಿ ಶಿಕ್ಷಣ ಇಲಾಖೆಗಳು ಹಲವು ಯೋಜನೆಗಳನ್ನು ಹಾಕಿಕೊಂಡಿದ್ದು, ಎಲ್ಲ ಶಾಲಾ-ಕಾಲೇಜಿಗಳಿಗೂ ಅಧಿಸೂಚನೆಯನ್ನು ನೀಡಿದೆ. ಈ ಮೂಲಕ ಆಜಾದಿ ಕಾ ಅಮೃತಮಹೋತ್ಸವವನ್ನು ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಅದ್ಧೂರಿಯಾಗಿ ಮತ್ತು ದೇಶ ಪ್ರೇಮ ಹುಟ್ಟುವಂತಹ ಸ್ಫರ್ಧೆಗಳನ್ನು ಏರ್ಪಡಿಸಿರುತ್ತಾರೆ. ಕರ್ನಾಟಕದಲ್ಲೂ ಈ ಬಗ್ಗೆ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಶಾಲಾ ವ್ಯಾಪ್ತಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಸೂಚನೆಯನ್ನು ನೀಡಿದೆ. ಮಕ್ಕಳಿಗೆ ರಾಷ್ಟ್ರೀಯದ ನಾಯಕರು ಮತ್ತು ಸ್ವಾತಂತ್ರ್ಯ ಭಾರತದ ವಿಚಾರಗಳ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ಮಾಡುವಂತೆ ಎಲ್ಲ ಶಾಲೆಗಳಿಗೂ ಆದೇಶವನ್ನು ನೀಡಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಆದೇಶದಂತೆ ಮಕ್ಕಳಿಗೆ ಭಾಷಣ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ಇದನ್ನೂ ಓದಿ
Image
Azadi Ka Amrit Mahotsav: 10 ದಿನಗಳಲ್ಲಿ 1 ಕೋಟಿಗೂ ಅಧಿಕ ರಾಷ್ಟ್ರಧ್ವಜವನ್ನು ಮಾರಾಟ ಮಾಡಿದ ಅಂಚೆ ಇಲಾಖೆ
Image
ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ರೈಲು ದರೋಡೆ ನಡೆಸಿದ ಅಶ್ಫಾಕ್ ಉಲ್ಲಾ ಖಾನ್ ತಮ್ಮ ಪ್ರಾಣ ಸ್ನೇಹಿತನೊಂದಿಗೆ ಗಲ್ಲಿಗೇರಿದರು!
Image
ಆಜಾದಿ ಕಾ ಅಮೃತ್ ಮಹೋತ್ಸವ್: ಇಡೀ ಭಾರತವನ್ನು ಬ್ರಿಟಿಷರು ಆಳುತ್ತಿದ್ದರೂ ಖಾನ್ ಬಹದ್ದೂರ್ ಖಾನ್​ರ ಬರೇಲಿ ಮಾತ್ರ ಸ್ವತಂತ್ರವಾಗಿತ್ತು!
Image
ಆಜಾದಿ ಕಾ ಅಮೃತ್ ಮಹೋತ್ಸವ್: ವೀರಮಹಿಳೆ ಪ್ರೀತಿಲತಾ ತಮ್ಮ ಸಹಚರರನ್ನು ಆಂಗ್ಲರಿಂದ ಬಿಡಿಸಿದ ಬಳಿಕವೇ ವಿಷಸೇವಿಸಿ ಪ್ರಾಣತ್ಯಾಗ ಮಾಡಿದರು!

ಕರ್ನಾಟಕ ಶಿಕ್ಷಣ ಇಲಾಖೆ ಈಗಾಗಲೇ ಆಜಾದಿ ಕಾ ಅಮೃತಮಹೋತ್ಸವ ಸಲುವಾಗಿ ವಿದ್ಯಾರ್ಥಿಗಳ್ಲಲಿ ರಾಷ್ಟ್ರಭಕ್ತಿ ಮತ್ತು ರಾಷ್ಟ್ರೀಯತೆ ಬಗ್ಗೆ ಭಾವನೆ ಮೂಡಿಸಲು ಶಾಲಾ- ಕಾಲೇಜಿನಲ್ಲಿ ಇಲಾಖೆ ತಿಳಿಸಿರುವ ಸ್ಪರ್ಧೆಗಳನ್ನು ಮಾಡಬೇಕು ಎಂದು ಸುತ್ತೋಲೆಯನ್ನು ಹೊರಡಿಸಿದೆ. ಅನುದಾನಿತ ಅನುದಾನ ರಹಿತ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ, ಪದವಿ ಮತ್ತು ಪದವಿ ಪೂರ್ವ ಕಾಲೇಜಿಗಳಲ್ಲಿ ಇಲಾಖೆ ತಿಳಿಸಿರುವ ಸ್ವರ್ಧೆಗಳನ್ನು ನಡೆಸುವಂತೆ ಆದೇಶವನ್ನು ನೀಡಿದೆ.

ಶಿಕ್ಷಣ ಇಲಾಖೆ ತಿಳಿಸಿರುವ ಸ್ವರ್ಧೆಗಳು

1. ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸುವುದು

2. ರಾಷ್ಟ್ರೀಯತೆ ಭಾವನೆ ಮೂಡಿಸುವ ಗಾಯನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುರಿತು ಭಾಷಣ

3. ರಾಷ್ಟ್ರೀಯತೆ ಕುರಿತು ಭಾಷಣ ಮತ್ತು ಗಾಯನ, ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ ಮತ್ತು ಭಾಷಣ

4. ಇನ್ನೂ ಅನೇಕ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಮಾಡುವಂತೆ ಹೇಳಿದೆ, ಇದರ ಜೊತೆಗೆ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಮಾಡುವಂತೆ ತಿಳಿಸಿದ್ದಾರೆ. ಅದರ ಜೊತೆಗೆ ಅವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ನೀಡುವಂತೆ ಹೇಳಿದೆ.

ಸ್ವಾತಂತ್ರ್ಯ ದಿನದ ಭಾಷಣ ಸಲಹೆಗಳು

ಸ್ವಾತಂತ್ರ್ಯ ದಿನದ ಭಾಷಣವನ್ನು ಚಿಕ್ಕದಾಗಿ ಇರಿಸಿ ಏಕೆಂದರೆ ಮಕ್ಕಳು ಸುದೀರ್ಘವಾದದನ್ನು ಕಲಿಯಲು ಸಾಧ್ಯವಾಗದಿರಬಹುದು.

ಭಾಷಣದ ವಿಷಯ ಸರಳವಾಗಿ ಇರಿಸಿ ಇದರಿಂದ ಮಕ್ಕಳು ಕಲಿಯಲು ಸಾಧ್ಯವಾಗುತ್ತದೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮಕ್ಕಳಿಗೆ ನೆನಪಿಲ್ಲದ ಪದಗಳನ್ನು ಹಾಕಬೇಡಿ.

ಭಾಷಣವನ್ನು ದೋಷ ಮುಕ್ತವಾಗಿಸಲು ಅದರಲ್ಲಿ ಸೇರಿಸಲಾದ ಎಲ್ಲಾ ಸಂಗತಿಗಳನ್ನು ಮತ್ತೊಮ್ಮೆ ಕ್ರಾಸ್-ಚೆಕ್ ಮಾಡಿ ಮಕ್ಕಳಿಗೆ ಭಾಷಣದ ಬಗ್ಗೆ ತಿಳಿಸಿ.

ಸ್ವಾತಂತ್ರ್ಯ ದಿನದ ಕಿರು ಭಾಷಣದಲ್ಲಿ ಈ ಅಂಶಗಳು ಇರಲಿ

ಭಾರತವು ಆಗಸ್ಟ್ 15, 1947 ರಂದು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಿತು.

ಭಾರತ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೇವೆ.

ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಆಗಸ್ಟ್ 15, 1947 ರಂದು ದೆಹಲಿಯ ಕೆಂಪು ಕೋಟೆಯ ಲಾಹೋರಿ ಗೇಟ್‌ನ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದರು. ಅಂದಿನಿಂದ, ಇದು ಪ್ರಸ್ತುತ ಪ್ರಧಾನ ಮಂತ್ರಿ ಅನುಸರಿಸುವ ಸಂಪ್ರದಾಯವಾಗಿದೆ, ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್ ಚಂದ್ರ ಬೋಸ್ ಮತ್ತು ಲಕ್ಷಾಂತರ ಜನರ ತ್ಯಾಗವನ್ನು ನಾವು ಮರೆಯಬಾರದು, ಅವರ ಹೆಸರೇ ತಿಳಿದಿಲ್ಲ ಆದರೆ ಅವರು ಭಾರತವನ್ನು ಮುಕ್ತಗೊಳಿಸಲು ಹೋರಾಡಿದರು. ವಸಾಹತುಶಾಹಿ ಆಳ್ವಿಕೆಯಿಂದ. ಭಾರತದ ರಾಷ್ಟ್ರಗೀತೆ ಜನ ಗಣ ಮನವನ್ನು ಮೂಲತಃ ರವೀಂದ್ರನಾಥ ಟ್ಯಾಗೋರ್ ಅವರು ಬಂಗಾಳಿ ಭಾಷೆಯಲ್ಲಿ ಭರೋತೋ ಭಾಗ್ಯೋ ಬಿಧಾತ ಎಂದು ಸಂಯೋಜಿಸಿದ್ದಾರೆ.

ಭಾರತದ ಮೊದಲ ಕಾನೂನು ಮತ್ತು ನ್ಯಾಯ ಮಂತ್ರಿ ಭೀಮರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಮುಖ್ಯ ಶಿಲ್ಪಿ.

ತ್ರಿವರ್ಣ ಅಥವಾ ತಿರಂಗ, ಭಾರತೀಯ ಧ್ವಜವು ಮೂರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿದೆ. ಕೇಸರಿ ಬಣ್ಣವು ಧೈರ್ಯ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆ ಮತ್ತು ಬಿಳಿ ಬಣ್ಣವು ಸತ್ಯ, ಶಾಂತಿ ಮತ್ತು ಪರಿಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ ಮತ್ತು ಅಶೋಕ ಚಕ್ರವು ಧರ್ಮದ ನಿಯಮಗಳನ್ನು (ಸದಾಚಾರ) ಪ್ರತಿನಿಧಿಸುತ್ತದೆ.

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ನಮ್ಮ ಶಾಲೆಯಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ರಾಷ್ಟ್ರೀಯ ಭಾವನೆಯನ್ನು ಮೂಡಿಸುವ ಸ್ವರ್ಧೆಗಳಿದ್ದವು. ತುಂಬಾ ಖುಷಿಯಾಗಿದೆ, ಮತ್ತು ನಮ್ಮ ಶಿಕ್ಷಕರು ಪಾಠದಲ್ಲಿ ಹೇಳಿಕೊಟ್ಟ ರಾಷ್ಟ್ರ ನಾಯಕರ ಸಾಧನೆಗಳ ಬಗ್ಗೆ ಈ ಭಾಷಣದಲ್ಲಿ ನಾನು ಸೇರಿಸಿದೆ. ಭಾರತ ರಾಷ್ಟ್ರದ ಇತಿಹಾಸದ  ಬಗ್ಗೆ ಈ ಮೂಲಕ ನಮಗೆ ತಿಳಿಯುತ್ತಿದೆ. ಇದರಿಂದ ನಮ್ಮಲ್ಲಿ ರಾಷ್ಟ್ರ ಪ್ರೇಮ ಮತ್ತು ಗೌರವ ಇನ್ನೂ ಹೆಚ್ಚಾಗಿದೆ. ಇಂತಹ ಸ್ಪರ್ಧೆಗಳನ್ನು ಸ್ವಾತಂತ್ರ್ಯ ದಿನದಂದು ಮಾತ್ರವಲ್ಲದೆ. ಪ್ರತಿ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ಇದನ್ನು ಅಳವಡಿಸಬೇಕು ಮತ್ತು ದೇಶದ ಬಗ್ಗೆ ಇನ್ನಷ್ಟು ತಿಳಿಸಬೇಕು.

ಪ್ರಥಮ .ಕೆ

ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ, ಮಾಣಿ

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ನಮ್ಮ ಶಾಲೆಯಲ್ಲಿ, ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ರಾಷ್ಟ್ರೀಯ ಭಾವನೆಯನ್ನು ಮೂಡಿಸುವ ಸ್ವರ್ಧೆಗಳು ಇತ್ತು. ನಾನು ಕೂಡ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಹೇಳುವುದೇ ಒಂದು ಅಭಿಮಾನವಾಗಿದೆ. ಅವರ ಬಲಿದಾನದಿಂದ ನಾವು ಇಂದು ಸಂತೋಷದ ಜೀವನ ನಡೆಸುತ್ತಿದ್ದೇವೆ. ಈ ಸ್ಪರ್ಧೆ ತುಂಬಾ ಸಂತೋಷವನ್ನು ನೀಡಿದೆ. ಇದರಿಂದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇನ್ನಷ್ಟು ತಿಳಿದುಕೊಂಡಿದ್ದೇವೆ.

ಯತೀಕ್ಷ

ದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ, ಮಾಣಿ

Published On - 12:29 pm, Fri, 12 August 22