ಆಜಾದಿ ಕಾ ಅಮೃತ್ ಮಹೋತ್ಸವ್: ವೀರಮಹಿಳೆ ಪ್ರೀತಿಲತಾ ತಮ್ಮ ಸಹಚರರನ್ನು ಆಂಗ್ಲರಿಂದ ಬಿಡಿಸಿದ ಬಳಿಕವೇ ವಿಷಸೇವಿಸಿ ಪ್ರಾಣತ್ಯಾಗ ಮಾಡಿದರು!

1930 ರಲ್ಲಿ ಬ್ರಿಟಿಷರುಅ ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಪ್ರೀತಿಲತಾ ದೂರವಾಣಿ ಮತ್ತು ಟೆಲಿಗ್ರಾಫ್‌ಗಳು ಕಚೇರಿ ನಾಶಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾಹಸ ಸಾಮರ್ಥ್ಯಗಳನ್ನು ಕಂಡ ನಂತರ ಸಂಸ್ಥೆಯಲ್ಲಿ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲಾಯಿತು.

ಆಜಾದಿ ಕಾ ಅಮೃತ್ ಮಹೋತ್ಸವ್: ವೀರಮಹಿಳೆ ಪ್ರೀತಿಲತಾ ತಮ್ಮ ಸಹಚರರನ್ನು ಆಂಗ್ಲರಿಂದ ಬಿಡಿಸಿದ ಬಳಿಕವೇ ವಿಷಸೇವಿಸಿ ಪ್ರಾಣತ್ಯಾಗ ಮಾಡಿದರು!
ಪ್ರೀತಿಲತಾ ವಡ್ಡೆದಾರ್
Follow us
TV9 Web
| Updated By: Digi Tech Desk

Updated on: Aug 04, 2022 | 1:51 PM

Azadi ka Amrit Mahotsav | ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಿಳೆಯರು ಸಹ ಪುರುಷ ಸೇನಾನಿಗಳ ಜೊತೆ ಕೈ ಜೋಡಿಸಿದರೆ ಕೆಲವರು ತಮ್ಮ ಸ್ವಂತ ಸಾಮರ್ಥ್ಯದಲ್ಲಿ ಹೋರಾಡಿದರು. ವೀರ ವನಿತೆಯರು (women warriors) ತಾವು ತೋರಿದ ಸಾಹಸ ಮತ್ತು ಪರಾಕ್ರಮಗಳಿಂದ ಭಾರತದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಹೊಸ ಪೀಳಿಗೆಗೆ ಈ ಮಹಾನ್ ಮಹಿಳೆಯರ ಬಗ್ಗೆ ಗೊತ್ತಿರಲಿಕ್ಕಿಲ್ಲ. ಆಜಾದಿ ಕಾ ಅಮೃತ್ ಮಹೋತ್ಸವ (Azadi ka Amrit Mahotsav) ಟಿವಿ 9 ವಿಶೇಷ ಸರಣಿಯಲ್ಲಿ ನಾವು ಅಂಥ ಕ್ರಾಂತಿಕಾರಿ ಮಹಿಳೆಯರ ಬಗ್ಗೆಯೂ ಚರ್ಚಿಸಲಿದ್ದೇವೆ.

ಇವರ ಹೆಸರು ಪ್ರೀತಿಲತಾ ವಡ್ಡೆದಾರ್ (Pritilata Waddedar). ಅವರ ವಯಸ್ಸಿನ ವತಿಯರು ಮದುವೆ-ಗಂಡ-ಮಕ್ಕಳು-ಸಂಸಾರದ ಬಗ್ಗೆ ಕನಸು ಕಂಡರೆ, ಪ್ರೀತಿಲತಾ ಭಾರತಕ್ಕೆ ಸ್ವಾತಂತ್ರ್ಯ ಮತ್ತು ಗೌರವವನ್ನು ಮರಳಿ ಪಡೆಯುವ ಕನಸು ಹೊತ್ತಿದ್ದರು. ಚಿತ್ತಗಾಂಗ್‌ನ ಪರ್ವತ ಪ್ರದೇಶದಲ್ಲಿದ್ದ ದ ಯುರೋಪಿಯನ್ ಕ್ಲಬ್‌ವೊಂದರ ಮುಂದೆ ನೇತಾಡುತ್ತಿರುವ ಬೋರ್ಡ್ ನೋಡಿ ಪ್ರೀತಿಲತಾ ಅವರ ರಕ್ತ ಕೊತಕೊತ ಕುದ್ದಿತ್ತು. ಆ ಬೋರ್ಡ್‌ ಮೇಲೆ ‘ನಾಯಿಗಳು ಮತ್ತು ಭಾರತೀಯರಿಗೆ ಪ್ರವೇಶವಿಲ್ಲ’ (Dogs and Indians are not allowed) ಎಂದು ಬರೆಯಲಾಗಿತ್ತು.

ಪ್ರೀತಿಲತಾ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದರು

ಕ್ರಾಂತಿಕಾರಿ ಪ್ರೀತಿಲತಾ ಜನಿಸಿದ್ದು 5 ಮೇ, 1911 ರಂದು. ಬಾಲ್ಯದಿಂದಲೇ ಅವರು ಓದಿನಲ್ಲಿ ಪ್ರತಿಭಾನ್ವಿತೆಯಾಗಿದ್ದರು. ಪದವಿ ಪಡೆದ ನಂತರ ಅವರು ಚಿತ್ತಗಾಂಗ್‌ನಲ್ಲಿರುವ ಬಾಲಕಿಯರ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರಿಗೆ ಕ್ರಾಂತಿಕಾರಿ ನಾಯಕ ಸೂರ್ಯಸೇನ್‌ ಅವರನ್ನು ಪರಿಚಯಿಸಲಾಯಿತು. ಪ್ರೀತಿಲತಾ ಅವರಿಂದ ಪ್ರಭಾವಿತರಾದರು ಮತ್ತು ಅವರ ಮನಸ್ಸಿನಲ್ಲಿ ಸ್ವಾತಂತ್ರ್ಯದ ಸಂಕಲ್ಪ ಚಿಗುರತೊಡಗಿತು. ಮಾಸ್ಟರ್ ದಾ ಎಂದೇ ಕರೆಸಿಕೊಳ್ಳುತ್ತಿದ್ದ ಸೂರ್ಯಸೇನ್ ಅವರಿಂದ ಪ್ರೀತಿಲತಾ ಶಸ್ತ್ರಾಸ್ತ್ರ ಬಳಸುವ ತರಬೇತಿ ಪಡೆದರು.

ಶಸ್ತ್ರಾಸ್ತ್ರಗಳನ್ನು ಒಂದು ಕಡೆಯಿಂದ ಮತ್ತೊಂದೆಡೆ ಸಾಗಿಸುವ ಕೆಲಸ ಮಾಡಿದರು!

ಸೂರ್ಯಸೇನ್ ಪ್ರೀತಿಲತಾರನ್ನು ತಮ್ಮ ಕ್ರಾಂತಿಕಾರಿ ಗುಂಪು ಯುಗಾಂತರ್‌ಗೆ ಸೇರಿಸಿಕೊಂಡರು. ಆ ಸಮಯದಲ್ಲಿ ಮಹಿಳೆಯೊಬ್ಬಳು ಕ್ರಾಂತಿಕಾರಿ ಗುಂಪಿಗೆ ಸೇರುವುದು ಬಹಳ ದೊಡ್ಡ ವಿಷಯವಾಗಿತ್ತು, ಯುಗಾಂತರ ಗುಂಪಿನಲ್ಲಿದ್ದ ಹಲವಾರು ಸದಸ್ಯರಿಗೆ ಪ್ರೀತಿಲತಾ ತಮ್ಮೊಂದಿಗೆ ಕೆಲಸ ಮಾಡುವುದು ಬೇಡವಾಗಿತ್ತು.

ಅವರು ಆಯುಧಗಳನ್ನು ಬಳಸುವುದೆ ಬೇಡ ಅಂತ ನಿರ್ಧರಿಸಿದ ಬಳಿಕ ಶಸ್ತ್ರಾಸ್ತ್ರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಮತ್ತು ತರುವ ಜವಾಬ್ದಾರಿ ವಹಿಸುವುದಕ್ಕೆ ಎಲ್ಲರ ಸಹಮತಿ ವ್ಯಕ್ತವಾಯಿತು. ಅವರು ಒಬ್ಬ ಮಹಿಳೆಯಾಗಿದ್ದರಿಂದ ಆ ಕೆಲಸವನ್ನು ಸುಲಭವಾಗಿ ಮಾಡಬಹುದು ಬ್ರಿಟಿಷರಿಗೆ ಅನುಮಾನ ಹುಟ್ಟದು ಎಂಬ ಕಾರಣಕ್ಕೆ ಅವರಿಗೆ ಆ ಜವಾಬ್ದಾರಿ ವಹಿಸಲಾಯಿತು.

1930 ರಲ್ಲಿ ಬ್ರಿಟಿಷರುಅ ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಪ್ರೀತಿಲತಾ ದೂರವಾಣಿ ಮತ್ತು ಟೆಲಿಗ್ರಾಫ್‌ಗಳು ಕಚೇರಿ ನಾಶಪಡಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಾಹಸ ಸಾಮರ್ಥ್ಯಗಳನ್ನು ಕಂಡ ನಂತರ ಸಂಸ್ಥೆಯಲ್ಲಿ ಅವರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡಲಾಯಿತು.

ಮೋಸ್ಟ್ ವಾಂಟೆಡ್ ಕ್ರಾಂತಿಕಾರಿಯಾದದ್ದು ಹೀಗೆ!

1932 ರಲ್ಲಿ, ಯುಗಾಂತರ್ ಗುಂಪು ಒಂದ ದೊಡ್ಡ ಕ್ರಾಂತಿಕಾರಿ ಸಂಘಟನೆ ಎನಿಸಿಕೊಂಡಿತ್ತು. ವಿಷಯವೊಂದರ ಚರ್ಚೆಗೆ ಸಂಬಂಧಿಸಿದಂತೆ 1932 ರಲ್ಲಿ, ಪ್ರೀತಿಲತಾ ಮತ್ತು ಇತರ ಕ್ರಾಂತಿಕಾರಿಗಳು ಸೂರ್ಯಸೇನ್ ಅವರನ್ನು ಭೇಟಿಯಾಗಲು ಬಂದರು. ಬ್ರಿಟಿಷರು ಅದರ ಬಗ್ಗೆ ಸುಳಿವು ಪಡೆದು ಅವರ ಮನೆಗೆ ಮುತ್ತಿಗೆ ಹಾಕಿದರು.

ಅಗ ಯುಗಾಂತರ್ ಕ್ರಾಂತಿಕಾರಿಗಳು ಮತ್ತು ಬ್ರಿಟಿಷರ ನಡುವೆ ತೀವ್ರ ಕಲಹ ಶುರುವಾಯಿತು. ಆದಾಗ್ಯೂ ಕ್ರಾಂತಿಕಾರಿಗಳು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಎನ್ಕೌಂಟರ್ ನಂತರ ಬ್ರಿಟಿಷರು ಪ್ರೀತಿಲತಾ ಅವರನ್ನು ‘ಮೋಸ್ಟ್ ವಾಂಟೆಡ್’ ಎಂದು ಘೋಷಿಸಿದರು.

ಪ್ರೀತಿಲತಾ ಅವರ ರಕ್ತ ಕುದಿಯಿತು!

ಬ್ರಿಟಿಷರು ಎಲ್ಲಾ ಕ್ಲಬ್‌ ಮುಂದೆ ‘ಡಾಗ್ಸ್ ಅಂಡ್ ಇಂಡಿಯನ್ಸ ನಾಟ್ ಅಲೌಡ್’ ಎಂಬ ಬೋರ್ಡನ್ನು ನೇತು ಹಾಕಿದ್ದ ಕಾಲವದು. ಚಿತ್ತಗಾಂಗ್‌ನ ಪಹರ್ತಲಿ ಯುರೋಪಿಯನ್ ಕ್ಲಬ್ ಅಂಥವುಗಳಲ್ಲಿ ಒಂದಾಗಿತ್ತು. ಪ್ರೀತಿಲತಾ ಅವರಿಗೆ ವಿಷಯ ಗೊತ್ತಾದಾಗ ಅವರು ಕೋಪದಿಂದ ಕುದಿಯತೊಡಗಿದರು. ಯುಗಾಂತರ್ ಸಂಸ್ಥೆ ಸಭೆಯಲ್ಲಿ ವಿಚಾರ ಪ್ರಸ್ತಾಪವಾದಾಗ ಆ ಕ್ಲಬ್ ಮೇಲೆ ದಾಳಿ ನಡೆಸಲು ನಿರ್ಧರಿಸಿ ಅದರ ಜವಾಬ್ದಾರಿಯನ್ನು ಪ್ರೀತಿಲತಾ ಅವರಿಗೆ ವಹಿಸಲಾಯಿತು.

ಅವರನ್ನು 40 ಜನರ ಗುಂಪಿನ ನಾಯಕಿಯನ್ನಾಗಿ ನೇಮಕ ಮಾಡಿ ದಾಳಿಯ ರೂಪುರೆತೇಷೆಗಳನ್ನು ಸಿದ್ಧಪಡಿಸಲಾಯಿತು. ಸಂಘಟನೆಯ ಇತರ ಸದಸ್ಯರು ಅದನ್ನು ವಿರೋಧಿಸಿದರೂ ಮಾಸ್ಟರ್ ದಾ ಸೂರ್ಯಸೇನ್ ಅವರಿಗೆ ಪ್ರೀತಿಲತಾ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಪ್ರೀತಿಲತಾ ಅವರ ನಂಬಿಕೆಯನ್ನು ನಿಜವಾಗಿಸಿದರು.

ವಿಷ ಸೇವಿಸಿ ಜೀವ ಬಲಿದಾನ ಮಾಡಿದರು!

ಕ್ಲಬ್ ಮೇಲೆ ದಾಳಿ ಮಾಡಲು ಹೊರಟಾಗ ಪ್ರೀತಿಲತಾ ತಮ್ಮೊಂದಿಗೆ ಪೊಟ್ಯಾಸಿಯಮ್ ಸೈನೈಡ್ ಹೆಸರಿನ ವಿಷವನ್ನು ಸಹ ಇಟ್ಟುಕೊಂಡಿದ್ದರು. 24 ಸೆಪ್ಟೆಂಬರ್, 1932 ರಂದು ಅವರು ಪಂಜಾಬಿ ವೇಷ ಧರಿಸಿಸ ಕ್ಲಬ್ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ಕ್ಲಬ್ನಲ್ಲಿ ಸುಮಾರು 50 ಆಂಗ್ಲರಿದ್ದರು. ಕ್ಲಬ್ ಮೇಲೆ ಒಂದಾದ ನಂತರ ಒಂದರಂತೆ ಹಲವಾರು ಬಾಂಬ್ ಗಳನ್ನು ಎಸೆಯಲಾಯಿತು. ಬಾಂಬ್ ದಾಳಿಯಲ್ಲಿ ಕೆಲ ಬ್ರಿಟಿಷರು ಗಾಯಗೊಂಡರು. ಆ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಪ್ರೀತಿಲತಾ ಅಲ್ಲಿಂದ ಓಡಿಹೋಗಬಹುದಿತ್ತು ಆದರೆ ಅವರಿಗೆ ಅದು ಉಚಿತವೆನಿಸಲಿಲ್ಲ. ಯಾಕೆಂದರೆ ಅವರ ಗುಂಪಿನ ಜನ ಬ್ರಿಟಿಷರ ವಶಕ್ಕೆ ಸಿಕ್ಕಿದ್ದರು. ಹಾಗಾಗಿ ಅವರು ಮೊದಲು ತನ್ನ ಸಹಚರರನ್ನು ಅಲ್ಲಿಂದ ಹೊರತೆಗೆದರು.

ಅಷ್ಟರಲ್ಲಿ ಬ್ರಿಟಿಷರು ಅವರನ್ನು ಸುತ್ತುವರಿದು ಬಿಟ್ಟಿದ್ದರು. ಅವರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಅನ್ನೋದು ಖಚಿತವಾದಾಗ ತಾವು ತಂದಿದ್ದ ಪೊಟಾಶಿಯಂ ಸೈನೈಡ್ ಸೇವಿಸಿ ಪ್ರಾಣತ್ಯಾಗ ಮಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಇತಿಹಾಸದಲ್ಲಿ ಅಮರಳಾದರು. ಈ ದಾಳಿ ಬ್ರಿಟಿಷರ ಮೇಲೆ ದೊಡ್ಡ ಪರಿಣಾಮ ಬೀರಿ ದೇಶದ ಬಹುತೇಕ ಕ್ಲಬ್‌ಗಳ ಮುಂದೆ ನೇತುಹಾಕಿದ್ದ ಅಂಥ ಬೋರ್ಡ್‌ಗಳನ್ನು ತೆಗೆದುಹಾಕಿದರು.