Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭದ್ರತಾ ವೈಫಲ್ಯ: ಪ್ರಿಯಾಂಕಾ ನಿವಾಸಕ್ಕೆ ಕಾರಲ್ಲಿ ಬಂದ ಆಗಂತುಕರು ಮಾಡಿದ್ದೇನು?

ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ರದ್ದು ಮಾಡಿದೆ. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿತ್ತು. ಆದ್ರೂ ಎಸ್​ಪಿಜಿ ಌಕ್ಟ್​​ಗೆ ತಿದ್ದುಪಡಿ ತಂದ ಸರ್ಕಾರ ಗಾಂಧಿ ಕುಟುಂಬದ ಭದ್ರತೆಯನ್ನ ಎಸ್​ಪಿಜಿಯಿಂದ ಝಡ್​ ಪ್ಲಸ್​ಗೆ ತಗ್ಗಿಸಿತ್ತು. ಇದ್ರ ನಡುವೆಯೇ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಆಗಂತುಕರು ಏಕಾಏಕಿ ಎಂಟ್ರಿಕೊಟ್ಟು ಆತಂಕ ಸೃಷ್ಟಿಸಿದ್ದಾರೆ. ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಭದ್ರತಾ ವೈಫಲ್ಯ! ಪ್ರಿಯಾಂಕಾ ಗಾಂಧಿ ವಾಸವಿರುವ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಇತ್ತೀಚೆಗೆ ಭದ್ರತಾ […]

ಭದ್ರತಾ ವೈಫಲ್ಯ: ಪ್ರಿಯಾಂಕಾ ನಿವಾಸಕ್ಕೆ ಕಾರಲ್ಲಿ ಬಂದ ಆಗಂತುಕರು ಮಾಡಿದ್ದೇನು?
Follow us
ಸಾಧು ಶ್ರೀನಾಥ್​
|

Updated on: Dec 03, 2019 | 6:54 AM

ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ರದ್ದು ಮಾಡಿದೆ. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿತ್ತು. ಆದ್ರೂ ಎಸ್​ಪಿಜಿ ಌಕ್ಟ್​​ಗೆ ತಿದ್ದುಪಡಿ ತಂದ ಸರ್ಕಾರ ಗಾಂಧಿ ಕುಟುಂಬದ ಭದ್ರತೆಯನ್ನ ಎಸ್​ಪಿಜಿಯಿಂದ ಝಡ್​ ಪ್ಲಸ್​ಗೆ ತಗ್ಗಿಸಿತ್ತು. ಇದ್ರ ನಡುವೆಯೇ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಆಗಂತುಕರು ಏಕಾಏಕಿ ಎಂಟ್ರಿಕೊಟ್ಟು ಆತಂಕ ಸೃಷ್ಟಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಭದ್ರತಾ ವೈಫಲ್ಯ! ಪ್ರಿಯಾಂಕಾ ಗಾಂಧಿ ವಾಸವಿರುವ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿ ಇತ್ತೀಚೆಗೆ ಭದ್ರತಾ ವೈಫಲ್ಯ ನಡೆದಿದೆ. ಅಪರಿಚಿತರ ಕಾರೊಂದು ಯಾವುದೇ ಪೂರ್ವಾನುಮತಿ ಇಲ್ಲದೆ, ಪರಿಶೀಲನೆಯೂ ಇಲ್ಲದೆ ನಿವಾಸದ ಪ್ರಾಂಗಣ ಪ್ರವೇಶಿಸಿದ್ದು, ಭದ್ರತೆ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ. ಅಂದ್ಹಾಗೆ ನವೆಂಬರ್ 26ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅನುಮತಿ ಇಲ್ಲದೆ ಪ್ರವೇಶಿಸಿತ್ತು ಆಗಂತುಕರ ಕಾರು: ನ. 26ರಂದು ಅಪರಿಚಿತ ಕಾರೊಂದು ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರೋ ಪ್ರಿಯಾಂಕಾ ಗಾಂಧಿ ನಿವಾಸದ ಕಾಂಪೌಂಡ್ ಪ್ರವೇಶಿಸಿತ್ತು. ಹೀಗೆ ಬಂದ ಕಾರು ಭದ್ರತಾ ಸಿಬ್ಬಂದಿಯ ಪರಿಶೀಲನೆ ಹಾಗೂ ಪೂರ್ವಾನುಮತಿ ಇಲ್ಲದೆ ದಿಢೀರ್ ಅಂತ ಎಂಟ್ರಿಕೊಟ್ಟಿತ್ತು. ಕಾರಿನಲ್ಲಿ ಬಂದವರಲ್ಲಿ ಮೂವರು ಪುರುಷರು, ಮೂವರು ಮಹಿಳೆಯರು ಹಾಗೂ ಬಾಲಕಿ ಇದ್ದಳು. ಕಾರಿನಿಂದ ಇಳಿದ ಈ 7 ಜನರ ಗುಂಪು ಪ್ರಿಯಾಂಕಾ ಗಾಂಧಿ ಬಳಿ ಬಂದು ನಿಮ್ಮ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಉತ್ತರ ಪ್ರದೇಶದಿಂದ ಬಂದಿದ್ದ ಈ ಆಗಂತುಕರು ನೆಚ್ಚಿನ ನಾಯಕಿ ಜೊತೆ ಸೆಲ್ಫಿ ತೆಗೆಸಿಕೊಂಡು ಬಳಿಕ ಅದೇ ಕಾರಿನಲ್ಲಿ ವಾಪಸ್ ಹೋಗಿದ್ದಾರೆ.

ಇಷ್ಟೆಲ್ಲಾ ಆದ್ರೂ ಪ್ರಿಯಾಂಕಾ ಗಾಂಧಿಗೆ ಝೆಡ್​ ಪ್ಲಸ್​ ಭದ್ರತೆ ಒದಗಿಸುವ ಸಿಆರ್​ಪಿಎಫ್​ ಸಿಬ್ಬಂದಿಗೆ ಆಗಂತುಕರು ಬಂದಿರುವ ಬಗ್ಗೆ ಗೊತ್ತೇ ಇರಲಿಲ್ಲ. ಬಳಿಕ ತಪ್ಪಿನ ಅರಿವಾಗಿ ತಕ್ಷಣ ಕಾಪೌಂಡ್​ ಸುತ್ತ ಬಿಗಿಭದ್ರತೆ ನೀಡಿದ್ದಾರೆ. ಅದೇನೇ ಇದ್ರೂ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿ ನಿವಾಸದಲ್ಲಿ ಭಾರಿ ಭದ್ರತಾ ವೈಫಲ್ಯ ನಡೆದಿದೆ. ಅದ್ರಲ್ಲೂ ಕೇಂದ್ರ ಸರ್ಕಾರ ಎಸ್​ಪಿಜಿ ಭದ್ರತೆ ವಾಪಸ್ ಪಡೆದ ಕ್ರಮವನ್ನ ವಿಪಕ್ಷಗಳು ಖಂಡಿಸುತ್ತಿರುವ ಸಮಯದಲ್ಲೇ ಈ ಲೋಪವಾಗಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ
VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ