ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿರಂಪ ಮಾಡಿದ ಪೇದೆ ಸಸ್ಪೆಂಡ್
ಹೈದರಾಬಾದ್: ದೇಶದ ಹಿತಕ್ಕಾಗಿ ಸದಾ ಸಿದ್ದ ಎಂದು ನಿಂತಿರುವ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿ ಕಾನ್ ಸ್ಟೇಬಲ್ ಬೆಕಾಬಿಟ್ಟಿಯಾಗಿ ಹಂಗಾಮ ನಡೆಸಿದ ಘಟನೆ ಹೈದರಾಬಾದನ ಗೋಶಾಲ ರಸ್ತೆಯ ಮೇಲೆ ನಡೆದಿದೆ. ಮದ್ಯದ ನಶೆಯಲ್ಲಿದ್ದ ಫಲಕನುಮಾ ಠಾಣೆಯ ಕಾನ್ ಸ್ಟೇಬಲ್ ಈಶ್ವರಯ್ಯ ನಡುರಸ್ತೆಯಲ್ಲಿ ಅಡ್ಡ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ವಾಹನ ಸವಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೇದೆಯ ಈ ದುರ್ವರ್ತನೆಗೆ ಅಲ್ಲಿನ ಜನ ಬೇಸತ್ತು, ವಿಷಯವನ್ನು ಪೊಲೀಸ್ ಕಮೀಷನರ್ ಗಮನಕ್ಕೆ […]
ಹೈದರಾಬಾದ್: ದೇಶದ ಹಿತಕ್ಕಾಗಿ ಸದಾ ಸಿದ್ದ ಎಂದು ನಿಂತಿರುವ ಪೇದೆಯೊಬ್ಬ ಮದ್ಯದ ಅಮಲಿನಲ್ಲಿ ಹಾಡಿ ಉರುಳಾಡಿ ಬೀದಿಯಲ್ಲಿ ರಂಪಾಟ ಮಾಡಿದ್ದಾರೆ. ಮದ್ಯದ ಮತ್ತಿನಲ್ಲಿ ಕಾನ್ ಸ್ಟೇಬಲ್ ಬೆಕಾಬಿಟ್ಟಿಯಾಗಿ ಹಂಗಾಮ ನಡೆಸಿದ ಘಟನೆ ಹೈದರಾಬಾದನ ಗೋಶಾಲ ರಸ್ತೆಯ ಮೇಲೆ ನಡೆದಿದೆ.
ಮದ್ಯದ ನಶೆಯಲ್ಲಿದ್ದ ಫಲಕನುಮಾ ಠಾಣೆಯ ಕಾನ್ ಸ್ಟೇಬಲ್ ಈಶ್ವರಯ್ಯ ನಡುರಸ್ತೆಯಲ್ಲಿ ಅಡ್ಡ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ. ವಾಹನ ಸವಾರರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಪೇದೆಯ ಈ ದುರ್ವರ್ತನೆಗೆ ಅಲ್ಲಿನ ಜನ ಬೇಸತ್ತು, ವಿಷಯವನ್ನು ಪೊಲೀಸ್ ಕಮೀಷನರ್ ಗಮನಕ್ಕೆ ತಂದಿದ್ದಾರೆ. ಕೂಡಲೆ ಪೊಲೀಸ್ ಕಮೀಷನರ್ ಅಂಜನಿಕುಮಾರ್ ಪೇದೆ ಈಶ್ವರಯ್ಯನನ್ನು ಅಮಾನತ್ತು ಗೊಳಿಸಿದ್ದಾರೆ.
Published On - 5:50 pm, Tue, 3 December 19