ತ್ರಿಶೂರ್ ಪೂರಂ ಹಬ್ಬಕ್ಕೆ ಆಂಬ್ಯುಲೆನ್ಸ್‌ನಲ್ಲಿ ತೆರಳಿದ್ದ ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ತ್ರಿಶೂರ್ ಪೂರಂ ಕೇರಳದಲ್ಲಿ ಆಚರಿಸಲಾಗುವ ದೇವಾಲಯದ ವಾರ್ಷಿಕ ಪ್ರಸಿದ್ಧ ಉತ್ಸವವಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮೋಟಾರು ವಾಹನ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುರೇಶ್ ಗೋಪಿ ಅವರು ಪೊಲೀಸರು ಹಾಕಿರುವ ನಿರ್ಬಂಧಗಳನ್ನು ಉಲ್ಲಂಘಿಸಿ, ಪೂರಂ ಸ್ಥಳ ತಲುಪಲು ಆಂಬ್ಯುಲೆನ್ಸ್ ಬಳಸಿಕೊಂಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿ ಸ್ಥಳೀಯ ಸಿಪಿಐ ಮುಖಂಡ ಕೆ.ಪಿ.ಸುಮೇಶ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ತಮ್ಮ ಕಾರಿನಲ್ಲಿ ಉತ್ಸವದ ಸ್ಥಳದ ಸಮೀಪಕ್ಕೆ ತಲುಪಿದ್ದೆ. ಈ ವೇಳೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳ ಕೆಲವು ಗೂಂಡಾಗಳು ಕಾರಿನ ಮೇಲೆ ದಾಳಿ ನಡೆಸಿದ್ದರು ಆರೋಪಿಸಿದ್ದಾರೆ. ತಾನು ಆಂಬ್ಯುಲೆನ್ಸ್‌ನಲ್ಲಿ ಉತ್ಸವದ ಸ್ಥಳಕ್ಕೆ ತಲುಪಿದ್ದೇನೆ ಎಂಬ ಆರೋಪಗಳನ್ನು ಸುರೇಶ್ ಗೋಪಿ ನಿರಾಕರಿಸಿದ್ದಾರೆ.
ಕೆಲವರು ನನ್ನನ್ನು ಅಲ್ಲಿಂದ ರಕ್ಷಿಸಿದ್ದರು, ಉತ್ಸವದ ಸ್ಥಳದಲ್ಲಿದ್ದ ಆಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಹೋದರು ಎಂದು ಸುರೇಶ್ ಗೋಪಿ ಹೇಳಿದ್ದಾರೆ. ಈ ಹಿಂದೆ, ಉತ್ಸವದ ಸ್ಥಳಕ್ಕೆ ಪ್ರಯಾಣಿಸಲು ಆಂಬ್ಯುಲೆನ್ಸ್ ಅನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಗೋಪಿ ಒತ್ತಾಯಿಸಿದರು.
ಮತ್ತಷ್ಟು ಓದಿ: ಇಂದಿರಾ ಗಾಂಧಿಯನ್ನು ಭಾರತ ಮಾತೆ ಎಂದ ಕೇಂದ್ರ ಸಚಿವ ಸುರೇಶ್ ಗೋಪಿ!
ಐಪಿಸಿ ಸೆಕ್ಷನ್ 279 (ವೇಗದ ಚಾಲನೆ ಅಥವಾ ಸಾರ್ವಜನಿಕ ಮಾರ್ಗದಲ್ಲಿ ಸವಾರಿ) ಮತ್ತು 34 (ಸಾಮಾನ್ಯ ಉದ್ದೇಶ ಸಾಧಿಸಲು ಹಲವರು ಸೇರಿ ಮಾಡಿದ ಕೃತ್ಯಗಳು) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 179, 184, 188 ಮತ್ತು 192 ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಿಂದೂ ಭಾವನೆಗಳನ್ನು ಪ್ರಚೋದಿಸುವ ಮೂಲಕ ತ್ರಿಶೂರ್ ಲೋಕಸಭಾ ಸ್ಥಾನ ಗೆಲ್ಲಲು ಬಿಜೆಪಿ ಪ್ರಯತ್ನಿಸಿದೆ ಎಂದು ಕಾಂಗ್ರೆಸ್ ಮತ್ತು ಎಡಪಕ್ಷ ಸಿಪಿಐ ಆರೋಪಿಸಿವೆ. ಪೂರಂಗೆ ಅಡ್ಡಿಪಡಿಸಿದಕ್ಕಾಗಿ ತ್ರಿಶೂರ್ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಳಿಯ ವೇಳೆ ಗೋಪಿ ಅವರ ಕಾಲುಗಳಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ