AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ದಿನದ ಹಸುಗೂಸನ್ನು ಸೇತುವೆಯಿಂದ ಎಸೆದ ಪೋಷಕರು; 50ಕ್ಕೂ ಅಧಿಕ ಗಾಯಗೊಂಡಿದ್ದ ಮಗು ಬದುಕಿದ್ದೇ ರೋಚಕ

ಉತ್ತರ ಪ್ರದೇಶದಲ್ಲಿ ಏಳು ದಿನದ ಹಸುಳೆಯನ್ನು ಪೋಷಕರು ಸೇತುವೆಯಿಂದ ಎಸೆದ ಘಟನೆ ನಡೆದಿದೆ. ಅದೃಷ್ಟವಶಾತ್, ಮಗು ಮರದ ಕೊಂಬೆಯಲ್ಲಿ ಸಿಲುಕಿ ಬದುಕುಳಿದಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಎರಡು ತಿಂಗಳ ಚಿಕಿತ್ಸೆಯ ಬಳಿಕ, ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

7 ದಿನದ ಹಸುಗೂಸನ್ನು ಸೇತುವೆಯಿಂದ ಎಸೆದ ಪೋಷಕರು; 50ಕ್ಕೂ ಅಧಿಕ ಗಾಯಗೊಂಡಿದ್ದ ಮಗು ಬದುಕಿದ್ದೇ ರೋಚಕ
ಅಕ್ಷತಾ ವರ್ಕಾಡಿ
|

Updated on:Nov 03, 2024 | 3:29 PM

Share

ಲಕ್ನೋ: ಕಣ್ಣು ಕೂಡ ತೆರೆಯದ 7 ದಿನದ ಹಸುಳೆಯನ್ನು ಪೋಷಕರು ಸೇತುವೆಯಿಂದ ಎಸೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೇತುವೆಯಿಂದ ಎಸೆದ ಮಗು ಮರದ ಕೊಂಬೆಯೊಂದರಲ್ಲಿ ಸಿಲುಕಿದ್ದು, ಪುಟ್ಟ ಕಂದಮ್ಮನ ಅಳು ಕೇಳಿದ ಸ್ಥಳೀಯರು ರಕ್ಷಿಸಿ ಆಸ್ಪತ್ರೆ ದಾಖಲಿಸಿದ್ದಾರೆ. ಘಟನೆ ನಡೆದ ತಿಂಗಳ ಬಳಿಕ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಮಗುವನ್ನು ಪೊಲೀಸರು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.

ವಿವರಗಳಿಗೆ ಹೋಗುವುದಾದರೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಎರಡು ತಿಂಗಳ ಹಿಂದೆ ಆಗಸ್ಟ್‌ 26ರಂದು ಏಳು ದಿನದ ಮಗುವೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಅಳು ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಮೊದಲು ಹಮೀರ್‌ಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಲಾಲಾ ಲಜಪತಿರಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನವಜಾತ ಶಿಶುವಿನ ದೇಹದಾದ್ಯಂತ 50 ಕ್ಕೂ ಹೆಚ್ಚು ಗಾಯಗಳಾಗಿದ್ದು, ಮೊದಲಿಗೆ ಮಗು ಬದುಕುವುದು ತುಂಬಾ ಕಷ್ಟ ಎಂದು ವೈದ್ಯರು ಭಾವಿಸಿದ್ದರು.

ಇದನ್ನೂ ಓದಿ: ಗಂಡನೊಂದಿಗೆ ಜಗಳವಾಡಿ ಚಲಿಸುತ್ತಿರುವ ರೈಲಿನಿಂದ ಜಿಗಿದ ಮಹಿಳೆ; ಅಘಾತಕಾರಿ ವಿಡಿಯೋ ವೈರಲ್

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮರದ ಕೊಂಬೆ ಮೇಲೆ ಸಿಕ್ಕ ಈ ಹೆಣ್ಣು ಮಗುವಿಗೆ ಕೃಷ್ಣ ಎಂದು ಹೆಸರಿಡಲಾಗಿದೆ. ಪುಟ್ಟ ಮಗುವನ್ನು ಆಸ್ಪತ್ರೆಯ ಸಿಬ್ಬಂದಿಗಳು ತಮ್ಮ ಸ್ವಂತ ಮಗುವಿನಂತೆಯೇ ಆರೈಕೆ ಮಾಡಿದ್ದಾರೆ. ಅಕ್ಟೋಬರ್ 24 ರಂದು, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಿಂದ ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ 2 ತಿಂಗಳಿನಿಂದ ತುಂಬ ನಂಟು ಬೆಳೆಸಿಕೊಂಡ ವೈದ್ಯರು ಮತ್ತು ದಾದಿಯರು ಮಗು ಕೃಷ್ಣನನ್ನು ಬಿಡಲಾರದೆ ಕಣ್ಣೀರು ಹಾಕಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:27 pm, Sun, 3 November 24