ಮಧ್ಯಪ್ರದೇಶದ ಕಾಲೇಜ್ವೊಂದರಲ್ಲಿ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರು ಹೊಡೆದಾಡಿಕೊಂಡ ಘಟನೆ ನಡೆದಿದೆ. ಇದರ ದೃಶ್ಯಗಳು ಸಿಸಿಟಿವಿ (CCTV)ಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಉಜ್ಜಯನಿಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಬ್ರಹ್ಮದೀಪ ಅಲುನೆ ಎನ್ನುವ ಸಹಪ್ರಾಧ್ಯಾಪಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೇಖರ್ ಮೆಡ್ಮಾವರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉಜ್ಜಯಿನಿಯ ಘಟ್ಟಿ ಪ್ರದೇಶದ ದಿವಂಗತ ನಾಗುಲಾಲ್ ಮಾಳವೀಯ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
An assistant professor was booked for allegedly beating up principal of a Government College in Ujjain @ndtv @ndtvindia pic.twitter.com/egom5OIVjA
— Anurag Dwary (@Anurag_Dwary) January 19, 2022
ಎನ್ಡಿಟಿವಿ ವರದಿಯ ಪ್ರಕಾರ, ಜನವರಿ 15 ರಂದು ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಧ್ಯಾಪಕ ಬ್ರಹ್ಮದೀಪ ಅಲುನೆ ಮೇಲೆ ಹಲ್ಲೆ ಆರೋಪವನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ. ಪ್ರಾಂಶುಪಾಲರ ಹೇಳಿಕೆ ಪ್ರಕಾರ ಬ್ರಹ್ಮದೀಪ ಅಲುನೆ ಅವರು ಭೂಪಾಲ್ನಿಂದ ಉಜ್ಜಯನಿ ಕಾಲೇಜಿಗೆ ವರ್ಗಾವಣೆಯಾಗಿದ್ದು ಪ್ರತಿದಿನ 5 ಕಿಮೀ ನಡೆದುಕೊಂಡು ಕಾಲೇಜಿಗೆ ಬರುತ್ತಾರೆ. ಹೀಗೆ ಒಂದು ದಿನ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಸೆಂಟರ್ ತೆರೆಯುವುದರ ಕುರಿತು ಮಾತನಾಡಲು ಕ್ಯಾಬಿನ್ಗೆ ಕರೆಸಿದಾಗ ಕೋಪಗೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಪ್ರಾಧ್ಯಾಪಕ ಬ್ರಹ್ಮದೀಪ ಅಲುನೆ ಪ್ರಾಂಶುಪಾಲರು ಸಿಬ್ಬಂದಿಗಳ ಜತೆ ಅನುಚಿತವಾಗಿ ವರ್ತಿಸುತ್ತಾರೆ. ಈಗಾಗಲೇ ಇವರ ವರ್ತನೆಯಿಂದ ಬೇಸತ್ತು ಇಬ್ಬರು ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದುಕೊಂಡು ಹೋಗಿದ್ದಾರೆ. ಆಫೀಸ್ಗೆ ಕರೆಸಿದ ವೇಳೆ ನನ್ನ ಬಳಿಯೂ ಅನುಚಿತವಾದ ಮಾತುಗಳನ್ನು ಆಡಿದ್ದರು. ಹೀಗಾಗಿ ಹಲ್ಲೆ ನಡೆಯಿತು ಎಂದಿದ್ದಾರೆ.
ಸಿಸಿಟಿವಿ ವಿಡಿಯೋದಲ್ಲಿ ಪ್ರಾಧ್ಯಾಪಕ ಮತ್ತು ಪ್ರಾಂಶುಪಾಲರು ಕುಳಿತು ಮಾತನಾಡುತ್ತಿರುವುದನ್ನು ಕಾಣಬಹುದು ಈ ವೇಳೆ ಒಂದೇ ಸಲಕ್ಕೆ ಎದ್ದು ನಿಂತ ಪ್ರಾಧ್ಯಾಪಕ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಹೊರಗಡೆ ಇದ್ದ ಜನ ಬಂದು ಗಲಾಟೆಯನ್ನು ತಪ್ಪಿಸಿದ್ದಾರೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು ಸಹಾಯಕ ಪ್ರಾಧ್ಯಾಪಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಹೋಮ್ವರ್ಕ್ ಮಾಡಿಸಲು ಮುಂಜಾನೆ 3-4 ಗಂಟೆವರೆಗೆ ಮಕ್ಕಳೊಂದಿಗೆ ಕುಳಿತುಕೊಳ್ಳಬೇಕಾಗಿ ಬರುತ್ತದೆ: ಪ್ರಿಯಾಂಕಾ ಗಾಂಧಿ
Published On - 2:56 pm, Wed, 19 January 22