ಅಂಕೋಲ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕನ ಮಗನ ಗೌಪ್ಯತೆ ಪ್ರಶ್ನಿಸಿದ ಯೂಟ್ಯೂಬ್ ಚಾನಲ್​​ ವಿರುದ್ಧ ಪ್ರಕರಣ ದಾಖಲು

youtube violation: ಅಂಕೋಲದ ಶಿರೂರು ಬಳಿ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕನ ಮಗನ ಗೌಪ್ಯತೆ ಪ್ರಶ್ನಿಸಿದ ಯೂಟ್ಯೂಬ್ ಚಾನಲ್​​ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯೂಟ್ಯೂಬ್ ಚಾನೆಲ್‌ನ ಆ್ಯಂಕರ್ ಲಾರಿ ಚಾಲಕನ ಮಗನಿಗೆ ವೈಯಕ್ತಿವಾಗಿ ನೋವುವಾಗುವಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

ಅಂಕೋಲ ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಚಾಲಕನ ಮಗನ ಗೌಪ್ಯತೆ ಪ್ರಶ್ನಿಸಿದ ಯೂಟ್ಯೂಬ್ ಚಾನಲ್​​ ವಿರುದ್ಧ ಪ್ರಕರಣ ದಾಖಲು
ಅಂಕೋಲಾ, ಶಿರೂರು ಬಳಿ ಗುಡ್ಡ ಕುಸಿತ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 29, 2024 | 11:09 AM

ಕರ್ನಾಟಕದ ಅಂಕೋಲದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ನಾಪತ್ತೆಯಾದ ಕೋಝಿಕೋಡ್‌ನ ಲಾರಿ ಚಾಲಕನ ಮಗನನ್ನು ಯೂಟ್ಯೂಬ್​​​​ ಚಾನಲ್​​​ವೊಂದು ಆತನ ಗೌಪ್ಯತೆ ಬಗ್ಗೆ ಪ್ರಶ್ನೆ ಮಾಡಿದೆ. ದುಃಖದಲ್ಲಿರುವ ಮಗನನ್ನು ಖಾಸಗಿ ವಿಚಾರವಾಗಿ ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯೂಟ್ಯೂಬ್ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಯೂಟ್ಯೂಬ್ ಚಾನೆಲ್‌ನ ಆ್ಯಂಕರ್ ಲಾರಿ ಚಾಲಕನ ಮಗನಿಗೆ ವೈಯಕ್ತಿವಾಗಿ ನೋವುವಾಗುವಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆಯೋಗ ಹೇಳಿದೆ.

ಈ ಬಗ್ಗೆ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಇದೀಗ ಕೇರಳದ ‘ಮಝವಿಲ್ ಕೇರಳ’ ಚಾನೆಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ತನ್ನ ತಂದೆಯ ಬಗ್ಗೆ ಮಾತನಾಡುವಂತೆ ಮಗುವನ್ನು ಒತ್ತಾಯಿಸಿದ ಚಾನೆಲ್‌ನ ಕೃತ್ಯವನ್ನು ಪರಿಗಣಿಸಿ ಆಯೋಗವು ಕ್ರಮ ಕೈಗೊಂಡಿದೆ ಎಂದು ಮೂಲಗಳು ಹೇಳಿದೆ.

ಆಯೋಗವು ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಯೂಟ್ಯೂಬ್ ಚಾನೆಲ್ ಮತ್ತು ಇತರರಿಂದ ಈ ವಿಷಯದ ಬಗ್ಗೆ ವರದಿಗಳನ್ನು ಕೇಳಿದೆ. ಜುಲೈ 16 ರಂದು ಕೋಝಿಕ್ಕೋಡ್‌ನಿಂದ ಮರ ತುಂಬಿದ ಲಾರಿಯನ್ನು ಅರ್ಜುನ್ ಚಾಲನೆ ಮಾಡುತ್ತಿದ್ದಾಗ ಕರ್ನಾಟಕದ ಅಂಕೋಲದ ಶಿರೂರು ಬಳಿ ಭೂಕುಸಿತ ಸಂಭವಿಸಿತ್ತು. ಕಳೆದ 12 ದಿನಗಳಿಂದ ಈ ಲಾರಿ ಚಾಲಕ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಂಕೋಲಾ, ಶಿರೂರು ಬಳಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿದ 9 ಮಂದಿ

ಇನ್ನು ಪತ್ತೆಯಾಗದ ಲಾರಿ ಚಾಲಕನನ್ನು ಹುಡುಕು ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ. ಈಗಾಗಲೇ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯ್​​ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಾರಿ ಚಾಲಕನ್ನು ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ