ಪ್ರಶ್ನೆಗಾಗಿ ನಗದು ಪ್ರಕರಣ: ಮಹುವಾ ಮೊಯಿತ್ರಾ ಸರ್ಕಾರಿ ಮನೆ ತೆರವು ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್
ಮಹುವಾ ಮೊಯಿತ್ರಾ ಅವರಿಗೆ ಸರಕಾರದಿಂದ ಮಂಜೂರಾಗಿದ್ದ ಮನೆಯನ್ನು ಖಾಲಿ ಮಾಡುವಂತೆ ನೊಟೀಸ್ ನೀಡಿಲಾಗಿತ್ತು. ಈ ನೋಟಿಸ್ ವಿರುದ್ಧ ಮಹುವಾ ಮೊಯಿತ್ರಾ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದರು. ಇದೀಗ ಅವರು ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ.
ದೆಹಲಿ, ಜ.4: ಪ್ರಶ್ನೆಗಾಗಿ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ಉಚ್ಚಾಟನೆಗೊಂಡ ಬಳಿಕ ಮಹುವಾ ಮೊಯಿತ್ರಾ (Mahua Moitra) ಅವರಿಗೆ ಸರಕಾರದಿಂದ ಮಂಜೂರಾಗಿದ್ದ ಮನೆಯನ್ನು ಖಾಲಿ ಮಾಡುವಂತೆ ನೊಟೀಸ್ ನೀಡಿಲಾಗಿತ್ತು. ಈ ನೋಟಿಸ್ ವಿರುದ್ಧ ಮಹುವಾ ಮೊಯಿತ್ರಾ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದರು. ಇದೀಗ ಅವರು ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ನಿಮ್ಮ ಮನವಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿ ಎಂದು ಹೇಳಿದೆ.
ಜನವರಿ 7 ರೊಳಗೆ ಮನೆ ಖಾಲಿ ಮಾಡುವ ಸೂಚನೆಯನ್ನು ರದ್ದು ಮಾಡುವಂತೆ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಮನವಿಯನ್ನು ಸಲ್ಲಿಸಿದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಿಮ್ಮ ಮನವಿಯನ್ನು ಜನವರಿ 7 ರೊಳಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸಲ್ಲಿಸಬೇಕು ಎಂದು ಹೇಳಿದೆ. ಜತೆಗೆ ಕಾನೂನಿನ ಪ್ರಕಾರ ಮಾತ್ರ ಮಹುವಾ ಮೊಯಿತ್ರಾ ಅವರನ್ನು ಸರ್ಕಾರಿ ಮನೆಯಿಂದ ಹೊರಹಾಕಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಿತು.
ಈ ಮನಿವಿಯನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ಸುಬ್ರಮೊನಿಯುನ್ ಪ್ರಸಾದ್, ನಿಯಮಗಳ ಪ್ರಕಾರ ಅಧಿಕಾರಿಗಳು ನಿರ್ದಿಷ್ಟ ಅವಧಿಯವರೆಗೆ ಹೆಚ್ಚು ಕಾಲ ಉಳಿಯಲು ಅನುಮತಿ ನೀಡುತ್ತವೆ ಎಂದು ಹೇಳಿದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಇಲಾಖೆ ಡೈರೆಕ್ಟರೇಟ್ ಆಫ್ ಎಸ್ಟೇಟ್ಗೆ ಮನವಿ ಸಲ್ಲಿಸಿ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ: ಪ್ರಶ್ನೆಗಾಗಿ ನಗದು ಆರೋಪದಿಂದ ಹಿಡಿದು ಮಹುವಾ ಮೊಯಿತ್ರಾ ಉಚ್ಛಾಟನೆವರೆಗೆ ಏನೇನಾಯ್ತು?
ಮಹುವಾ ಮೊಯಿತ್ರಾ ಅವರು ಡಿಸೆಂಬರ್ 11 ರಂದು ಡೈರೆಕ್ಟರೇಟ್ ಆಫ್ ಎಸ್ಟೇಟ್ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. 2024ರ ಸಾರ್ವತ್ರಿಕ ಚುನಾವಣೆ ನಡೆಯುವವರೆಗೆ ನಾನು ಈ ಮನೆಯಲ್ಲಿ ಉಳಿಯಲು ಅವಕಾಶ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರ್ಟ್ಗೆ ಮನವಿಯನ್ನು ಸಲ್ಲಿಸಿದರು. ಆದರೆ ಇದು ನಮ್ಮಿಂದ ಸಾಧ್ಯವಿಲ್ಲ, ನೀವು ಡೈರೆಕ್ಟರೇಟ್ ಆಫ್ ಎಸ್ಟೇಟ್ಗೆ ಈ ಮನವಿಯನ್ನು ಸಲ್ಲಿಸಿ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ