ರೈಲ್ವೆ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣ; ಲಾಲು ಪ್ರಸಾದ್ ಯಾದವ್ ವಿರುದ್ಧದ ತನಿಖೆ ಪುನರಾರಂಭಿಸಿದ ಸಿಬಿಐ

| Updated By: ಸುಷ್ಮಾ ಚಕ್ರೆ

Updated on: Dec 26, 2022 | 10:44 AM

ರೈಲ್ವೆ ಯೋಜನೆಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಸಿಬಿಐ ತನಿಖೆಯನ್ನು ಪುನರಾರಂಭಿಸಿದೆ.

ರೈಲ್ವೆ ಯೋಜನೆಯಲ್ಲಿ ಭ್ರಷ್ಟಾಚಾರ ಪ್ರಕರಣ; ಲಾಲು ಪ್ರಸಾದ್ ಯಾದವ್ ವಿರುದ್ಧದ ತನಿಖೆ ಪುನರಾರಂಭಿಸಿದ ಸಿಬಿಐ
ಲಾಲು ಪ್ರಸಾದ್‌ ಯಾದವ್‌
Image Credit source: NDTV
Follow us on

ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಅವರ ಪಕ್ಷ ನಿತೀಶ್‌ ಕುಮಾರ್‌ ಅವರ ಜನತಾ ದಳ ಯುನೈಟೆಡ್‌ (JDU) ಜೊತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಸಿಬಿಐ (CBI) ಲಾಲು ಪ್ರಸಾದ್ ಯಾದವ್ ವಿರುದ್ಧದ ಭ್ರಷ್ಟಾಚಾರ ಪ್ರಕರಣವನ್ನು ಮತ್ತೆ ತೆರೆದಿದೆ. ರೈಲ್ವೆ ಯೋಜನೆಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಸಿಬಿಐ ತನಿಖೆಯನ್ನು ಪುನರಾರಂಭಿಸಿದೆ.

ಇದನ್ನು ‘ರಾಜಕೀಯ ಷಡ್ಯಂತ್ರ’ ಎಂದು ಕರೆಯಲಾಗುತ್ತಿದ್ದು, ಬಿಹಾರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಬಿಹಾರದ ಮಾಜಿ ಮುಖ್ಯಮಂತ್ರಿ ಪಕ್ಷವು ನಿತೀಶ್ ಕುಮಾರ್ ಅವರ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡ ಕೆಲವೇ ತಿಂಗಳ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಇದನ್ನೂ ಓದಿ: Breaking News: ಉದ್ಯೋಗಕ್ಕಾಗಿ ಭೂಮಿ ಹಗರಣ; ಲಾಲು ಪ್ರಸಾದ್ ಯಾದವ್ ಸೇರಿ 15 ಜನರ ವಿರುದ್ಧ ಸಿಬಿಐ ಚಾರ್ಜ್​ಶೀಟ್ ಸಲ್ಲಿಕೆ

ಲಾಲು ಪ್ರಸಾದ್ ಯಾದವ್ ಅವರು ಯುಪಿಎ-1 ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ರೈಲ್ವೆ ಯೋಜನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ್ದರು. 2018ರಲ್ಲಿ ಈ ವಿಷಯದ ಆರಂಭಿಕ ತನಿಖೆ ಪ್ರಾರಂಭವಾಗಿತ್ತು. ಮೇ 2021ರಲ್ಲಿ ಈ ಪ್ರಕರಣದ ತನಿಖೆಯನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ: Lalu Prasad Yadav: ಕಿಡ್ನಿ ಕಸಿಗೆ ಸಿಂಗಾಪುರಕ್ಕೆ ತೆರಳಿದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್

ವರದಿಗಳ ಪ್ರಕಾರ, ಸಿಬಿಐ ಲಾಲು ಪ್ರಸಾದ್ ಅವರ ಪುತ್ರ ತೇಜಸ್ವಿ ಯಾದವ್ ಮತ್ತು ಪುತ್ರಿಯರಾದ ಚಂದಾ ಯಾದವ್ ಮತ್ತು ರಾಗಿಣಿ ಯಾದವ್ ಅವರನ್ನು ಈ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಿದೆ. ಮುಂಬೈನ ಬಾಂದ್ರಾದಲ್ಲಿ ರೈಲು ಭೂಮಿ ಗುತ್ತಿಗೆ ಯೋಜನೆಗಳು ಮತ್ತು ನವದೆಹಲಿ ರೈಲು ನಿಲ್ದಾಣದ ನವೀಕರಣದಲ್ಲಿ ಆಸಕ್ತಿ ಹೊಂದಿದ್ದ ಡಿಎಲ್‌ಎಫ್ ಗ್ರೂಪ್‌ನಿಂದ ಲಾಲು ಪ್ರಸಾದ್ ಯಾದವ್ ದಕ್ಷಿಣ ದೆಹಲಿಯ ಆಸ್ತಿಯನ್ನು ಲಂಚವಾಗಿ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಪ್ರಕರಣ ಇದೀಗ ಮತ್ತೆ ರೀಓಪನ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ